ಮದ್ದೂರು ವಡೆ ಮಾಡುವ ವಿಧಾನ

ಮದುವೆ ಮನೆ ಶೈಲಿಯಲ್ಲಿ ಅಡುಗೆ ಭಟ್ಟರು ಹೇಳಿದ ಹಾಗೆ ಮದ್ದೂರು ವಡೆ ಮನೆಯಲ್ಲಿ ಸವಿದಾಗ ಚನ್ನಾಗಿತ್ತು ಎನ್ನುತ್ತಾರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು. ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಬೇಕಾಗುವ ಪದಾರ್ಥಗಳು :

  • ಮೈದಾ – 2 ಕಪ್
  • ಮೀಡಿಯಂ ರವೆ – 1ಕಪ್
  • ಕರಿಬೇವಿನ ಸೊಪ್ಪು- ಸ್ವಲ್ಪ
  • ಹಸಿಮೆಣಸಿನ ಕಾಯಿ ಪೇಸ್ಟ್ -1ವರೆ ಸ್ಪೂನ್
  • ಶುಂಠಿ ಪೇಸ್ಟ್- 1 ಸ್ಪೂನ್
  • ಬೆಳ್ಳುಳ್ಳಿ ಪೇಸ್ಟ್- 1ಸ್ಪೂನ್
  • ಕೊತ್ತಂಬರಿ ಬೀಜ -1ಸ್ಪೂನ್
  • ಕಡ್ಲೆ ಬೀಜ -1 ಕಪ್
  • ಈರುಳ್ಳಿ-2
  • ರುಚಿಗೆ ತಕ್ಕಷ್ಟು -ಉಪ್ಪು
  • ಗೋಡಂಬಿ ಚೂರುಗಳು ( option )
  • ಬಿಸಿ ಎಣ್ಣೆ -100 ಗ್ರಾಂ
  • ಕರಿಯಲು ಎಣ್ಣೆ

ಮಾಡುವ ವಿಧಾನ :

ಈರುಳ್ಳಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕೊತ್ತಂಬರಿ ಬೀಜ ಹಾಗೂ ಕಡಲೆಬೀಜ ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಮಿಕ್ಸಿ ಮಾಡಿ ಕೊಳ್ಳಿ, ಕರಿಬೇವಿನ ಸೊಪ್ಪು ಹೆಚ್ಚಿಟ್ಟು ಕೊಳ್ಳಿ .
ಈಗ ಹೆಚ್ಚಿದ ಈರುಳ್ಳಿ ಗೆ ಮೇಲೆ ಹೇಳಿದ ಪದಾರ್ಥಗಳನ್ನು ಒಂದೊಂದಾಗಿ ಹಾಕಿ ಮೈದಾ ಮಾತ್ರ 1 ಕಪ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ .ನೀರು ಹಾಕುವುದು ಬೇಡ. ಕಾಯಿಸಿದ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆ ಇಟ್ಟು ಕೊಳ್ಳಿ.

ಈಗ ಎಣ್ಣೆ ಕಾಯಲು ಇಡಿ. ಮಿಕ್ಸ್ ಮಾಡಿದ ಮಿಶ್ರಣ ನೋಡಿಕೊಂಡು ಉಳಿದ ಒಂದು ಕಪ್ ಮೈದಾ ಹಾಕಿ ಚೆನ್ನಾಗಿ ಬೆರೆಸಿ ಅವಶ್ಯಕತೆ ಇದ್ದಲ್ಲಿ ನೀರು ಚಿಮುಕಿಸಿ ಕಲಸಿ ಉಂಡೆ ಮಾಡಿ ಕೊಳ್ಳಿ. ಮೈದಾ ಹಿಟ್ಟಿನಲ್ಲಿ ಉಂಡೆ ಅದ್ದಿ ಬೇಕಾದ ಸೈಜ್ ಗೆ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.

ವಿಸೂ ಎಣ್ಣೆ ಲೋ ಫ್ಲೆಮ್ ನಲ್ಲಿ ಇರಲಿ. ಆಗ ಮದ್ದೂರು ವಡೆ ಒಳಗೆಲ್ಲ ತುಂಬಾ ಚೆನ್ನಾಗಿ ಬೇಯುತ್ತದೆ. ಇಲ್ಲದಿದ್ದರೆ ಮೇಲೆ ಕೆಂಪಗಾಗಿ ಒಳಗೆಲ್ಲ ಮೆತ್ತಗೆ ಇರುತ್ತದೆ.


  • ಶಕುಂತಲಾ –  ನಳಪಾಕ ಪ್ರವೀಣೆ , ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading