ಮೈಸೂರಿನಲ್ಲಿ “ಮಾತುಕತೆ – ಕಾರ್ಯಗಾರ”

ಮೈಸೂರಲ್ಲಿ ನಡೆದ “ಮಾತು-ಕತೆ ಕಾರ್ಯಗಾರ” ದಲ್ಲಿ ಸುಮಾರು ೩೦ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಗಾರದಲ್ಲಿ 18 ವರ್ಷದಿಂದ 77 ವರ್ಷದ ತನಕ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು. ದೇವರಾಜ ಚಾರ್ ಅವರು ಈ ಕಾರ್ಯಗಾರದ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪ್ರಜಾವಾಣಿ ದಿನಪತ್ರಿಕೆ ಆಗಷ್ಟ 06, 2025 ರ ‘ಚಿಟಿಕೆ ಸುದ್ದಿ’ ಯಲ್ಲಿ, ಮೈಸೂರಲ್ಲಿ 10ನೇ ತಾರೀಕು ಕತೆ- ಲೇಖನ ರಚನೆ ಕಾರ್ಯಗಾರವಿದೆ ಎಂದು ಪ್ರಕಟಿಸಿದ್ದರು. ನಾನು ಸಾಮಾಜಿಕ ಜಾಲತಾಣದಲ್ಲಿದ್ದುದರಿಂದ ಮತ್ತು ಮಾತುಕತೆಯನ್ನು ಕೇಳಲು ಇಚ್ಛೆ ಉಳ್ಳವನಾದ್ದರಿಂದ ಕೊಟ್ಟಿದ್ದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿದೆ.ಸಂಚಾಲಕರಾದ ಶ್ರೀ ಜಿ.ಎಲ್. ತ್ರಿಪುರಾಂತಕ ರವರು ಫೋನನ್ನಲ್ಲಿ ಆಸಕ್ತಿ ಇದ್ದರೆ ಭಾಗವಹಿಸಿ ಎಂದು ತಿಳಿಸಿದರು. ವಿವರ ಕಳುಹಿಸುತ್ತೇನೆ ಎಂದಿದ್ದರು.

ಅವರು ಕಳುಹಿಸಿದ ಸಂದೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳ ವಿವರ ಮತ್ತು ಅವರು ಕಥೆ- ಲೇಖನ ರಚಿಸುವ ಮತ್ತು ಭಾಷಣ ಮಾಡುವ ಕುರಿತು ಮಾತನಾಡುವವರಿದ್ದಾರೆ ಎಂದು ತಿಳಿಸಿದ್ದರು. ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯಲ್ಲಿ ಒಬ್ಬರನ್ನು ಬಿಟ್ಟು ಬೇರೆಯವರ ವಿಚಾರ ತಿಳಿದಿರಲಿಲ್ಲ.

ಅವರಲ್ಲಿ ಒಬ್ಬರು ಶ್ರೀಮತಿ ಕುಸುಮಾ ಆಯಿರಹಳ್ಳಿ. ಇವರ ಹೆಸರನ್ನು ಕೇಳಿದ್ದೆ.ಅವರ ಪುಸ್ತಕ “ಕಪಿಲೆ ಕಂಡ ಕಥೆಗಳು” ಬಿಡುಗಡೆಯಾದ ಕಾರ್ಯಕ್ರಮವನ್ನು ಜಾಲತಾಣದಲ್ಲಿ ನೋಡಿದ್ದೆ. ಇತ್ತೀಚಿಗೆ ನಡೆದ ಬುಕ್ ಬ್ರಹ್ಮ ಶಿಬಿರದ ಒಂದು ಗೋಷ್ಠಿಯಲ್ಲಿ ಶ್ರೀಮತಿ ಕುಸುಮ ಆಯಿರಹಳ್ಳಿಯವರು ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಗೋಷ್ಠಿನಡೆಸುವ ಸಂಚಾಲಕಿಯಾಗಿದ್ದರು. ಇದನ್ನು ಸಹ ಆಸಕ್ತಿಯಿಂದ ಕೇಳಿಸಿಕೊಂಡಿದ್ದೆ.

ಫೋಟೋ ಕೃಪೆ : ಕನ್ನಡ ಪ್ರಭ

ಫೋನಿನಲ್ಲಿ ತ್ರಿಪುರಾಂತಕರವರ ಜೊತೆ ಮಾತನಾಡಿದಾಗ ಅವರು ಸಹ ಪತ್ರಿಕೆಯಲ್ಲಿ ಮತ್ತು ಜಾಲತಾಣದಲ್ಲಿ ಸಕ್ರಿಯ ರಾಗಿರುವ ವಿಷಯ ತಿಳಿಯಿತು. ಹೀಗಾಗಿ ಕಾರ್ಯಗಾರಕ್ಕೆ ಹೆಸರನ್ನು ನೋಂದಾಯಿಸಿಕೊಂಡೆ. ಹತ್ತನೇ ತಾರೀಕು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು . ಮೊದಲನೇ ಅವಧಿಯಲ್ಲಿ ಶ್ರೀ ಬಿ. ಎಸ್. ವಿನಯ್ ರವರು ಭಾಷಣವನ್ನು ಮಾಡುವ ಕಲೆಯನ್ನು ತಿಳಿಸಿ ಕೊಡುವುದಾಗಿ ಹೇಳಿದರು. ಸಂಚಾಲಕರು ಅವರ ಜ್ಞಾನಾರ್ಜನೆ ಮತ್ತು ಸೇವೆಗಳ ವಿವರ ತಿಳಿಸಿ, ವಿನಯ್ ರವರಿಗೆ ವೇದಿಕೆಯನ್ನು ಬಿಟ್ಟುಕೊಟ್ಟರು. ವಿನಯ್ ರವರು ಮಾತನಾಡುತ್ತಾ ಭಾಷಣ ಹೇಗೆ ಮಾಡಬೇಕು ಎಂದು ತಿಳಿಸುವುದು ನನಗೊಂದು ಸವಾಲ್ ಎಂದರು.

ಆದರೆ ಅವರು ನಿರರ್ಗಳ ವಾಗಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡು ಭಾಷಣ ಮಾಡುವ ಕಲೆಯನ್ನು ತಿಳಿಸಿ ಕೊಡುತ್ತಾ ಹೋದರು.ಪೂರ್ವ ತಯಾರಿ, ವಿಷಯ ಸಂಗ್ರಹ,ಭಾಷೆಯ ಮೇಲಿನ ಹಿಡಿತ, ಸಭಿಕರನ್ನು ಹೇಗೆ ಹಿಡಿದು ಇಟ್ಟುಕೊಳ್ಳುವುದು, ಎನ್ನುವುದನ್ನು ತಿಳಿಸಿಕೊಟ್ಟರು. ವಿಷಯಾಂತರ ಮಾಡದೆ, ಭಾಷಣದ ವಿಷಯ ಕಷ್ಟೇ ಸೀಮಿತವಾಗಿರಬೇಕು ಎಂದು ತಿಳಿಸಿಕೊಟ್ಟರು.

ನಂತರದಲ್ಲಿ ಶ್ರೀಯುತ ಜಿ. ಎ ಲ್.ತ್ರಿಪುರಾಂತಕ ರವರು ಒಂದು ಕಾರ್ಯಕ್ರಮ ನಡೆಸಲು ಪೂರ್ವ ತಯಾರಿ ಹೇಗಿರಬೇಕು? ಎನ್ನುವುದನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದ ಪಟ್ಟಿ ತಯಾರಿಸಿಕೊಳ್ಳಬೇಕು. ಒಬ್ಬ ನಿರೂಪಕನಿರಬೇಕು. ನಿರೂಪಕನಾದವನು ಹೇಗೆ ನಡೆದುಕೊಳ್ಳಬೇಕು ಎನ್ನುವ ವಿವರವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯವಾಗಿ ಇರಬೇಕಾದ ವ್ಯಕ್ತಿಗಳು ಯಾರು? ಅವರು ನಿರ್ವಹಿಸಬೇಕಾದ ಕೆಲಸ, ಅವರ ಹಿನ್ನೆಲೆ ಹೀಗೆ ವಿಷಯ ಸಂಗ್ರಹಿಸಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಭಾಷಣಕಾರರನ್ನು,ಅಧ್ಯಕ್ಷರ ವಿವರಗಳನ್ನು ಕೇಳಿ ತಿಳಿದುಕೊಳ್ಳಬೇಕು.

ಪ್ರಾರ್ಥನೆ ಮಾಡುವವರನ್ನು,ಸ್ವಾಗತ ಮಾಡುವವರನ್ನು,ಸನ್ಮಾನ ಗೊಳ್ಳುವ ವ್ಯಕ್ತಿಯ ಹೆಸರು ಇತ್ಯಾದಿ ತಿಳಿದುಕೊಳ್ಳಬೇಕು. ಸನ್ಮಾನದಲ್ಲಿ ಏನೇನು ಇದೆ ಅಂದರೆ ಶಲ್ಯ, ಹೂವಿನ ಹಾರ, ಫಲತಾಂಬೂಲ ಇದೆಯಾ ಎಂದು ತಿಳಿದುಕೊಳ್ಳಬೇಕು. ಸನ್ಮಾನ ಮಾಡುವವರ ಹೆಸರನ್ನು ಬರೆದುಕೊಳ್ಳಬೇಕು. ನಿರೂಪಣೆ ಮಾಡುವ ಸಭಿಕರನ್ನು ಹಿಡಿದು ಇಟ್ಟುಕೊಳ್ಳುವಂತೆ ಅಲ್ಲಲ್ಲಿ ಹಾಸ್ಯದ ತುಣುಕುಗಳನ್ನು ಹೇಳಬೇಕು. ಸ್ವಾಗತ ಕಾರ,ವೇದಿಕೆಯಲ್ಲಿ ಇರುವವರನ್ನು ಯಾವ ರೀತಿ ಸಂಬೋಧಿಸಬೇಕು ಎನ್ನುವುದನ್ನು ತಿಳಿಸಿಕೊಟ್ಟರು.

ವಂದನಾರ್ಪಣೆ ಮಾಡುವವನು ಸಹ ಸಂಕ್ಷಿಪ್ತವಾಗಿ, ಹೃದಯಪೂರ್ವಕ ಧನ್ಯವಾದ ಗಳನ್ನು ತಿಳಿಸಬೇಕು. ರಾಜೇಂದ್ರ ಪ್ರಿಂಟರ್ಸ್ ಮಾಲೀಕರು, ಸಂವಹನ ಪ್ರಕಾಶನದ ಪ್ರಕಾಶಕರು ಆದ ಶ್ರೀಯುತ ಎನ್. ಲೋಕಪ್ಪನವರನ್ನು ಸನ್ಮಾನಿಸಿದ್ದನ್ನು ಮರೆಯುವಂತಿಲ್ಲ.

ಸಂಯೋಜಕರು ಈ ಸನ್ಮಾನವನ್ನೇ ಅಣಕು ಪ್ರದರ್ಶನವಾಗಿ ಮಾಡಿಕೊಂಡು, ಕಾರ್ಯಗಾರದ ಅಭ್ಯರ್ಥಿಗಳಿಂದಲೇ ಈ ಕಾರ್ಯಕ್ರಮ ಪ್ರತ್ಯಕ್ಷವಾಗಿ ಆಚರಿಸುವ ಮೂಲಕ ಎಲ್ಲಾ ಅಭ್ಯರ್ಥಿಗಳಿಗೆ ಹೇಗೆ ಕಾರ್ಯಕ್ರಮ ನಡೆಸಬೇಕೆಂದು ತೋರಿಸಿಕೊಟ್ಟರು. ಎರಡನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಪೊನ್ನಾಚಿ ಸ್ವಾಮಿಯವರು ಸಣ್ಣ ಕಥೆಯ ರಚನೆಯನ್ನು ತಿಳಿಸಿಕೊಟ್ಟರು. ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತರು ಹೌದು.

ನಾವು ನೋಡಿದ ಘಟನೆಗಳನ್ನು ಇಟ್ಟುಕೊಂಡು,ಪಾತ್ರಗಳನ್ನು ಸೃಷ್ಟಿಸಿ ಓದುಗರಲ್ಲಿ ಆಸಕ್ತಿ ಮೂಡುವಂತ ವಿಷಯಗಳನ್ನು ಹೇಳುವ ಮೂಲಕ ಕಥೆ ರಚಿಸಲು ಪ್ರಯತ್ನಿಸಬೇಕು.ಸುಮಾರು 2000 ಪದಗಳಿದ್ದರೆ ಸಣ್ಣ ಕಥೆಗಳಾಗುತ್ತವೆ. ಅದನ್ನೇ ಲಂಬಿಸಿ 8000 ಪದಗಳವರೆಗೂ ಕಥೆ ಬರೆದರೆ ಅದು ನೀಳ ಕಥೆಯಾಗುತ್ತದೆ ಎಂದು ವಿವರಿಸಿದರು.ಸುಮಾರು ಒಂದು ಗಂಟೆ ಆಸಕ್ತರನ್ನು ಹಿಡಿದಿಟ್ಟುಕೊಂಡಿದ್ದರು.

ಶ್ರೀಮತಿ ಕುಸುಮ ಆಯಿರಹಳ್ಳಿ ಇವರು ಕಾದಂಬರಿ ರಚನೆ ಕುರಿತು ಮಾತನಾಡಿದರು. ಶ್ರೀಯುತ ಸ್ವಾಮಿಯವರು ಹೇಳಿದ್ದ,ಕಥೆ ಕಟ್ಟುವ ವಿವರವನ್ನೇ ಇಟ್ಟುಕೊಂಡು ಅದೇ ರೀತಿ ಆ ಕಥಾ ವಸ್ತುವನ್ನು ಲಂಬಿಸಿ ಪಾತ್ರಗಳಿಗೆ ಜೀವ ತುಂಬುವ ಮೂಲಕ 100 ಪುಟಗಳಷ್ಟು ಬರೆದರೆ ಒಂದು ಸಣ್ಣ ಕಾದಂಬರಿಯಾಗುತ್ತದೆ.ಇಷ್ಟೇ ಪುಟ ಇರಬೇಕು ಅನ್ನುವ ಒತ್ತಡವಿರಬಾರದು.

ಕಾದಂಬರಿ ಬರೆಯುವಾಗ ಯಾವುದೇ ಒತ್ತಡವಿರಲಿ, ನಾವೇ ಪಾತ್ರಧಾರಿ ಆಗಿ ಅದಕ್ಕೆ ಜೀವ ತುಂಬುವ ಕೆಲಸ ಮಾಡಬೇಕು. ಒಂದು ಕಾದಂಬರಿ ಓದುತ್ತಿರುವ ಓದುಗ ತನ್ನ ಇರವನ್ನು ಮರೆಯುವಂತಿರಬೇಕು. ತಾನು ಪ್ರತ್ಯಕ್ಷವಾಗಿ ಎಲ್ಲಿದ್ದರೂ ಕಾದಂಬರಿಯಲ್ಲಿ ಬರುವ ಸ್ಥಳಗಳ, ಪರಿಸರ, ವೇಳೆಗೆ ತನ್ನನ್ನೇ ಆವರಿಸಿಕೊಂಡರೆ ಕಥಾವಸ್ತು ಗೆದ್ದಂತೆ.

ಕೊನೆಯದಾಗಿ ಶ್ರೀಯುತ ತ್ರಿಪುರಾಂತಕರು ಲೇಖನಗಳನ್ನು ಬರೆಯುವುದು ಹೇಗೆ? ಎಲ್ಲಿಗೆ ಕಳುಹಿಸಬೇಕು? ವಸ್ತು, ಸನ್ನಿವೇಶಗಳನ್ನು ಆಯ್ಕೆ ಮಾಡಿ ಕೊಳ್ಳುವ ವಿಧಾನ ತಿಳಿಸಿಕೊಟ್ಟರು. ನಿಮ್ಮ ಬಡಾವಣೆಯಲ್ಲಿರುವ ಆಟಗಾರರನ್ನು,ಸಾಹಿತಿಗಳನ್ನು, ಸಮಾಜ ಸೇವಕರನ್ನು ಸಂದರ್ಶನ ಮಾಡಿ ಲೇಖನ ಬರೆಯಬಹುದು. ಪ್ರಸಿದ್ಧ ಸ್ಥಳಗಳ, ದೇವಸ್ಥಾನಗಳ ಕುರಿತು ಫೋಟೋ ಸಹಿತ ಲೇಖನಗಳನ್ನು ಬರೆಯಬಹುದು. ಲೇಖನಗಳಲ್ಲಿ ಸ್ವಂತಿಕೆ ಇರಬೇಕು.ಅದರಲ್ಲಿ ಬರುವ ಮುಖ್ಯ ವಾಕ್ಯಗಳನ್ನು ಗಮನ ಸೆಳೆಯುವ ತಂತ್ರ ಉಪಯೋಗಿಸುವ ಮೂಲಕ ಓದುಗರ ಗಮನ ಸೆಳೆಯಬಹುದು.ಲೇಖನದ ಶೀರ್ಷಿಕೆ ಮನಮುಟ್ಟುವಂತಿರಬೇಕು.

ಹೀಗೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು,ಸುಮಾರು 30 ಕಾರ್ಯಗಾರ ಅಭ್ಯರ್ಥಿಗಳನ್ನು ತಮ್ಮ ಕೌಶಲ್ಯದಿಂದ,ಹಾಸ್ಯ ಚಟಾಕಿಯಿಂದ ಹಿಡಿದಿಟ್ಟುಕೊಂಡು “ಮಾತು-ಕತೆ ಕಾರ್ಯಗಾರ” ನಡೆಸಿಕೊಟ್ಟರು. ಕಾರ್ಯಗಾರದಲ್ಲಿ ಎಲ್ಲಾ ವಯೋಮಾನದವರು ಅಂದರೆ 18 ವರ್ಷದಿಂದ 77 ವರ್ಷದ ತನಕ ಸದಸ್ಯರು ಇದ್ದರು. “ಮಾತು-ಕತೆ ಕಾರ್ಯಾಗಾರ”ದಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರ ಪರವಾಗಿ ಸಂಯೋಜಕರಿಗೆ,ಸಂಪನ್ಮೂಲ ವ್ಯಕ್ತಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಒಟ್ಟಿನಲ್ಲಿ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು.


  • ದೇವರಾಜ ಚಾರ್ – ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW