ಊರಿನಲ್ಲಿ ಮದುವೆ ಎಂದು ತಿಳಿಯುತ್ತಿದ್ದಂತೆ ಊರಿನ ಜನರೆಲ್ಲ ಸಹಾಯಕ್ಕೆ ನಿಲ್ಲುತ್ತಿದ್ದರು. ಇಂದಿನ ಹಾಗೆ ಸಂಗೀತ್, ಮೆಹಂದಿ ಅಂತ ಕಾರ್ಯಕ್ರಮಗಳು ಇರುತ್ತಿರಲಿಲ್ಲ. ಅಂದು ಮಕ್ಕಳು ಮದುವೆಯ ಮೆರವಣಿಗೆಯ ಹಿಂದೆ ಮುಂದೆ ಕುಣಿದು ಕುಪ್ಪಳಿಸುತ್ತಿದ್ದರು. ಅಂದಿನ ದಿನಗಳಲ್ಲಿ ಇವಿಷ್ಟೇ ಸಾಕಿತ್ತು ಖುಷಿಯಾಗಿರಲು. ಚಂಪಾ ಚಿನಿವಾರ್ ಅವರ ಅಂಕಣದಲ್ಲಿ ಹಿಂದಿನ ‘ಮದುವೆ ಮೆರವಣಿಗೆ’ಯ ಸಂಭ್ರಮದ ಕುರಿತು ಬರೆದ ಅಂಕಣವನ್ನು ತಪ್ಪದೆ ಮುಂದೆ ಓದಿ…
ಇದೇನು ಮದುವೆ ಮೆರವಣಿಗೆ ಅಂತ ಅಂದುಕೊಂಡರೆ… ಹೌದು, ಒಂದು ಕಾಲ ಇತ್ತು. ಮದುವೆ ಆದ ಮೇಲೆ ನವದಂಪತಿಗಳಿಗೆ ಮೆರವಣಿಗೆ ಪದ್ಧತಿ ಇತ್ತು. Marriages are made in heaven ಅಂತ ಒಂದು ಮಾತಿದೆ. Heaven ಇದ್ಯೋ ಇಲ್ವೋ ಗೊತ್ತಿಲ್ಲ ಆದರೆ ಆ ದಿನಗಳ ಮದುವೆ ನೋಡಲು ಹೆವನ್ನೇ ಆಗಿರುತ್ತಿತ್ತು.
ಎಪ್ಪತ್ತು ಹಾಗು ಎಂಭತ್ತರ ದಶಕದಲ್ಲಿ ಅಂದರೆ 1970 ರಿಂದ 1985 ನೇ ಇಸವಿಯಲ್ಲಿ ನಾ ಕಂಡ ಹಳ್ಳಿಯ ಮದುವೆ. ಪ್ರತೀ ವರ್ಷ ಪರೀಕ್ಷೆ ಮುಗಿಸಿ ಬೇಸಿಗೆ ರಜೆಗೆ ಅಜ್ಜಿಯ ಊರಿಗೆಂದು ಹೋದಾಗ ಮೊಮ್ಮಕ್ಕಳು ಸುಮಾರು ಇಪ್ಪತ್ತು ಜನ ಬರೋಬ್ಬರಿ ಎರಡು ತಿಂಗಳು ಅಜ್ಜಿ ಮನೆಯಲ್ಲೇ ಠಿಕಾಣಿ ಆಗುತಿತ್ತು.
ಬೇಸಿಗೆ ಕಾಲವೆಂದರೆ ಜಾತ್ರೆ ಕಾಲವೂ ಹೌದು, ಚೈತ್ರಮಾಸದಲ್ಲಿ ಮದುವೆಯ ಕಾಲವೂ ಆಗಿತ್ತು. ಒಂದು ವಾರದ ಜಾತ್ರೆಯ ಸಡಗರವಾದರೆ ಇದರ ಮಧ್ಯದಲ್ಲಿ ಮದುವೆಯ ಜಾತ್ರೆ, ಹೌದು ಮದುವೆ ಒಂದು ವಾರದವರೆಗೂ ನಡೆಯುತಿತ್ತು. ಜಾತ್ರೆಯ ಜೊತೆಗೆ ಅಂದಿನ ದಿನಗಳ ಮದುವೆ ವೈಭೋಗವನ್ನು ಕಣ್ತುಂಬಿಕೊಳ್ಳುವ ಕಾಲವಿತ್ತು.
ನಾವು ಅಲ್ಲಿ ಇದ್ದ ಸಮಯದಲ್ಲಿ ಸುಮಾರು ಎಂಟರಿಂದ ಹತ್ತು ಮದುವೆಗಳನ್ನು ನೋಡುತಿದ್ದೆವು. ಆಗಿನ ದಿನಗಳಲ್ಲಿ ಹುಡುಗಿಗೆ 15 ರಿಂದ 16 ರ ವಯಸ್ಸಿಗೆ ಬಂದ, ಆಗಿನ್ನು ಹೈಸ್ಕೂಲ್ ಮುಗಿಸಿದ ಅಥವಾ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಹುಡುಗಿಯರಿಗೆ ಮದುವೆ ಮಾಡುತ್ತಿದ್ದರು. ಇದರಲ್ಲೇನು ವಿಶೇಷ ಅಂದುಕೊಂಡರೆ, ಹೀಗಿದೆ ಆ ವಿಶೇಷ ಮದುವೆ.
ಊರಿನಲ್ಲಿ ಮದುವೆ ಎಂದು ತಿಳಿಯುತ್ತಿದ್ದಂತೆ ಊರಿನ ಜನರೆಲ್ಲ ಸಹಾಯಕ್ಕೆ ನಿಲ್ಲುತ್ತಿದ್ದರು. ಇಂದಿನ ಹಾಗೆ ಸಂಗೀತ್, ಮೆಹಂದಿ ಅಂತ ಕಾರ್ಯಕ್ರಮಗಳು ಇರುತ್ತಿರಲಿಲ್ಲ. ಪುರಿ ಉಂಡೆ, ಕಲ್ಲುಂಡೆ, ಅರಳುಂಡೆ, ಕಡ್ಳೆ ಉಂಡೆ, ಕಡ್ಳೆಬೀಜದ ಉಂಡೆ, ಎಳ್ಳುಂಡೆ ಇದಕ್ಕೆಲ್ಲಾ ಒಂದು ದಿನ, ಚಕ್ಕುಲಿ, ಕೋಡುಬಳೆ, ತೇಂಗೊಳಲು, ಮುಚ್ಚೋರೆ, ನಿಪ್ಪಟ್ಟು, ಹುರಿಗಾಳು, ಖಾರಸೇವು, ಕೊಬ್ಬರಿ ಮಿಠಾಯಿ, ಸುರಳಿ ಹೋಳಿಗೆ, ಮೈಸೂರು ಪಾಕು, ಕಾಯಿ ಹೋಳಿಗೆ ಮಾಡುವುದಕ್ಕೆ ಒಂದು ದಿನ ಅಂತ ಅಕ್ಕ ಪಕ್ಕದ ಮನೆಯ ಹೆಂಗಸರು ಬಂದು ಸೇರಿ ಮಾಡುತ್ತಿದ್ದ ಕಾಲವದು.

ಫೋಟೋ ಕೃಪೆ : ಅಂತರ್ಜಾಲ
ಗಂಡಸಾದರೆ ಮದುವೆಗೆ ದುಡ್ಡು ಹೊಂದಿಸಿಕೊಳ್ಳುತ್ತಿದ್ದರು, ಸಾಲ ಮಾಡಿ ಅಥವಾ ಪರಿಚಯದವರು ನೆಂಟರಾದರೆ ಕೈಸಾಲ ಅಂತ ಬಡ್ಡಿಗಲ್ಲದೆ ವಿಶ್ವಾಸದಿಂದ ಹಣ ಪಡೆದುಕೊಂಡು, ಹೂವು, ಹಣ್ಣು, ತರಕಾರಿಗೆ ವ್ಯವಸ್ಥೆ ಮಾಡಲು, ಚಪ್ಪರದವರನ್ನು, ಓಲಗದವರನ್ನು ನಿಗದಿಪಡಿಸಲು ಓಡಾಡುತ್ತಿದ್ದರು.
ಒಂದು ವಾರದಲ್ಲಿ ಪ್ರತಿದಿನ ಒಂದೊಂದು ಶಾಸ್ತ್ರ ಸಂಪ್ರದಾಯ ನಡೆಯುತ್ತಿತ್ತು. ಕಾಲಕ್ರಮೇಣ, ಸಮಯಾಭಾವ, ಕೆಲಸದ ಒತ್ತಡ ಹೀಗೆ ನಾನಾ ಕಾರಣಗಳಿಂದ ಮದುವೆಯ ಸಡಗರ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾಗಿದೆ (ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಅನಿವಾರ್ಯವಾಗಿದೆ.) ಕೊನೆಯಲ್ಲಿ ನಡೆಯುತ್ತಿದ್ದ ವರಪೂಜೆ ಧಾರೆಯಾದ ಮೇಲೆ ಮಧ್ಯಾಹ್ನವೇ ಆರಾತಾಕ್ಷತೆ ಮುಗಿಸುತ್ತಿದ್ದರು. ರಾತ್ರಿ ಊರಿನ ಬೀದಿಯಲ್ಲಿ ಮೆರವಣಿಗೆ ನಡೆಯುತ್ತಿತ್ತು. ಊರಿನ ಹೆಣ್ಣು ಮಗಳಾಗಿದ್ದರೆ ಅಳಿಯನನ್ನು ಜನ ನೋಡಲಿ ಎಂದು, ಊರಿನ ಗಂಡು ಮಗನಾಗಿದ್ದರೆ ಸೊಸೆಯನ್ನು ತೋರಿಸಲೆಂದು ಮೆರವಣಿಗೆ ಸಾಗುತ್ತಿತ್ತು.
ಇದರ ಜೊತೆಗೆ ಮದುವೆಗೆ ಬರಲು ಆಗದಿದ್ದವರ ತುಂಬಾ ವಯಸ್ಸಾದ, ಊರಿನ ಹಿರಿಯರ ಆಶೀರ್ವಾದ ಪಡೆಯಲೂ ಸಹ ಮೆರವಣಿಗೆ ಸಾಗುತ್ತಿತ್ತು. ಪ್ರತೀ ಮನೆ ಮುಂದೆ ನಿಂತು ಅವರು ಕೊಡುವ ಉಡುಗೊರೆ ಸ್ವೀಕರಿಸಿ ಆರತಿ ಮಾಡಿಸಿಕೊಂಡು ಮುಂದೆ ಸಾಗುತ್ತಿದ್ದರು.
ತೀರಾ ಸಾಮಾನ್ಯ ಕುಟುಂಬದ ಮದುವೆಯಾಗಿದ್ದರೆ ನವದಂಪತಿಗಳ ಜೊತೆಗೆ ಕುಟುಂಬದ ಹಿರಿಯರು, ಅಕ್ಕ, ತಂಗಿ, ಅಣ್ಣ, ತಮ್ಮ ಬಂಧುಗಳು ಡೋಲು ಓಲಗದ ಜೊತೆ ಪೆಟ್ರೋಮ್ಯಾಕ್ಸ್, ಲಾಟೀನ್, ಪಂಜಿನ ಬೆಳಕಿನೊಂದಿಗೆ ನಡೆದುಕೊಂಡು ಮೆರವಣಿಗೆ ಸಾಗುತಿತ್ತು. ಸ್ವಲ್ಪ ಸಿರಿವಂತರಾದರೆ ಟ್ರ್ಯಾಕ್ಟರ್ ಮೇಲೆ ಬಿಗಿಯಾಗಿ ಕುರ್ಚಿಗಳನ್ನು ಕಟ್ಟಿ ಅದಕ್ಕೆ ಅಲಂಕಾರ ಮಾಡಿಸಿ, ಜಗಮಗಿಸೋ ದೀಪ, ಜೊತೆಗೆ ಬ್ಯಾಂಡ್ ಸೆಟ್(ಪಟ್ಟಣದಿಂದ ಕರೆಸುತಿದ್ದರು), ಜೊತೆಗೆ ಹಾಡುಗಳನ್ನು ಹಾಕಿಕೊಂಡು ಸಾಗುತ್ತಿದ್ದರು.
ಮಕ್ಕಳು ಮೆರವಣಿಗೆಯ ಹಿಂದೆ ಮುಂದೆ ಡಂಕಣಕ ಸ್ಟೆಪ್ ಹಾಕಿ ಅವರಿಗೆ ಬಂದ ರೀತಿ ಕುಣಿದು ಕುಪ್ಪಳಿಸುತಿದ್ದರು. ಅಂದಿನ ದಿನಗಳಲ್ಲಿ ಇವಿಷ್ಟೇ ಸಾಕಿತ್ತು ಖುಷಿಯಾಗಿರಲು. ಯಾವ ಮಾಧ್ಯಮಗಳೂ ಇರದ ಕಾಲ. ಫೋಟೋ ಅಂತು ಅಪರೂಪವಾಗಿತ್ತು ಕಣ್ಣಲ್ಲೇ ಎಲ್ಲಾ ಸ್ಟೋರ್ ಆಗಿ ಸೇವ್ ಆಗುತಿತ್ತು.
ಆ ಕಾಲದ ಮದುವೆಗಳು ಹೆಚ್ಚು ಕಡಿಮೆ ಮನೆಯಲ್ಲಿ ಹಿರಿಯರು ನೋಡಿಯೇ ನಿಶ್ಚಯಿಸುತ್ತಿದ್ದರು. ಎರಡೂ ಕುಟುಂಬಗಳು ಒಮ್ಮತದಿಂದ ಮದುವೆಗೆ ಒಪ್ಪಿಗೆ ನೀಡುತಿದ್ದರು. ಹೆಣ್ಣುಮಕ್ಕಳಾಗಲಿ, ಗಂಡುಮಕ್ಕಳಾಗಲಿ ಹಿರಿಯರು ತೋರಿಸಿದವರನ್ನೇ ಮದುವೆಯಾಗುತ್ತಿದ್ದರು. ಫೋನ್ ಇಲ್ಲದ ಕಾಲವದು. ಮದುವೆ ಆಗುವ ಹುಡುಗ ಹುಡುಗಿಯರು ಭೇಟಿ ಆಗುತ್ತಿದ್ದದ್ದು ಬಹಳ ಕಡಿಮೆ. ಆದರೂ ಹೊಂದಾವಣಿಕೆ ಇರುತಿತ್ತು.
ಏನೇ ಗೊಂದಲವಿದ್ದರೂ ದೊಡ್ಡವರು ಬಗೆಹರಿಸುತಿದ್ದರು. ಪತ್ರಗಳ ಮೂಲಕವಷ್ಟೇ ಮದುಮಕ್ಕಳ ಪ್ರಶ್ನೋತ್ತರ, ಪ್ರೇಮ ನಿವೇದನೆ, ಉಭಯ ಕುಶಲೋಪರಿ ಹೀಗೆ ಹಲವು ಭಾವನೆಗಳು ಪತ್ರಗಳ ಮೂಲಕ ಹೊರಬರುತಿದ್ದವು. ಅಂದು ಮದುವೆಗೆ ಮುಂಚೆ ಬರೆಯುವ ಪತ್ರಗಳಿಗೆ ಕಾಯುವ ಕಾತುರ ಅದರದೇ ಮಹತ್ವ ಹೊಂದಿತ್ತು. ಅಂದಿನ ಮದುವೆ ವೈಭವವೂ ಅಷ್ಟೇ ಕಂಡವರಿಗಷ್ಟೇ ಮನತುಂಬಿತ್ತು. ಅಂದು ಮದುವೆ ಆಡಂಬರ ಅನ್ನೋದಕ್ಕಿಂತ ವೈಭವ ಎಂದರೆ ತಪ್ಪಾಗಲಾರದು.
ಇದನ್ನೇ ಏನೋ ಗತಕಾಲದ ವೈಭವ ಅನ್ನುವುದು.
- ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಮಾನಸ….ಇದು ಮನಸಿನ ಮಾತು (ಭಾಗ-೩೮)
- ಮಾನಸ….ಇದು ಮನಸಿನ ಮಾತು (ಭಾಗ-೩೯)
- ಮಾನಸ….ಇದು ಮನಸಿನ ಮಾತು (ಭಾಗ-೪೦)
- ಮಾನಸ….ಇದು ಮನಸಿನ ಮಾತು (ಭಾಗ-೪೧)
- ಮಾನಸ….ಇದು ಮನಸಿನ ಮಾತು (ಭಾಗ-೪೨)
- ಮಾನಸ….ಇದು ಮನಸಿನ ಮಾತು (ಭಾಗ-೪೩)
- ಮಾನಸ….ಇದು ಮನಸಿನ ಮಾತು (ಭಾಗ-೪೪)
- ಮಾನಸ….ಇದು ಮನಸಿನ ಮಾತು (ಭಾಗ-೪೫)
- ಮಾನಸ….ಇದು ಮನಸಿನ ಮಾತು (ಭಾಗ-೪೬)
- ಮಾನಸ….ಇದು ಮನಸಿನ ಮಾತು (ಭಾಗ-೪೭)
- ಮಾನಸ….ಇದು ಮನಸಿನ ಮಾತು (ಭಾಗ-೪೮)
- ಮಾನಸ….ಇದು ಮನಸಿನ ಮಾತು (ಭಾಗ-೪೯)
- ಮಾನಸ….ಇದು ಮನಸಿನ ಮಾತು (ಭಾಗ-೫೦)
- ಮಾನಸ….ಇದು ಮನಸಿನ ಮಾತು (ಭಾಗ-೫೧)
- ಮಾನಸ….ಇದು ಮನಸಿನ ಮಾತು (ಭಾಗ-೫೨)
- ಮಾನಸ….ಇದು ಮನಸಿನ ಮಾತು (ಭಾಗ-೫೩)
- ಚಂಪಾ ಚಿನಿವಾರ್ – ಆಪ್ತಸಾಮಾಲೋಚಕಿ
