ಬಾಳೆಹಣ್ಣಿನ ಹಲ್ವಾ – ಮಮತಾ ತೋಟೇಶ್

ಮಧ್ಯಾಹ್ನ ಹಲಸಿನ ಬೀಜ, ಮೆಂತ್ಯ ಸೊಪ್ಪಿನ ಸಾರು ಗಡದ್ದಾಗಿ ಉಂಡು.ಇನ್ನೇನ್ ರೆಸ್ಟ್ ಮಾಡೋಣ ಅನ್ನೋ ಹೊತ್ತಿಗೆ ಗಂಡ ಮಾಡಲು ಹೇಳಿದ ಬಾಳೆಹಣ್ಣು ಹಲ್ವಾ ನೆನಪಾಯ್ತು. – ಮಮತಾ ತೋಟೇಶ್, ಬಾಳೆಹಣ್ಣಿನ ಹಲ್ವಾ ಮಾಡೋದು ಹೇಗೆ ಅಂತ ಅಡುಗೆ ತಜ್ಞೆ ಮಮತಾ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಬೇಕಾಗುವ ಪದಾರ್ಥಗಳು: 
ಬಾಳೆಹಣ್ಣು – 20
ಸಕ್ಕರೆ
ಸ್ವಲ್ಪ ತುಪ್ಪ
ಗೋಡಂಬಿ ತುಂಡು

ದೇವ್ರೇ…ಹೆಣ್ಣಿಗೆ ಕೆಲಸ ತಪ್ಪಿದ್ದಲ್ಲ ಅನ್ಕೊಂಡು, ಊರಿಂದ ತಂದ ಬಾಳೆಹಣ್ಣು ತೆಗೆದು ಹಲ್ವಾ ಮಾಡೋಕೆ ಶುರು ಮಾಡಿದೆ. ಒಂದು ಗಂಟೆ ಹದಿನೈದು ನಿಮಿಷ ಆಯ್ತು ಮಾಡಲು. ದೇವ್ರೇ.. ಕೈ ಸೋತು ಹೋಯ್ತು. ಅಂದ್ರು ಮಧ್ಯ ಮಧ್ಯ ಗಂಡ ಮಗ ಬಂದು ಮರದ ಹುಟ್ಟಿನಿಂದ ಹಲ್ವಾ ಕೈ ಆಡಿಸ್ತಾ ಇದ್ರು. ಮಗ ಅಮ್ಮ ಆಯ್ತಾ… ಅಮ್ಮ ಆಯ್ತಾ… ಇಷ್ಟು ಬೇಗ ಎಲ್ಲಿ ಆಗುತ್ತೆ. ಮಾಡಿದ ಮೇಲೆ ತಣಿಬೇಕು. ಆಮೇಲೆ ಕಟ್ ಮಾಡಬೇಕು. ಅಂತೂ ಇಂತೂ ಹಲ್ವಾ ಹದವಾಗಿ ರುಚಿಯಾಗಿ ಬಂತು. ಎಲ್ಲಾ ತರಹದ ಸ್ವೀಟ್ಸ್ ತಿಂದು ಬೇಜಾರಾದಾಗ ಈ ಬಾಳೆಹಣ್ಣಿನ ಹಲ್ವಾ ಮಾಡ್ಕೋ ಬಹುದು.

20 ಬಾಳೆಹಣ್ಣು ಸಿಪ್ಪೆ ಸುಲಿದು ಮಿಕ್ಸಿ ಯಲ್ಲಿ ನುಣ್ಣಗೆ ರುಬ್ಬಿ.. ನಂತರ ದಪ್ಪ ತಳದ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ರುಬ್ಬಿದ ಮಿಶ್ರಣ ಹಾಕಬೇಕು. ಸ್ವಲ್ಪ ತಾಳ್ಮೆ ಬೇಕು ಈ ಸಿಹಿ ಮಾಡಲು… ಹಾಗೇ ಕೈ ಆಡಿಸುತ್ತ ಇರಬೇಕು.. ಮಧ್ಯ ತುಪ್ಪ ಹಾಕುತ್ತ ಮಗಚಬೇಕು. ಅರ್ಧ ಗಂಟೆ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಬೇಕು. ನಂತರ ಈ ಮಿಶ್ರಣ ಇನ್ನೂ ತೆಳು ಆಗುತ್ತೆ. ಈಗ ಸ್ವಲ್ಪ ಮಧ್ಯಮ ಉರಿಯಲ್ಲಿ ಬೇಯಿಸುತ್ತ, ಮಗಚುತ್ತ, ಈ ಮಧ್ಯೆ ಗೋಡಂಬಿ ತುಂಡುಗಳನ್ನ ಸೇರಿಸಬೇಕು. ಮತ್ತೆ ತುಪ್ಪ ಸೇರಿಸುತ್ತ ಗಟ್ಟಿಯಾಗುತ್ತ ಬಂದಾಗ ಕೊನೆಗೊಮ್ಮೆ ತುಪ್ಪ ಸೇರಿಸಿ ಹಲ್ವಾ ಹದಕ್ಕೆ ಬಂದಾಗ ಉರಿ ಆರಿಸಿ ತುಪ್ಪ ಸವರಿದ ತಟ್ಟೆಗೆ ಸುರಿಯಬೇಕು. ಸಮತಟ್ಟು ಮಾಡಿ ತಣ್ಣಗಾಗಲು ಬಿಡಬೇಕು. ಒಂದು /ಎರೆಡು ಗಂಟೆಯ ನಂತರ ಚಾಕುವಿನಿಂದ ಕತ್ತರಿಸಬೇಕು. ರುಚಿಯಾದ ಅಷ್ಟೇ ಅರೋಗ್ಯಕರವಾದ ಹಲ್ವಾ ರೆಡಿ. ಸಕ್ಕರೆ ಬದಲು ಬೆಲ್ಲ ಕೂಡಾ ಸೇರಿಸಬಹುದು.


  • ಮಮತಾ ತೋಟೇಶ್ (ಅಡುಗೆ ಮನೆ ತಜ್ಞೆ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW