ಬಡವರ ಪಾಲಿನ ಆಶಾಕಿರಣ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಕೇಂದ್ರ

ಬಡವರ ಪಾಲಿನ ಆಶಾಕಿರಣ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಕೇಂದ್ರ
ರಾಜ್ಯದಲ್ಲಿಯೇ ಮೊದಲ ಎನ್‌ಎಬಿಎಲ್ ಪ್ರಮಾಣಪತ್ರ ಪಡೆದ ಹೆಗ್ಗಳಿಕೆ
ಬಿಪಿಎಲ್ ಕಾರ್ಡ್‌ದಾರರಿಗೆ ಶೇ೫೦ ರಷ್ಟು ಶುಲ್ಕ. ಎಸ್‌ಸಿ/ಎಸ್‌ಟಿಗಳಿಗೆ ಉಚಿತ ಚಿಕಿತ್ಸೆ.

ಇತ್ತೀಚೆಗಿನ ದಿನದಲ್ಲಿ ವೈದ್ಯಕೀಯ ಪರೀಕ್ಷೆಗಳು ದುಬಾರಿಯಾಗುತ್ತಿದೆ. ಬಡವರ, ಆರ್ಥಿಕ ದುರ್ಬಲರಿಗಂತೂ ಅವು ಗಗನಕುಸುಬ. ಚಿಕಿತ್ಸೆಗಿಂತ ವೈದ್ಯಕೀಯ ಪರೀಕ್ಷೆಗಳ ದರ ಕೈಗೆಟ್ಟಗದಂತಹ ಪರಿಸ್ಥಿತಿ ಇದೆ.

ಇಂತಹ ವಾತಾವರಣದಲ್ಲಿಯೂ ಕೆಲವು ಕತ್ತಲೆಯಲ್ಲಿ ಭರವಸೆ ಬೆಳಕಿನಂತೆ ಕಾರ್ಯನಿರ್ವಹಿಸುವ ಪ್ರಯೋಗಾಲಯಗಳು ನಮ್ಮ ನಡುವೆ ಇವೆ. ಅಂತಹವುದರಲ್ಲಿ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಕೇಂದ್ರವೂ ಒಂದು. ಬಡವರಿಗೆ, ಮಧ್ಯಮ ವರ್ಗದವರಿಗೆ ಅತಿ ಕಡಿಮೆ ದರದಲ್ಲಿ ಪರೀಕ್ಷೆಗಳನ್ನು ನಡೆಸುವ ಮೂಲಕ ಕೇಂದ್ರವು ಆರ್ಥಿಕವಾಗಿ ವರದಾನವಾಗಿದೆ. ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಪರೀಕ್ಷೆಗಳನ್ನು ನಡೆಸಿ ವರದಿಯನ್ನು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

97071578_1061252307608487_3798392995531718656_o

ಡಾ.ರಾಜೇಶ್ ಗೌಡ ಮತ್ತು ಪತ್ನಿ ಡಾ.ತೇಜ್ವಸಿನಿ

ಡಾ.ರಾಜೇಶ್ ಗೌಡ ಅವರು ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್‌ನ ರೂವಾರಿಯಾಗಿದ್ದಾರೆ. ಡಾ. ರಾಜೇಶ್‌ಗೌಡ ಅವರೊಂದಿಗೆ ಆವರ ತಂಡವು ಇದ್ದು, ಬಡವರಿಗೆ, ಮಧ್ಯಮವರ್ಗದವರಿಗೆ ಕಡಿಮೆ ದರದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ. ಅಲ್ಲದೇ, ಡಾ.ರಾಜೇಶ್ ಗೌಡ ಕೆಲಸಕ್ಕೆ ಅವರ ಪತ್ನಿ ಡಾ.ತೇಜ್ವಸಿನಿ ಅವರು ಸಹ ಕೈಜೋಡಿಸಿದ್ದಾರೆ. ಎಂಆರ್‌ಐ, ಸಿಟಿ ಸ್ಕ್ಯಾನ್, ಎಕ್ಸ್‌ರೇ, ವಿವಿಧ ರಕ್ತ ಪರೀಕ್ಷೆಗಳು ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗಳು ಕಡಿಮೆ ದರದಲ್ಲಿ ಮಾಡಲಾಗುತ್ತದೆ.

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ವಿಕ್ಟೋರಿಯಾ ಆಸ್ಪತ್ರೆಯ ಅವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯಲ್ಲಿ ಕೇಂದ್ರದ ಪ್ರಯೋಗಾಲಯ ಇದೆ. ಇಲ್ಲಿನ ವೈದ್ಯಕೀಯ ಪರೀಕ್ಷೆ ದರವು ವಿಕ್ಟೋರಿಯಾ ಆಸ್ಪತ್ರೆಗಿಂತಲೂ ಕಡಿಮೆ ಇದೆ. ಪ್ರತಿನಿತ್ಯ ಸಾವಿರಾರು ಮಂದಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದು, ಬಡವರ, ಮಧ್ಯಮ ವರ್ಗದವರು ಕಡಿಮೆ ದರದಲ್ಲಿ ಪರೀಕ್ಷೆ ಲಭ್ಯವಾಗಿರುವುದು ಆರ್ಥಿಕವಾಗಿ ನಿಟ್ಟಿಸಿರುಬಿಡುವಂತಾಗಿದೆ.

97071578_1061252307608487_3798392995531718656_o

ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಇ) ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಎಂಆರ್‌ಐ ಸ್ಕ್ಯಾನ್‌ಗೆ (ಮೆದುಳು) ೧೯೫೦ ರೂ., ಇತರೆ ಎಂಆರ್‌ಐ ಸ್ಕ್ಯಾನ್‌ಗೆ ೨೪೫೦ ರೂ., ಸಿಟಿ ಸ್ಕ್ಯಾನ್‌ಗೆ (ಮೆದುಳು) ೧,೧೦೦ ರೂ,  ಇತರೆ ಸಿಟಿ ಸ್ಕ್ಯಾನ್‌ಗೆ ೨,೫೦೦ ರೂ, ಅಲ್ಟ್ರಾಸೌಂಡ್‌ಗೆ ೨೫೦ ರೂ, ಎಕ್ಸರೇ ೧೦೦ರೂ, ಸೇರಿದಂತೆ ಪರೀಕ್ಷೆಗಳ ದರವು ಕಡಿಮೆಯಲ್ಲಿ ಲಭ್ಯ ಇದೆ.

ಎಸ್‌ಸಿ/ಎಸ್‌ಟಿಗೆ ಉಚಿತ – ಬಿಪಿಎಲ್‌ಗೆ ಶೇ.೫೦ರಷ್ಟು ರಿಯಾಯಿತಿ:
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಅದಕ್ಕೆ ಬೇಕಾದ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಇನ್ನು ಬಿಪಿಎಲ್ ಕಾರ್ಡ್ ಇರುವವರಿಗೆ ಶೇ.೫೦ರಷ್ಟು ರಿಯಾಯಿತಿ ಇದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಎನ್‌ಎಬಿಎಲ್ ಪಡೆದ ಮೊದಲ ಕೇಂದ್ರ :
ಸರ್ಕಾರಿ ಅಸ್ಪತ್ರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರೀಕ್ಷಾ ಪ್ರಯೋಗಾಲಯಗಳ ಪೈಕಿ ರಾಷ್ಟ್ರೀಯ ಮಾನ್ಯತಾ ಪ್ರಯೋಗಾಲಯ ಮಂಡಳಿಯಿಂದ (ಎನ್‌ಎಬಿಎಲ್) ಪ್ರಮಾಣ ಪತ್ರ ಪಡೆದ ಮೊದಲ ಕೇಂದ್ರ ಎಂಬ ಹೆಗ್ಗಳಿಕೆಗೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಪಾತ್ರವಾಗಿದೆ. ಎನ್‌ಎಬಿಎಲ್‌ನಿಂದ ಪ್ರಮಾಣ ಪತ್ರ ಪಡೆಯುವುದು ಸುಲಭವಲ್ಲ. ಮಂಡಳಿಯ ಮಾನದಂಡಗಳನ್ನು ಪಾಲನೆ ಮಾಡಿದರೆ ಮಾತ್ರ ಎನ್‌ಎಬಿಎಲ್ ಪ್ರಮಾಣ ಪತ್ರ ನೀಡಲಾಗುತ್ತದೆ. ಕೇಂದ್ರವು ಮಂಡಳಿಯ ಎಲ್ಲಾ ಮಾನದಂಡ ಅನುಸರಿಸಿದ ಕಾರಣ ಎನ್‌ಎಬಿಎಲ್ ಪ್ರಮಾಣ ಪತ್ರ ಲಭಿಸಿದೆ.

97071578_1061252307608487_3798392995531718656_o

ಇನ್ನು ಜರ್ಮನ್‌ನಿಂದ ಸಿಮೈನ್ಸ್ ಸಂಸ್ಥೆಯಿಂದ ಕೇಂದ್ರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಕಾರ್ಯವೈಖರಿಯನ್ನು ಮತ್ತು ಸೇವೆಯನ್ನು ಗಮನಿಸಿ ಮೆಚ್ಚಗೆ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಿಂದ ರೆಡಿಯಾಲಾಜಿಸ್ಟ್‌ಗಳು ಕೇಂದ್ರಕ್ಕೆ ಆಗಮಿಸಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವರಿಗೆ ಹೆಚ್ಚು ಹಣ ಕೇಳುವ ದೊಡ್ಡ ಡಯಾಗ್ನೋಸ್ಟಿಕ್‌ಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಸವಾಲಿನ ಕೆಲಸ. ಇಂತಹದರಲ್ಲಿ ಡಾ. ರಾಜೇಶ್ ಗೌಡ ನಡೆಸುತ್ತಿರುವ ಪರೀಕ್ಷಾ ಕೇಂದ್ರದ ಕಾರ್ಯವು ನಿಜಕ್ಕೂ ಶ್ಲಾಘನೀಯ.

ಪ್ರಭುಸ್ವಾಮಿ ನಟೇಕರ್ 

bf2fb3_2f3a9e85e75f4822b645cc4a91a8ec64~mv2.jpg

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW