ರಾಮ ಒಂದು ಮನೆಯ ಯಜಮಾನನಾಗಿ ಕರ್ತವ್ಯಗಳನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿಕೊಟ್ಟನು. ರಾವಣನೆಂದರೆ ಈಗಿನ ಕಾಲದಲ್ಲಿ ಅತೀ ಐಷಾರಾಮಿ ಜೀವನ ಬೇಕೆಂದು ಗಂಡನ ಬಳಿ ಕಾಡೀ ಬೇಡಿ ಸಾಲಸೋಲ ಮಾಡಿಕೊಂಡು ರಾವಣನಂತಹ ಸಾಲಗಾರರ ಬಳಿ ಸಿಕ್ಕಿಹಾಕಿಕೊಂಡ ಹಾಗೆ. ರಾಮಾಯಣ ಇಂದಿನ ಯುವಪೀಳಿಗೆಯವರಿಗೆ ಮಾದರಿಯಾಗಿದೆ ರಾಮನ ಅವತಾರ. ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ರಾಮಾಯಣ…..ವರ್ತಮಾನದ ಅವಲೋಕನ.
ಶ್ರೀರಾಮನ ಅವತಾರ ಮನುಕುಲಕ್ಕೆ ಮಾದರಿಯಾಗಿದೆ. ತಾನು ದೇವರಾಗಿದ್ದೂ ಸಹ ಸಾಮಾನ್ಯ ಮಾನವನ ರೀತಿ ಹೇಗೆ ಬದುಕಿ, ಏನೇ ಕಷ್ಟ ಬಂದರೂ ಅದನ್ನು ಜಾಣತನದಿಂದ, ದಿಟ್ಟತನದಿಂದ ಎದುರಿಸಬೇಕೆಂದು ತಿಳಿಸುಕೊಟ್ಟಿದ್ದು ಮನುಕುಲದ ಎಲ್ಲರಿಗೂ ಒಂದು ಪಾಠವಾಗಿದೆ.
ಪುರಷರಲ್ಲೇ ಉತ್ತಮ ಎನಿಸಿಕೊಂಡ ರಾಮ ಪುರುಷೋತ್ತಮ ರಾಮ. ಅವನ ನಡೆ ನುಡಿ, ಧೈರ್ಯ, ಬದ್ಧತೆ ಹೀಗೆ ಹೇಳ ಹೊರಟರೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅಂಶಗಳನ್ನು ಕಾಣಬಹುದು. ಅವನು ತನ್ನ ತಂದೆ, ತಾಯಂದರಿಗೆ ಕೊಡುತಿದ್ದ ಪ್ರೀತಿ, ಮರ್ಯಾದೆ, ತಮ್ಮಂದಿರ ಮೇಲಿನ ಅಕ್ಕರೆ ಶ್ಲಾಘನೀಯ. ಅದೇ ರೀತಿ ಮಾನವನು ಹೆತ್ತವರಿಗೆ, ಒಡಹುಟ್ಟಿದವರ ಜೊತೆ ಹೇಗಿರಬೇಕೆಂದು ತಿಳಿಸಿ ಕೊಟ್ಟಿದಾನೆ.
ಅಂದಿನ ಕಾಲದಲ್ಲಿ ರಾಜ ಮಹಾರಾಜರು ಬಹುಪತ್ನಿತ್ವ ಹೊಂದಿದ್ದರೂ, ತನ್ನ ತಂದೆ ಮೂವರು ಪತ್ನಿಯರನ್ನು ಹೊಂದಿದ್ದರೂ ಸಹ ರಾಮ ತಾನು ಸೀತೆಯನ್ನು ವರಿಸಿ ಬೇರೆ ಯಾವ ಹೆಣ್ಣಿನ ಮೋಹಕ್ಕೊಳಗಾಗದೆ ಅವಳಲ್ಲೇ ಸರ್ವಸ್ವವನ್ನು ಕಂಡು ಏಕಪತ್ನೀವ್ರತಸ್ಥನಾದನು.

ಫೋಟೋ ಕೃಪೆ : ಅಂತರ್ಜಾಲ
ಇಂದಿನ ವರ್ತಮಾನಕ್ಕೆ ತಿಳಿಸುವ ರಾಮಾಯಣ ಹಾಗು ಮಹಾಪುರುಷ ರಾಮನ ಬಗ್ಗೆ ಹೇಳುವುದಾದರೆ. ರಾಮ, ಲಕ್ಷ್ಮಣ, ಭರತ, ಶತೃಘ್ನ…..ಹುಟ್ಟಿದ ನಂತರ ಅವರು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸುತಿದ್ದಂತೆ, ಅವರ ಅರಮನೆಗೆ ವಿಶ್ವಾಮಿತ್ರರು ಬಂದು ದಶರಥನ ಬಳಿ ಲೋಕೋದ್ಧಾರಕ್ಕಾಗಿ ರಾಮ ಲಕ್ಷ್ಮಣರನ್ನು ಒಂದು ಯಾತ್ರೆಗೆ ಕರೆದುಕೊಂಡು ಹೋಗುತ್ತೇನೆ ಕಳಿಸಿಕೊಡು ಎಂದು ಕೇಳಿದಾಗ, ದಶರಥನು, ಅವರಿನ್ನೂ ಎಳೆಯ ಬಾಲಕರು ಈಗಿನ್ನು ವಿದ್ಯಾಭ್ಯಾಸ ಮುಗಿಸುತಿದ್ದಾರೆ, ಇನ್ನೂ ಕಲಿಯುವುದು ಬಹಳವಿದೆ ಎಂದಾಗ, ವಿಶ್ವಾಮಿತ್ರರು, ದಶರಥ ನಿನಗೆ ನಿನ್ನ ಮಕ್ಕಳ ಸಾಮರ್ಥ್ಯ ಗೊತ್ತಿಲ್ಲ, ಅವರಿಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ರಾಜನ ಒಪ್ಪಿಗೆ ಪಡೆದು ಕರೆದುಕೊಂಡು ಹೋಗುತ್ತಾರೆ. ಇದು ಅಂದಿನ ಕಾಲದಲ್ಲಿ ಗುರುಗಳ ಬಗ್ಗೆ ಇದ್ದ ನಂಬಿಕೆ ಹಾಗು ಗೌರವ. ಅವರ ಮಾತು ವೇದವಾಕ್ಯದಂತೆ ಎಲ್ಲರಿಗೂ. ಹಾಗೆಯೇ ಕಲಿಕೆ ಎನ್ನುವುದಕ್ಕೆ ಕೊನೆಯಿಲ್ಲ ಎಂಬುದನ್ನು ದಶರಥನಿಂದ ಕಲಿಯಬಹುದಾಗಿದೆ.
ವಿಶ್ವಾಮಿತ್ರರ ಜೊತೆ ಹೊರಟ ರಾಮ ಲಕ್ಷ್ಮಣರಿಗೆ ಹೋಗುವ ದಾರಿಯಲ್ಲಿ ಅನೇಕ ರಾಕ್ಷಸರ ಸಂಹಾರ ಮಾಡಿದರು, ಅವರನ್ನು ಧೈರ್ಯ ಸಾಹಸದಿಂದ ಬಡಿದು ಹೊಡೆದಾಡಿ ಅವರನ್ನು ಅಂತ್ಯಗೊಳಿಸಿದರು. ರಾಮ ಲಕ್ಷ್ಮಣರು ಹೊಡೆದಾಡಿ ಹೀಗೆ ನಮ್ಮ ಜೀವನದಲ್ಲೂ ರಾಕ್ಷಸ ರೂಪದಲ್ಲಿ ತೊಂದರೆಗಳು ಬರುತ್ತದೆ ಧೈರ್ಯದಿಂದ ಎದುರಿಸಬೇಕು ಎಂದು ತೋರಿಸಿಕೊಟ್ಟವನು ರಾಮ.
ಹೀಗೆ ದಾರಿಯಲ್ಲಿ ಹೋಗುತ್ತಾ ಜನಕ ಮಹಾರಾಜನ ರಾಜ್ಯಕ್ಕೆ ಬಂದಾಗ, ಅವನು ಸೀತಾ ಸ್ವಯಂವರಕ್ಕೆ ಇಟ್ಟಿದ್ದ ಶಿವಧನಸ್ಸನ್ನು ಮುರಿದು ಗೆದ್ದಾಗ, ತನ್ನ ಮಗಳು ಸೀತೆ ಜೊತೆ ಮದುವೆ ಮಾಡಿಕೊಡಲು ಒಪ್ಪಿದಾಗ, ರಾಮ ಸೀತೆಯನ್ನು ತನ್ನ ತಂದೆ ತಾಯಿಯರೂ ಒಪ್ಪಬೇಕು ಎಂದಾಗ ದಶರಥನನ್ನು ಕರೆಸಿ ಸೀತೆಯನ್ನು ತೋರಿಸಿದಾಗ, ಅವರು ಒಪ್ಪಿದಾಗ ರಾಮನಿಗೆ ಸೀತೆಯ ಮೇಲೆ ಮತ್ತಷ್ಟು ಪ್ರೇಮವಾಯಿತು… ಹಿರಿಯರು ಒಪ್ಪಿದ ಹುಡುಗಿ ಎಂದು… ತಾವು ಹಿರಿಯರ ಸಮ್ಮುಖದಲ್ಲಿ, ಎರಡು ಕುಟುಂಬಗಳ ನಡುವೆ ಮಧುರ ಸಂಬಂಧದಲ್ಲಿ ಮದುವೆ ಮಾಡಿಕೊಂಡರೆ ಎಲ್ಲರೂ ಸಂತೋಷವಾಗಿರಬಹುದು ಎಂದು ತೋರಿಸಿಕೊಟ್ಟವನು ರಾಮ.
ರಾಮನ ಜೊತೆ, ಲಕ್ಷ್ಮಣ, ಭರತ, ಶತ್ರುಘ್ನರಿಗೂ ಅಲ್ಲೇ ಒಟ್ಟಿಗೆ ಮದುವೆಯಾಯಿತು….ಇದರಿಂದ ಒಳ್ಳೆಯ ಕುಲ, ವಂಶವಾಗಿದ್ದರೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಕ್ಕೆ ಕಷ್ಟವಾಗುವುದಿಲ್ಲ, ಹಾಗೆಯೇ ಸುಗುಣವತಿಯರಾದ ಹೆಣ್ಣು ಮಕ್ಕಳು ಒಳ್ಳೆಯ ಮನೆತನದ ಸೊಸೆಯರಾಗಲು ಕಷ್ಟವಿಲ್ಲ ಅಂತ ತೋರಿಸಿಕೊಟ್ಟವನು ರಾಮ.
ಯಾವುದೇ ಕುಟುಂಬ ಹಾಗು ಮನೆತನದಲ್ಲಿ ಆಸ್ತಿಗಾಗಿ (ಅಂದು ಸಿಂಹಾಸನಕ್ಕಾಗಿ) ಹೋರಾಟವಿರುತ್ತದೆ. ತನ್ನ ಮಗನಿಗೇ ಪಟ್ಟಭಿಷೇಕವಾಗಬೇಕೆಂದು ದಶರಥನಲ್ಲಿ ಕೇಳು ಎಂದು ಕೈಕೆಗೆ ಹೇಳಿಕೊಟ್ಟವಳು ಮಂಥರೆ. ಇವಳ ಮಾತನ್ನು ಕೇಳಿ ಕೈಕೆ ದಶರಥನ ಯುದ್ಧದ ಸಮಯದಲ್ಲಿ ಮೂರು ಪ್ರಮಾಣಗಳನ್ನು ಪಡೆದುಕೊಂಡಿದ್ದು ಅದನ್ನು ಉಪಯೋಗಿಸಿಕೊಂಡು ರಾಮನನ್ನು ಕಾಡಿಗೆ ಕಳಿಸಬೇಕೆಂದು ಹೇಳಿ ಅವನನ್ನು ಕಾಡಿಗೆ ಕಳಿಸಿದಳು. ಜೀವನ ಸುಲಭವಲ್ಲ ದುಡುಕಿ ಯಾರಿಗೂ ಯಾವ ಸಮಯದಲ್ಲೂ ಆಣೆ ಪ್ರಮಾಣ, ಮಾಡಬಾರದು ಹಾಗು
ಮಂಥರೆಯಂಥವರ ಕೈಗೆ ಸಿಕ್ಕಿ ದೇವನಾದ ತಾನೇ ಕಾಡಿಗೆ ಹೋಗುವಂತವನಾದಾಗ, ಇನ್ನು ಸಾಮಾನ್ಯ ಜನರಿಗೂ ಸಹ ಮಂಥರೆಯಂತಹ ದುಷ್ಟ ಜನರ ಕೈಗೆ ಸಿಕ್ಕಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ತೋರಿಸಿಕೊಟ್ಟವನು ರಾಮ.
ಅರಮನೆಯಲ್ಲಿ ಸುಕೋಮಲೆಯಾಗಿ ಬೆಳೆದ ಸೀತಳನ್ನು, ತನ್ನ ತಂದೆ ತಾಯಿಯರೂ, ತಮ್ಮಂದಿರನ್ನು ನೋಡಿಕೊಂಡು ಅರಮನೆಯಲ್ಲಿಯೇ ಇರು ಎಂದರೂ, ಕಷ್ಟವೋ ಸುಖವೋ ಗಂಡನೊಂದಿಗೆ ಇರುತ್ತೇನೆ ಎಂದು ರಾಮನ ಜೊತೆ ಕಾಡಿಗೆ ಹೊರಟಳು ಸೀತೆ. ಮದುವೆಯಾದ ಹೆಣ್ಣು ಗಂಡನೊಡನೆ ಇದ್ದರೆ ತನಗೆ ಸಮಾಜದಲ್ಲಿ ಬೆಲೆ ಹೆಚ್ಚು ಎಂದು ತಿಳಿಸಿಕೊಟ್ಟವನು ರಾಮ.

ಫೋಟೋ ಕೃಪೆ : ಅಂತರ್ಜಾಲ
ಬೆನ್ನಲ್ಲಿ ಬಿದ್ದು ಒಡಹುಟ್ಟಿದವರು ಅಂದಾಕ್ಷಣ ಜವಾಬ್ದಾರಿ ಮುಗಿಯಿತು ಅಂತ ಅಲ್ಲ, ಲಕ್ಷ್ಮಣ ರಾಮ ಸೀತೆಯರ ಕಾವಲಾಗಿ ತಾನೂ ಕಾಡಿಗೆ ಹೊರಟು ನಿಂತಾಗ, ಸೋದರ ವಾತ್ಸಲ್ಯ, ಕರ್ತವ್ಯ, ಕಷ್ಟದಲ್ಲೂ ಜೊತೆಯಾಗಿರಬೇಕು ಸಹೋದರರು ಎಂದು ತೋರಿಸಿಕೊಟ್ಟವನು ರಾಮ.
ಕಾಡಿಗೆ ಹೋದಾಗ ಅಲ್ಲಿ ಸುಂದರ ಪ್ರಕೃತಿಗೆ ಮನಸೋತ ಸೀತೆ ತನಗೆ ಬಣ್ಣದ ಜಿಂಕೆ ಬೇಕೆಂದಳು, ಅದು ಮಾಯಾಜಿಂಕೆ ಬೇಡವೆಂದರೂ ಸಹ ಕೇಳದೆ ಹಠ ಮಾಡಿದಳು. ಜಿಂಕೆಯನ್ನು ತರಲು ಹೋದ ರಾಮ,ಲಕ್ಷ್ಮಣನಿಗೆ ಸೀತೆಯನ್ನು ನೋಡಿಕೊಂಡಿರು, ನಾನು ಜಿಂಕೆಯನ್ನು ಹಿಡಿದು ತರುತ್ತೇನೆ ಎಂದಾಗ ಅಣ್ಣನ ಮಾತಿಗೆ ಬೆಲೆ ಕೊಟ್ಟು ತಾಯಿ ಸಮಾನಳಾದ ಅತ್ತಿಗೆಯ ಕಾವಲಿಗೆ ನಿಂತನು ಲಕ್ಷ್ಮಣ.
ಅಣ್ಣನ ಕಾಪಾಡಲು ಹೊರಟಾಗ ಸೀತೆಗೆ ಹೊರಹೋಗದಂತೆ ಲಕ್ಷ್ಮಣ ರೇಖೆ ಹಾಕಿದ ಆದರೂ ರಾವಣ ಸೀತೆಯನ್ನು ಅಪಹರಣ ಮಾಡಿಯೇಬಿಟ್ಟ. ಸಾಮಾನ್ಯವಾಗಿ ಹೆಂಗಸರಿಗೆ ಆಸೆ ಜಾಸ್ತಿ, ಕಂಡಿದ್ದು ಬೇಕೆ ಬೇಕೆಂಬ ಹಠ, ಹಾಗಾಗಿ ಆಸೆಗೆ ಬಿದ್ದರೆ ರಾವಣನ ಕೈಗೆ ಸಿಕ್ಕಿಕೊಳ್ಳುತ್ತಾರೆಂದು ತೋರಿಸಿಕೊಟ್ಟವನು ರಾಮ. ಇಲ್ಲಿ ರಾವಣ ನೆಂದರೆ ಈಗಿನ ಕಾಲದಲ್ಲಿ ಅತೀ ಐಷಾರಾಮಿ ಜೀವನ ಬೇಕೆಂದು ಗಂಡನ ಬಳಿ ಕಾಡೀ ಬೇಡಿ ಸಾಲಸೋಲ ಮಾಡಿಕೊಂಡು ರಾವಣನಂತಹ ಸಾಲಗಾರರ ಬಳಿ ಸಿಕ್ಕಿಹಾಕಿಕೊಂಡ ಹಾಗೆ. ಇದನ್ನು ಇಂದಿನ ಯುವಪೀಳಿಗೆಯವರಿಗೆ ಮಾದರಿಯಾಗಿದೆ ರಾಮನ ಅವತಾರ.
ರಾವಣನ ಸಂಹರಿಸಲು ಕಪಿ ಸೈನ್ಯ ರಾಮನ ಸಹಾಯಕ್ಕೆ ಬಂದು ನಿಂತಾಗ, ರಾಮನ ಬಂಟ ಹನುಮ ಲಂಕೆಗೆ ಹಾರಿ ಸೀತಾ ಮಾತೆಯನ್ನು ಕರೆತರುವಲ್ಲಿ ಯಶಸ್ವಿಯಾದನು. ರಾವಣನ ಸಂಹಾರವಾಯಿತು. ಇದರಿಂದ ತಿಳಿಯುವುದೇನೆಂದರೆ, ಒಬ್ಬ ಒಳ್ಳೆಯ ವ್ಯಕ್ತಿಗೆ ಸ್ನೇಹಿತರು ಸದಾ ಸಹಾಯ ಹಸ್ತ ಚಾಚಿರುತ್ತಾರೆ. ಹನುಮನಂತಹ ಬಂಟ ಇದ್ದೇ ಇರುತ್ತಾರೆ ಅವರಿಗೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಲು ಎಂದು ತೋರಿಸಿದವನು ರಾಮ.
ವನವಾಸ ಮುಗಿದು ಪುನಃ ಅಯೋಧ್ಯೆಗೆ ಹಿಂತಿರುಗಿದಾಗ, ಸಾಮಾನ್ಯ ಜನರ, ಸಮಾಜದಲ್ಲಿ ಹರಟೆಹೊಡೆಯುವ , ಮಾತಿನಿಂದ ರಾಮ ತನ್ನ ಪ್ರೀತಿಯ ಹೆಂಡತಿಯನ್ನು ಪುನೀತಳು ಎಂದು ಸಾಬೀತು ಮಾಡಲು ಅಗ್ನಿ ಪ್ರವೇಶ ಮಾಡಿಸಿದ. ರಾಮನಿಗೆ ಗೊತ್ತಿತ್ತು ಸೀತೆ ಪುನೀತಳೆಂದು. ಆದರೆ ರಾಮ ಸೀತೆಗೆ ಮಾತ್ರ ಪತಿಯಾಗಿರದೆ, ಪ್ರಜಾ ಪಾಲಕನೂ ಆಗಿದ್ದರಿಂದ ಪ್ರಜೆಗಳ ಮಾತನ್ನೂ ಕೇಳಬೇಕಾಯಿತು ಹಾಗು ಬರೀ ಸೀತೆ ಮೇಲಿನ ವ್ಯಾಮೋಹವಲ್ಲದೆ ಜನರ ಪ್ರಶ್ನೆಗೆ ಉತ್ತರಿಸುವ ನೈಪುಣ್ಯತೆಯೂ ಇತ್ತು. ಎಂತಹ ಪರೀಕ್ಷೆಗಳು ಬಂದರೂ ಅದನ್ನು ಎದುರಿಸುವ ದಿಟ್ಟತನವಿರಬೇಕೆಂದು ತೋರಿಸಿಕೊಟ್ಟವನು ರಾಮ.
ಜನರ ಬಾಯಿಗೆ ಬಿದ್ದ ಮೇಲೆ ಏನೇ ಮಾಡಿದರೂ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ ಇದು ದೇವನಿಗೂ ತಪ್ಪಿದ್ದಲ್ಲ ಅಂದ ಮೇಲೆ ಹುಲಮಾನವರ ಪಾಡೇನು? ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿಕೊಟ್ಟವನು ರಾಮ. ತನ್ನ ಸತಿ ಬಸುರಿಯಾದಾಗ ಜನರ ಮಾತಿಗೆ ಎಲ್ಲಿ ಘಾಸಿಗೊಳಗಾಗುತ್ತಾಳೋ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅರಿತು, ತನ್ನ ಮೇಲೆ ಆಪಾದನೆ ಬಂದರೂ ಬರಲಿ ಎಂದು ಸೀತೆಯನ್ನು ಕಾಡಿಗೆ ಕಳಿಸಿ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆಯುವಂತೆ ಮಾಡಿ, ತಂದೆಯ ಕರ್ತವ್ಯವೇನೆಂದು ಜನರಿಗೆ ತೋರಿಸಿಕೊಟ್ಟವನು ರಾಮ.
ಲವ ಕುಶರಂತಹ ವೀರ ಮಕ್ಕಳನ್ನು ಹೆತ್ತ ಸೀತೆ ಮರಳಿ ರಾಮನ ಬಳಿ ಬರುತ್ತಾಳೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸುತ್ತಾರೆ.
ರಾಮ, ಒಂದು ಮನೆಯ ಯಜಮಾನನಾಗಿ ಕರ್ತವ್ಯಗಳನ್ನು ಹೇಗೆ ನಿಭಾಯಿಸಬೇಕೆಂದು ತೋರಿಸಿಕೊಟ್ಟು, ರಾಮಾಯಣ ಮಾದರಿಯಾಗುವಂತೆ ಲೋಕಕ್ಕೆ ತಿಳಿಸಿಕೊಟ್ಟನು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ, ನೋವುಗಳನ್ನು ಅನುಭವಿಸಬೇಕು, ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂದು ತೋರಿಸಿಕೊಟ್ಟವನು ಪುರುಷೋತ್ತಮ ರಾಮ.
ರಾಮನ ಮೂಲಕ ಮಾನವನ ಜೀವನದ ರೀತಿ, ನೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ. ಜೀವನವು ಪ್ರತಿಕ್ಷಣ ಸಂಕಷ್ಟಗಳನ್ನು ಎದುರಿಸುವ ಬಗ್ಗೆ, ಯಾವುದೇ ವಿಷಯದಲ್ಲಿ ನೀತಿಯು ಧರ್ಮವಾಗಿರಬೇಕು. ಆದರೆ ಹಾಗೆಂದು ಯಾವುದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ಯಾವುದೇ ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ ಎಂಬುದನ್ನು ಶ್ರೀರಾಮ ಮನುಕುಲಕ್ಕೆ ತೋರಿಸಿಕೊಟ್ಟಿದಾನೆ.
- ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಮಾನಸ….ಇದು ಮನಸಿನ ಮಾತು (ಭಾಗ-೩೮)
- ಮಾನಸ….ಇದು ಮನಸಿನ ಮಾತು (ಭಾಗ-೩೯)
- ಮಾನಸ….ಇದು ಮನಸಿನ ಮಾತು (ಭಾಗ-೪೦)
- ಮಾನಸ….ಇದು ಮನಸಿನ ಮಾತು (ಭಾಗ-೪೧)
- ಮಾನಸ….ಇದು ಮನಸಿನ ಮಾತು (ಭಾಗ-೪೨)
- ಮಾನಸ….ಇದು ಮನಸಿನ ಮಾತು (ಭಾಗ-೪೩)
- ಮಾನಸ….ಇದು ಮನಸಿನ ಮಾತು (ಭಾಗ-೪೪)
- ಮಾನಸ….ಇದು ಮನಸಿನ ಮಾತು (ಭಾಗ-೪೫)
- ಮಾನಸ….ಇದು ಮನಸಿನ ಮಾತು (ಭಾಗ-೪೬)
- ಮಾನಸ….ಇದು ಮನಸಿನ ಮಾತು (ಭಾಗ-೪೭)
- ಮಾನಸ….ಇದು ಮನಸಿನ ಮಾತು (ಭಾಗ-೪೮)
- ಮಾನಸ….ಇದು ಮನಸಿನ ಮಾತು (ಭಾಗ-೪೯)
- ಮಾನಸ….ಇದು ಮನಸಿನ ಮಾತು (ಭಾಗ-೫೦)
- ಮಾನಸ….ಇದು ಮನಸಿನ ಮಾತು (ಭಾಗ-೫೧)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
