ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಉಸಿರೊಂದು ಅನಾಥ
ಬಿಂದುವಿನಂತೆ
ಯಾರಿಗೂ ಸಿಗದ
ಮಾಯಾವಿಯಂತೆ
ಒಮ್ಮೊಮ್ಮೆ ಜೀವಂತಿಕೆ
ಚಿಗುರಾಗಿ ಬೆಳೆವ ಸಿರಿ
ಅದರ ತುಂಬಾ
ನಗುವದು ಸಹಜ ಉಸಿರಿಗೆ
ನೋಟ ಭಾವಗಳ ದಾಟಿ
ಅದು ವಿಶ್ವ ರೂಪ
ಗಗನದಿ ಮೋಡದ ಹನಿ
ಹರಿವ ಝರಿಯ ನಸುನಗು
ಓಡುವ ನದಿಯ ದಾಟಿ
ಕಡಲ ತೆರೆಗಳಲಿ ತೇಲಿ
ಬರುವ ಬದುಕು ಜೀವದ್ದು
ಅನುಭವದ ಹಣೆಗೆ
ಮಾತದು ಒಲವು ನಿಲುವು
ತೂಗಿಸಿ ತೇಲಿಸಿ ಬಿಡುವ
ನೆಮ್ಮದಿ ಉಸಿರಿನದ್ದು
ಎಲ್ಲಾ ಮುಗಿದರೆ ಮತ್ತೆ ಮತ್ತೆ
ಅನಾಥ ಎಲ್ಲಾ ಇದ್ದರೂ
ಉಸಿರಿಗೆ ಉಳಿವಿಗೆ
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
