‘ಮಿಡಿದ ಎದೆಯ ಹನಿಗಳು’ ಕವನ

ಜಾತಿ ಜಾತಿ ಎಂದು ನೀ…ಕಚ್ಚಾಡಬೇಡ, ಉಳಿಗಾಲವಿಲ್ಲ ಯಾರಿಗೂ ನಾವೆಲ್ಲಾ ಹಿಂದೂ ಒಂದೇ ಎಂದು ಒಗ್ಗಟ್ಟಿನಲಿ ನಿಲ್ಲುವವರೆಗೂ!…ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಭಾವನಾತ್ಮಕ ಕವನವನ್ನು ತಪ್ಪದೆ ಮುಂದೆ ಓದಿ…

ಗುಂಡು ಹಾರುವ ಮುನ್ನ
ಕೀಚಕನ ಬಂದೂಕು ನೋಡಿದ್ದು
ದಲಿತ, ಬ್ರಾಹ್ಮಣ,ಗೌಡನಾ ಎಂದಲ್ಲ
ಗುಂಡು ಹಾರಿದ್ದು ಕೇವಲ
ನೀನೊಬ್ಬ ಹಿಂದೂ ಎಂದು
ಅರ್ಥವಾಯಿತಲ್ಲ!?

ಮಾರಣ ಹೋಮ ನಡೆದರೂ
ಮಿಡಿಯದ
ಹೃದಯಗಳು
ಬಾಯಲ್ಲಿ ಸಗಣಿ ಚಪ್ಪರಿಸುತಿವೆ
ಲದ್ದಿ ಬುದ್ಧಿಯ
ಕ್ರಿಮಿಗಳು!

‘ಬನ್ನು ಕೊಡಿ ಹಸಿವಾಗುತಿದೆ’
ಎಂದು ಬೇಡುವ ಭಿಕ್ಷುಕನಿಗೂ
ಮನ ಮಿಡಿಯಿತು
ನಿನ್ನೆಯಿಂದ ಕೇಳುತ್ತಿದ್ದಾನೆ:
‘ನನಗೆ ಗನ್ನು ಕೊಡಿ ಸಾಕು’!

ಜಾತಿ ಜಾತಿ ಎಂದು ನೀ
ಕಚ್ಚಾಡಬೇಡ
ಉಳಿಗಾಲವಿಲ್ಲ ಯಾರಿಗೂ
ನಾವೆಲ್ಲಾ ಹಿಂದೂ ಒಂದೇ ಎಂದು
ಒಗ್ಗಟ್ಟಿನಲಿ
ನಿಲ್ಲುವವರೆಗೂ!

ಓಡಿ ಓಡಿ ದಣಿವಾದಾಗ
ವಿರಮಿಸಲು ಬೇಕು ನಿನಗೆ
ನಿನ್ನದೇ ಮನೆ
ನಿನ್ನ ದೇಶವೇ ನಿನಗಿಲ್ಲವಾದರೆ
ಆಶ್ರಯಕೆ ಎಲ್ಲಿ ಓಡುವೆ
ಬೇರೆಲ್ಲಿ ನಿನಗೆ ನೆಲೆ!?


  • ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading