ಮಾತು ಮುತ್ತು ಪೋಣಿಸಿದಂತಿರಲಿ…!

ಮಾತಿನಿಂದ ಎದೆ ಹಗುರವಾಗಿ ನಿರಾಳವಾಗುವಂತಾಗಲಿ… ನೊಂದ ನೋವಿಗೆ ಸಾಂತ್ವನದ ಹಾಡು ಹೇಳುವಂತಿರಲಿ… ಹಾಡುವ ಹಕ್ಕಿಗೆ ದನಿಗೂಡುವಂತಿರಲಿ !! – ಪ್ರೊ. ಸಿದ್ದು ಸಾವಳಸಂಗ ಅವರ ಮಾತಿನ ಕುರಿತಾದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಹಲವರಾಡುವ ಮಾತು
ಅದೆಷ್ಟು ಕರ್ಣ ಕಠೋರ !
ಕಿವಿಗೆ ಸುರಿಸಿದಂತೆ ಯಾರೋ ತಂದು ಸೀಸ
ಮಾತನಾಡುವ ಮಾತು ಮನವ ತಟ್ಟಿ
ಒಗೆದಂತೆ ಜೋರಾಗಿ ಅರಿವೆ ಬಟ್ಟಿ !
ಅದೆಷ್ಟು ಇವರ ಮನ ಖೊಟ್ಟಿ
ಇರಿದಂತೆ ಎದೆಗೆ ಚೋಪಾದ ಈಟಿ !
ಮಾತನಾಡುವ ಮುನ್ನ ಯೋಚನೆಗೂ ಕನ್ನ
ಮಾತಿನ ಬಾಣ ಎದೆಗೆ ಚುಚ್ಚಿ !
ಎಸೆದಂತೆ ಯಾರೋ ಎದೆಗೆ ಭರ್ಚಿ
ನಮ್ಮವರೆಂದು ತೋರಿದರೆ ಪ್ರೀತಿ
ಅವರದು ಬೇರೆಯೇ ಮಾತನಾಡುವ ರೀತಿ !
ಆಲೋಚಿಸಬಾರದೇ ಮಾತನಾಡುವ ಮುನ್ನ
ಮಾತಿನಿಂದ ಸ್ನೆಹ, ಮಾತಿನಿಂದ ಕಲಹ !!

ಮಾತು ಮುತ್ತು ಪೋಣಿಸಿದಂತಿರಲಿ !
ಕೇಳುವ ಕಿವಿಗೆ ಕೋಗಿಲೆಯ ಇಂಪಾಗಿರಲಿ
ಮಾತು ನಮ್ಮನ್ನು ಮತ್ತೆ ಮತ್ತೆ ಸನಿಹಕ್ಕೆ ತರಲಿ !
ಬದುಕಿನ ಜಂಜಾಟದ ನೂರು ನೋವ ಮರೆಸುವಂತಿರಲಿ !
ನಾಲಿಗೆಗೆ ಜೇನು ಸವಿದಂತಿರಲಿ
ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳುವಂತಿರಲಿ !
ಎದೆ ಹಗುರವಾಗಿ ನಿರಾಳವಾಗುವಂತಾಗಲಿ
ನೊಂದ ನೋವಿಗೆ ಸಾಂತ್ವನದ ಹಾಡು ಹೇಳುವಂತಿರಲಿ
ಹಾಡುವ ಹಕ್ಕಿಗೆ ದನಿಗೂಡುವಂತಿರಲಿ !!

ಮಾತುಮಾತಿನ ವಾದವಿವಾದ ಕಾವೇರಿದಾಗ
ಎದ್ದು ಹೊರ ನಡೆಯುವವನು ನಿಜವಾಗಿ ಜಾಣಮಗ !
ಸೊಕ್ಕು ಹೆಚ್ಚಾಗಿ ಅವರವರು ಗುದ್ದಾಡಿ ಸಾಯಲಿ
ನಮಗೇಕೆ ಬೇಕು ಬೇರೆಯವರ ಉಸಾಬರಿ, ಖಯಾಲಿ!
ನಮಗೆ ನಮ್ಮದೇಯಾದ ನೂರಾರು ಕನಸುಗಳಿವೆ
ನನಸು ಮಾಡಲು ನಾವು ಹಗಲಿರುಳು ಶ್ರಮವಹಿಸಬೇಕಲ್ಲವೆ ?


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading