ಹಸಿರು ಸೊಲ್ಲೊಳಗೆ ಸಾವಿರದ ಉಸಿರು…ಕವಿ ನಾಗರಾಜ ಬಿ.ನಾಯ್ಕ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹಗಲು ಅರಳಿದಂತೆ
ಬುವಿ ತುಂಬುವ ಹಾಡು
ಬೆಳಕಿನ ಹೊಸತನ
ಸಗ್ಗವನು ತೆರೆದಿಟ್ಟು
ಮೆಟ್ಟಿಲಿಗೆ ಹೂ ಹಾಸಿ
ದಿನದ ನಗುವಿಗೊಂದು
ಚಿತ್ತಾರವಿ ಹಗಲು …….
ಮುಗಿಲು ಮುಟ್ಟುವ
ಮನಕೆ ಮುದದಿ
ಮಾತನು ಕೊಟ್ಟು
ಮಲ್ಲಿಗೆಯ ನಗುವ ಚೆಲ್ಲಿ
ತೊದಲು ಮಾತಿನ
ಗೆಲುವಿಗೆ ಭರವಸೆಯ
ನೀಡುತಾ ಹಗುರವಾಗುವ
ಜಗವು ಈ ಇಳೆಯು ……
ಎಳೆಯ ಎಳೆಯೊಳಗೆ
ಬದುಕು ಭಾವದ ಬಿಂಬ
ಹಸಿರು ಸೊಲ್ಲೊಳಗೆ
ಸಾವಿರದ ಉಸಿರು
ಮುತ್ತಿನ ಮಣಿಗೆ
ಬೆಳಗೊಂದು ಆಸರೆ
ಇದ್ದ ಎಳೆಗೆಲ್ಲಾ
ಧನ್ಯತೆಯ ಸೊಬಗು
ಬದುಕಿದು ಬಣ್ಣದ ಬೆಡಗು……..
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ, ಉತ್ತರ ಕನ್ನಡ
