ಹೆಸರೇ ಹೇಳುವಂತೆ ಹದಿಹರೆಯ, ಹರೆಯದ ವಯಸ್ಸು. ಈ ವಯಸಿನಲ್ಲಿ ಗಂಡು ಮಕ್ಕಳಿಗಾಗಲಿ ಹೆಣ್ಣು ಮಕ್ಕಳಿಗಾಗಲಿ ವಯೋಸಹಜದಂತೆ ಅವರ ನಡಾವಳಿಕೆ ಇರುತ್ತದೆ. ಆ ಸಂದರ್ಭದಲ್ಲಿ ಬೇಕಾಗುವ ಕೆಲವು ಸಲಹೆಗಳನ್ನ ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಹದಿಹರೆಯ ಹೊರೆಯ?’ ಕುರಿತು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಹರೆಯದ ವಯಸ್ಸಿನ ಗಂಡು ಮಕ್ಕಳಿಗೆ ತಿಳುವಳಿಕೆಯನ್ನು ನೀಡುವಾಗ, ಅವರ ಮನೋಭಾವವನ್ನು ಗಮನದಲ್ಲಿ ಇಟ್ಟುಕೊಂಡು, ತಾಳ್ಮೆಯಿಂದ ಮತ್ತು ಸ್ಪಷ್ಟವಾಗಿ ಮಾತನಾಡುವುದು ಮುಖ್ಯ. ಕೆಲವೊಂದು ಸಲಹೆಗಳು ಇಲ್ಲಿವೆ:
ಅವರಿಗರ್ಥವಾಗುವ ರೀತಿಯಲ್ಲಿ ಸರಳ ಮತ್ತು ಸ್ಪಷ್ಟ ಭಾಷೆ ಬಳಸಬೇಕು. ಅವರು ಹೇಳುವದನ್ನು ಧೈರ್ಯದಿಂದ ಕೇಳಿ. ಇದು ಅವರಿಗೆ ಮನೋಬಲ ಹೆಚ್ಚಿಸುತ್ತದೆ ಹಾಗು ಧೈರ್ಯ ನೀಡುತ್ತದೆ. ನಿಜಜೀವನ ಉದಾಹರಣೆಗಳ ಮೂಲಕ ವಿಷಯವನ್ನು ವಿವರಿಸಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾದ ಮತ್ತು ಸತ್ಯವಾದ ಉತ್ತರ ನೀಡಬೇಕು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಮಹತ್ವವನ್ನು ವಿವರಿಸಬೇಕು. ಅವರೊಂದಿಗೆ ಮಾತನಾಡಲು ಬೇಕಾದಷ್ಟು ಸಮಯವನ್ನು ಹಾಗು ತಾಳ್ಮೆ ಅತ್ಯಗತ್ಯ.
ಈ ಮಾರ್ಗಗಳನ್ನು ಅನುಸರಿಸುವ ಮೂಲಕ ಗಂಡು ಮಕ್ಕಳಿಗೆ ಸರಿಯಾದ ತಿಳುವಳಿಕೆಯನ್ನು ನೀಡಲು ಸಹಾಯ ಮಾಡಬಹುದು. ಹರೆಯದ ವಯಸ್ಸಿನ ಹೆಣ್ಣು ಮಕ್ಕಳಿಗೆ ತಿಳುವಳಿಕೆಯನ್ನು ನೀಡುವಾಗ, ಅವರ ಭಾವನೆಗಳನ್ನು ಮತ್ತು ಸನ್ನಿವೇಶವನ್ನು ಅರ್ಥಮಾಡಿಕೊಂಡು, ಅವರೊಂದಿಗೆ ಚರ್ಚೆಯನ್ನು ನಡೆಸುವುದು ಮುಖ್ಯ.

ಫೋಟೋ ಕೃಪೆ : google
ಕೆಲವು ಸಲಹೆಗಳು:
ಅವರು ತಮ್ಮ ಭಾವನೆಗಳನ್ನು ಮತ್ತು ಪ್ರಶ್ನೆಗಳನ್ನು ಹಂಚಿಕೊಳ್ಳಲು ಆರಾಮದಾಯಕವಾಗಿ ವಾತಾವರಣ ಸೃಷ್ಟಿ ಮಾಡಬೇಕು ಆಗ ಅವರು ಹೆಚ್ಚು ತೆರೆದಮನಸ್ಕರಾಗಿರುತ್ತಾರೆ.
ಅವರ ವಯಸ್ಸಿಗೆ ತಕ್ಕಂತ ಹಂತಗಳಲ್ಲಿ ವಿಷಯವನ್ನು ಪರಿಚಯಿಸಬೇಕು, ಹೀಗೆ ಮಾಡಿದಾಗ ಅವರಿಗೆ ಅರ್ಥವಾಗುವಂತೆ ಮಾಡುತ್ತದೆ. ದೈಹಿಕ ಬದಲಾವಣೆಗಳು ಮತ್ತು ಅದರ ಬಗ್ಗೆ ಪರಿಪೂರ್ಣ ತಿಳುವಳಿಕೆ ನೀಡಬೇಕು. ಉದಾಹರಣೆ: ಮಾಸಿಕ ಧರ್ಮದ (periods) ಬಗ್ಗೆ ವಿವರಿಸಬೇಕು. ದೇಹದ ಬದಲಾವಣೆಗಳನ್ನು ಸಹಜವಾಗಿಯೇ ಸ್ವೀಕರಿಸಲು ತಿಳಿಸಿಬೇಕು. ಸ್ನೇಹಿತರು, ಕುಟುಂಬ, ಮತ್ತು ಪ್ರಣಯ ಸಂಬಂಧಗಳ ವಿಷಯದಲ್ಲಿ ವಿವರಿಸಿ. ಹೇಗೆ ಉತ್ತಮ ಸಂಬಂಧಗಳನ್ನು ಸ್ಥಾಪಿಸಬಹುದು, ಭದ್ರತೆ ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಹೇಳಿ. ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ತಾಳ್ಮೆಯಿಂದ ಮತ್ತು ನಿಜವಾದ ಉತ್ತರಗಳನ್ನು ನೀಡಬೇಕು. ಪುಸ್ತಕಗಳು, ಅಥವಾ ಡಾಕ್ಟರ್‌ಗಳು ನೀಡುವ ವಿವರಗಳು ಸಹಕಾರಿಯಾಗಬಹುದು.
ಈ ಮಾರ್ಗಗಳನ್ನು ಅನುಸರಿಸುವ ಮೂಲಕ ಹೆಣ್ಣು ಮಕ್ಕಳಿಗೆ ಆರೋಗ್ಯಕರ ಮತ್ತು ವಿವೇಕಪೂರ್ಣವಾಗಿ ಹರೆಯದ ವಯಸ್ಸಿನಲ್ಲಿ ತಿಳುವಳಿಕೆಯನ್ನು ನೀಡಲು ಸಹಾಯ ಮಾಡಬಹುದು.
ಇದಲ್ಲದೆ ಹರೆಯದ ಮಕ್ಕಳಿಗೆ ಮನೆಯ ಹಿರಿಯರೊಡನೆ ಸಂವಾದ, ಸಂಸ್ಕಾರ, ಹಿತ ಮಿತ ಮಾತು ಹೇಳಿಕೊಡುವ ಕರ್ತವ್ಯ ಪೋಷಕರದು. ಸಮಾಜದಲ್ಲಿ ಹೇಗಿರಬೇಕು ಹಾಗು ಸಮಾಜಕ್ಕಾಗಿ ಒಳ್ಳೆಯದನ್ನು ಏನು ಮಾಡಬೇಕು ಎಂಬುದು ತಿಳಿಹೇಳಬೇಕು.

ಫೋಟೋ ಕೃಪೆ : google
ಅವರಿಗೆ ಮನೆಯ ಕೆಲಸದ ಜವಾಬ್ದಾರಿ ಕೊಡಬೇಕು. ಮಕ್ಕಳು ಹಿರಿಯರಿದ್ದರೆ, ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೊಡಬೇಕು. ಹಣ ಕೊಟ್ಟು ವ್ಯಾಪಾರ, ವ್ಯವಹಾರದ ಬಗ್ಗೆ ಪರಿಚಯ ಮಾಡಿಸಬೇಕು.
ಮನೆಯಲ್ಲಿ ಹಿರಿಯರು ಹುಷಾರು ತಪ್ಪಿದಾಗ ಅವರನ್ನು ನೋಡಿಕೊಳ್ಳಲು ಹೇಳಬೇಕು. ಔಷದೋಪಚಾರ, ಅವರ ಊಟ ಉಪಚಾರದ ಬಗ್ಗೆ ಗಮನ ಹರಿಸಲು ಹೇಳುದಾಗ ಅವರಿಗೆ ಜವಾಬ್ದಾರಿ ಬರುತ್ತದೆ ಹಾಗು ಜೀವನದ ಅನುಭವಗಳು ಅವರಿಗೆ ಆತ್ಮವಿಶ್ವಾಸ ಮೂಡಿಸುತ್ತದೆ.
ಅವರ ಓದಿನ ಬಗ್ಗೆ ಗಮನ ಕೊಡಲು ಹೇಳಬೇಕು. ಉತ್ತಮ ಸ್ನೇಹಿತರ ಸಂಗ ಮಾಡಲು ತಿಳಿಸಬೇಕು. ಯಾವುದೇ ವಿಚಾರವಾಗಲಿ ಮನೆಯಲ್ಲಿ ಬಿಚ್ಚು ಮನಸಿನಿಂದ ಕೇಳಿಕೊಳ್ಳಬೇಕು. ಅವರ ಯಾವುದೇ ಪರಿಸ್ಥಿತಿಗೆ ತಾವು ಜೊತೆ ಇರುತ್ತೇವೆ ಎಂಬ ಭರವಸೆ ಮೂಡಿಸಬೇಕು.
ತಂದೆ ತಾಯಿ ಅವರ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕು. ಅವರ ಆಗು ಹೋಗುಗಳನ್ನು ಗಮನಿಸುತ್ತಲಿರಬೇಕು. ಯಾವುದೇ ವಿಷಯದಲ್ಲಿ ಸುಳ್ಳು ಹೇಳಬಾರದು ಎಂದು ಮನವರಿಕೆ ಮಾಡಿಸಬೇಕು.
ಹದಿಹರೆಯದ ವಯಸ್ಸು ಯಾರು ಏನೇ ಹೇಳಿದರೂ ಅದನ್ನು ನಂಬಿ ಬಿಡುವ ವಯಸ್ಸು. ಹಾಗಾಗಿ ಮನೆಯ ಹಿರಿಯರ ಸಮ್ಮತಿ ಇಲ್ಲದೆ ಅವರಿವರ ಮಾತಿಗೆ ಕುವಿಗೊಡದೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದನ್ನು ಹೇಳಿಕೊಡಬೇಕು.
ಹರೆಯ ಹೊರೆಯಾಗಬಾರದು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ
