ಹಾಲಿನ ದುರ್ವಾಸನೆ: ಕಾರಣ ಮತ್ತು ಪರಿಹಾರ



ಹಾಲಿಗೆ ದುರ್ವಾಸನೆ ಬರುವುದಕ್ಕೆ ಅನೇಕ ಕಾರಣಗಳಿವೆ. ಅವುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಚಿಕಿತ್ಸೆ ಮಾಡಿ ಸರಿಪಡಿಸುವುದು ಜಾಣತನ – ಡಾ. ಎನ್.ಬಿ.ಶ್ರೀಧರ, ಮುಂದೆ ಓದಿ…

“ಯಾಕೋ ನಮ್ಮ ಹಸುವಿನ ಹಾಲು ದುರ್ವಾಸನೆ ಹೊಡೀತಿದೆ..ಯಾರೂ ತಗಳ್ತಿಲ್ಲ.. ಕಾಸಿದರೆ ತಳ ಹಿಡಿಯುತ್ತೆ..ಕುಡಿಯೋಕುಆಗಲ್ಲ.. ಹಾಲು ಮಾರೋಕೂಆಗಲ್ಲ..ಎನ್ಮಾಡೋದು..ದನಕ್ಕೆ ಚುಚ್ಚುಮದ್ದಿನ ಔಷಧಿ ನೀಡಿ ಡಾಕ್ಟ್ರೇ.. ಎನ್ನುವುದು ಬಹುತೇಕ ಪಶುವೈದ್ಯರುಜಾನುವಾರು ಪಾಲಕರಿಂದ ಎದುರಿಸುವ ಪ್ರಶ್ನೆ. ಇದಲ್ಲದೇ ಇದೊಂದು ಭೂತದ ಅಥವಾ ದುಷ್ಠ ಶಕ್ತಿಯ ತೊಂದರೆ ಎಂದು ಹಲವು ಜಾನುವಾರು ಪಾಲಕರು, ಮಾಂತ್ರಿಕರ ಮೊರೆ ಹೋಗಿ ಮೋಸ ಹೋಗುವುದೂ ಸಹ ಸಾಮಾನ್ಯ. ಹಾಲಿನ ದುರ್ವಾಸನೆ ಬಹಳ ಸಾಮಾನ್ಯವಾದ ಸಮಸ್ಯೆ. ಇದರ ಕಾರಣಗಳನ್ನು ಈ ಕೆಳಗಿನಚಿತೆ ವಿಂಗಡಿಸಬಹುದು –

  • ವಾತಾವರಣಜನ್ಯ ಮೂಲ
  • ಪ್ರಾಣಿಜನ್ಯ ಮೂಲ

ವಾತಾವರಣಜನ್ಯ ಮೂಲ – 

ಅನೇಕ ವಾಸನೆಯನ್ನುಂಟು ಮಾಡಬಲ್ಲ ವಸ್ತುಗಳು ದುರ್ವಾಸನೆಯನ್ನು ಹಾಲಿನಲ್ಲಿ ತೂರಿಸುತ್ತವೆ. ವಾಸನೆಗೆ ಕಾರಣವಾಗಬಲ್ಲ ಅನೇಕ ವಸ್ತುಗಳು ಹಾಲಿನಲ್ಲಿ ವಿವಿಧ ರೀತಿಯಲ್ಲಿ ಸೇರಿಕೊಳ್ಳುತ್ತವೆ. ಕೊಟ್ಟಿಗೆಯಲ್ಲಿ ಹಾಲು ಹಿಂಡುವಾಗ ಸ್ವಚ್ಚತೆಯಿಲ್ಲದಿದ್ದರೆ, ಹಾಲು ಶೇಖರಿಸುವ ಪಾತ್ರೆಗಳು ಶುದ್ಧವಾಗಿಲ್ಲದೇ ಹೋದಲ್ಲಿ, ಗಾಳಿ ಬೆಳಕು ಇಲ್ಲದಕಟ್ಟಡದಲ್ಲಿ ಹಾಲನ್ನು ಶೇಖರಿಸಿದರೆ, ಕೊಟ್ಟೆಗೆ ತೊಳೆಯುವಾಗ ಉಪಯೋಗಿಸಿದ ಕ್ರಿಮಿನಾಶಕ ಹಾಗೂ ಕೀಟನಾಶಕಗಳ ಶೇಷ ಹಾಲಿನಲ್ಲಿ ಸೇರಿಕೊಂಡಿದ್ದರೆ ಹಾಲಿಗೆ ವಾಸನೆ ಬರಬಹುದು. ಇದಲ್ಲದೇ ಸಗಣಿ, ಗಂಜಳ, ಮೇವಿನ ಪುಡಿ ಇತ್ಯಾದಿಗಳು ಹಾಲನ್ನು ಸೇರಿಕೊಳ್ಳಬಹುದು. ಕೆಲವೊಮ್ಮೆ ಹಾಲನ್ನು ಶೀತಲೀಕರಣಕ್ಕಾಗಿ ಶೇಖರಿಸಿಟ್ಟಾಗ, ಅದು ಸ್ವಚ್ಚವಿಲ್ಲದೇ ಹೋದಲ್ಲಿ, ದಿನಾ ಬೆಳಗಾದರೆ ಇದೆ ಆಗುವುದು .

Absorbed – feedy, barny, cowy, weedy, unclean, lacks freshness, stale, refrigerator/cooler odors.

Raw or pasteurized milk products can absorb flavors during production, storage and distribution. On the farm, off-flavors can be absorbed, or more correctly transmitted, through the bloodstream of the cow from the lungs and/or rumen into the milk in the udder (e.g., onion/garlic, feedy, barny, cowy). Similar off-flavors may be absorbed into the milk during farm storage if ventilation is poor and the milk is not protected. Pasteurized milk can absorb flavors during refrigeration storage, especially in paperboard or low barrier cartons. Examples of off-flavors that might be absorbed include volatile compounds of fruits or vegetables or unclean odors associated with poorly cleaned milk coolers. Absorption of flavors by packaged milk can occur at the plant, in the supermarket or in the consumers’ home refrigerators.

ಫೋಟೋ ಕೃಪೆ : iStock

ಹಾಲು ಅತ್ಯಂತ ಬೇಗ ಕೆಡಬಲ್ಲ ಆಹಾರ :

ಆಕಳುಗಳು ಮತ್ತು ಎಮ್ಮೆಗಳಲ್ಲಿ ಈ ಸಮಸ್ಯ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಇದರಿಂದ ಹಾಲು ಕುಡಿಯಲು ಮತ್ತು ಮಾರಲು ಸಾಧ್ಯವಿಲ್ಲ. ಅಲ್ಲದೇ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ ಮತ್ತು ಗಿಣ್ಣದಲ್ಲೂ ಸಹ ಈ ಸಮಸ್ಯೆ ತೊಂದರೆಯನ್ನುಂಟು ಮಾಡುತ್ತದೆ. ಈ ಸಮಸ್ಯೆಗೆ ಹಲವಾರು ಕಾರಣಗಳಿದ್ದರೂ ಸಹ ಮುಖ್ಯ ಕಾರಣ ಜಾನುವಾರುಗಳಿಗೆ ಅಹಾರ ನೀಡುವ ಪರಿಪಾಠ ಅಂದರೆ ತಪ್ಪಗಲಾರದು. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಈ ಸಮಸ್ಯೆಯ ಪ್ರಮಾಣ ಜಾಸ್ತಿ. ಇದಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ನಾವು ಗಮನಿಸಿದಂತೆ ಇದು ಮಂದ ಸ್ವರೂಪದ ಕೆಚ್ಚಲು ಬಾವಿನಿಂದಲೂ ಬರುತ್ತದೆ.

ಮಂದ ಸ್ವರೂಪದ ಕೆಚ್ಚಲು ಬಾವು :

ಇದು ವಿವಿಧರೀತಿಯ ಬ್ಯಾಕ್ಟಿರಿಯಾಗಳಿಂದ ಬರುತ್ತದೆ. ತೀವ್ರ ಸ್ವರೂಪದ ಕೆಚ್ಚಲು ಬಾವು ಬರುವುದಕ್ಕೆಇದೇ ಮೂಲ ಕಾರಣ. ಆದರೆಇದನ್ನು ಬರಿಗಣ್ಣಿನಿಂದ ಪತ್ತೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಕೆಚ್ಚಲು ಗಟ್ಟಿಯಾಗುವುದು, ಹಾಲು ನೀರಿನಂತೆ ಬರುವುದುಇತ್ಯಾದಿ ಇರುವುದಿಲ್ಲ. ಬದಲಾಗಿ ಹಾಲು ಉಪ್ಪಾಗುವುದು, ಹೆಪ್ಪುಗಟ್ಟದೇಇರುವುದು, ದುರ್ವಾಸನಾಯುಕ್ತವಾಗಿರುವುದು, ಕೆಲವು ಸಲ ಕಾಯಿಸಿದರೆ ಒಡೆದು ಹೋಗಲೂಬಹುದು. ಈ ರೀತಿಯ ಕೆಚ್ಚಲು ಬಾವನ್ನು ಸರಳವಾದ “ಕೆಚ್ಚಲು ಬಾವು ಪತ್ತೆ ಹಚ್ಚುವ ವಿಧಾನದ ಮೂಲಕ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು.
ಇದನ್ನು ರೈತರು ಸುಲಭವಾಗಿ ಮಾಡಬಹುದು. ಮಾರುಕಟ್ಟೆಯಲ್ಲಿ ರೂ. 2 ಕ್ಕೆ ದೊರಕುವ 12 ಗ್ರಾ ಪುಡಿಯನ್ನು 400 ಮಿಲಿ ಶುದ್ಧ ನೀರಿಗೆ ಬೆರೆಸಿ ಶೇ 3 ರದ್ರಾವಣ ತಯಾರಿಸಬೇಕು. ನಂತರ ಒಂದು ಪ್ಲಾಸ್ಟಿಕ್ ಮುಚ್ಚಳದಲ್ಲಿ 4-5 ಧಾರೆ ಹಾಲನ್ನುಕರೆದು ಸಮ ಪ್ರಮಾಣದ ಸ¥sóರ್ïದ್ರಾವಣದ ಮಿಶ್ರಣ ಮಾಡಿದಾಗ ಹಾಲು ಲೋಳೆಯಾದಲ್ಲಿ ಅದಕ್ಕೆ ಮಂದರೂಪದ ಕೆಚ್ಹ್ಚಲು ಇದೆ ಎನ್ನುವುದು ಖಚಿತವಾಗುತ್ತದೆ. ಅದಕ್ಕೆ ತಕ್ಕಂತೆ ಚಿಕಿತ್ಸೆಯನ್ನು ತಜ್ಞ ಪಶು ವೈದ್ಯರಿಂದ ಕೊಡಿಸಬೇಕು.

ಫೋಟೋ ಕೃಪೆ : iStock

ಕಳೆಗಳು, ದುರ್ವಾಸನಾಯುಕ್ತ ಮೇವು ಮತ್ತು ರಸಮೇವು :

ಬಹಳಷ್ಟು ಕಳೆಗಳನ್ನು ಜಾನುವಾರುತಿಂದಾಗ, ಅವುಗಳಲ್ಲಿರುವ ವಾಸನಾಯುಕ್ತ ಪದಾರ್ಥ ಹಾಲಿನಲ್ಲಿ ಸೃವಿಸಿ,ಹಾಲನ್ನುದುರ್ವಾಸನೆಗೆಈಡು ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಪಾರ್ಥೇನಿಯಮ್, ಕಾಸರಕ, ಲಂಟಾನಾ ಇವುಗಳ ಮಿಶ್ರಣವು ಹುಲ್ಲಿನಜೊತೆಆದರೆ ಹಾಲಿನ ದುರ್ವಾಸನೆಖಚಿತ. ಈ ರೀತಿಯದುರ್ವಾಸನೆಖಚಿತವಾದಲ್ಲಿ, ಈ ರೀತಿಯ ಕಳೆಗಳು ಅಹಾರದಲ್ಲಿ ಮಿಶ್ರಗೋಳ್ಳುವುದನ್ನು ತಡೆಗಟ್ಟಬೇಕು.

ಅಲ್ಲದೇ ರಾಸು ಸೇವಿಸುವ ಮೇವು ಮತ್ತು ರಸಮೇವು ಇವುಗಳು ಮುಗ್ಗುಲು ಹಿಡಿದಿದ್ದರೆ ಅಥವಾ ಹುಳಿ ಬಂದರೆ, ಅವುಗಳಿಂದ ಹಾಲಿಗೆ ಖಂಡಿತಾ ಬರುತ್ತದೆ.

ಹಾಲಿನಲ್ಲಿ ವಿವಿಧರೀತಿಯ ರಾಸಾಯನಿಕಗಳನ್ನು ಸೃವಿಸುವ ಸೂಕ್ಷ್ಮಾಣುಜೀವಿಗಳ ಇರುವಿಕೆ:

ಹಾಲು ವಿವಿಧರೋಗಕಾರಕ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಗೆ ಪೂರಕವಾದ ಪರಿಸರವನ್ನು ಹೊಂದಿದಉತ್ತಮ ವಸ್ತುವಾಗಿದೆ. ಇದರಲ್ಲಿಹೈಡ್ರೋಜನ್ ಸಲ್ಫೈಡ್ ಎಂಬ ಅನಿಲವನ್ನುತಯಾರಿಸಬಲ್ಲ ಹಲವಾರು ಸೂಕ್ಷ್ಮಾಣುಗಳು ಇದ್ದಾಗ, ಹಾಲಿಗೆ ಖಂಡಿತಾದುರ್ವಾಸನೆ ಬರುತ್ತದೆ. ಕಾರಣಇಂತಹ ಸಂದರ್ಭದಲ್ಲಿ, ಹಾಲಿನ ಮಾದರಿಯ ಪರೀಕ್ಷೆ ಮಾಡಿಸಿ, ಸೂಕ್ತ ಜೀವ ನಿರೋಧಕವನ್ನು ನೀಡುವುದುಉತ್ತಮ. ಹಾಲಿನ ಪಾತ್ರೆಯನ್ನು ಸರಿಯಾಗಿ ತೊಳೆಯದಿದ್ದರೆ ಕ್ರಿಮಿಗಳು ಬೆಳೆದು ಹಾಲಿಗೆ ದುರ್ವಾಸನೆಯುನ್ನುಂಟು ಮಾಡಬಹುದು.

ಜೀರ್ಣಕ್ರಿಯೆಯಲ್ಲಿ ಆಗುವ ವ್ಯತ್ಯಾಸ:

ಹಸುವಿನ ಜೀರ್ಣಕ್ರಿಯೆಯಲ್ಲಿ ಆಗುವ ವ್ಯತ್ಯಾಸ ಸಹ ಅನೇಕ ಅನಾವಶ್ಯಕ ಬ್ಯಾಕ್ಟಿರಿಯಾಗಳು ಬೆಳೆದು ಹೈಡ್ರೋಜನ್ ಸಲ್ಪೈಡ್‍ಉತ್ಪನ್ನವಾಗಿಇದುರಕ್ತ ನಂತರ ಹಾಲನ್ನು ಸೇರಿ ದುರ್ವಾಸನೆಯನ್ನುಂಟು ಮಾಡಬಹುದು. ಆಗ ಸೂಕ್ತ ಜೀವ ನಿರೋಧಕಗಳು ಅಥವಾ ಉತ್ತಮ ಬ್ಯಾಕ್ಟಿರಿಯಾಗಳನ್ನು ಬಳಸಬೇಕಾಗಬಹುದು.

ಫೋಟೋ ಕೃಪೆ : cedars-sinai.

ಪಶು ಅಹಾರಗಳ ವ್ಯತ್ಯಾಸ:

ಅನೇಕ ಸಲ ಹಲವು ಕಾರಣಗಳಿಂದ ಪಶು ಅಹಾರ ನೀಡುವಿಕೆಯಲ್ಲಿ ವ್ಯತ್ಯಾಸವಾದಾಗಲೂ ಸಹ ಹಾಲಿನಲ್ಲಿ ದುರ್ವಾಸನೆ ಉಂಟಾಗಬಹುದು. ಹೆಚ್ಚಿನ ಮೆಕ್ಕೆಜೋಳ ಹಿಂಡಿಯಲ್ಲಿಇದ್ದರೆ ಜಾನುವಾರಿಗೆ “ಅಸಿಡಿಟಿ” ಉಂಟಾಗುತ್ತದೆ. ದೊಡ್ಡಉದರದಆಮ್ಲತೆ ಹಾಲಿನ ಕ್ಷಾರತೆ ಹೆಚ್ಚಿಸಿ ಹಾಲಿನಲ್ಲಿಅನಗತ್ಯ ಬ್ಯಾಕ್ಟಿರಿಯಾ ಬೆಳೆಯಲು ಸಹಾಯ ಮಾಡುತ್ತದೆ. ಇದರಿಂದಲೂ ಸಹ ಹಾಲಿಗೆ ಕೆಟ್ಟ ವಾಸನೆ ಬರಬಹುದು. ದಿನವೂ ಎರಡು ಸಲ ಸುಮಾರು 30 ಗ್ರಾಂ ನಷ್ಟು ಅಡಿಗೆ ಸೋಡಾವನ್ನು ಆಹಾರದ ಮೂಲಕ ನೀಡುವುದರ ಮೂಲಕ ಈ ಸಮಸ್ಯೆಯನ್ನುಸ್ವಲ್ಪ ಮಟ್ಟಿಗೆ ಬಗೆ ಹರಿಸಬಹುದು.

ಖನಿಜಾಂಶಗಳ ಕೊರತೆ:

ಹಾಲು ಹಿಂಡುವ ಜಾನುವಾರುಗಳಿಗೆ ಅನೇಕ ನಿಜಾಂಶಗಳ ಮತ್ತು ಪೌಷ್ಟಿಕಾಂಶಗಳ ಅವಶ್ಯಕತೆ ಇದೆ. ಇವುಗಳನ್ನು ಉತ್ತಮ ಖನಿಜ ಮಿಶ್ರಣ ನೀಡುವುದರ ಮೂಲಕ ಬಗೆಹರಿಸಬಹುದು.



ಪ್ರಥಮೋಪಚಾರ:

ಹಾಲಿಗೆ ಕೆಟ್ಟ ವಾಸನೆ ಅಥವಾದುರ್ವಾಸನೆ ಪ್ರಾರಂಭವಾಗಲು ಅನೇಕ ದಿನಗಳು ಬೇಕು. ಕಾರಣ ಅದು ಗೊತ್ತಾದ ಕೂಡಲೇ ಅದರ ಕಾರಣ ಪತ್ತೆ ಹಚ್ಚಿತಕ್ಕಚಿಕಿತ್ಸೆ ಮಾಡಬೇಕು.

ಬಹುತೇಕಪ್ರಕರಣಗಳಲ್ಲಿ ಕೆಚ್ಚಲಿನಲ್ಲಿಕ್ಷಾರತೆ ಜಾಸ್ತಿಯಾಗಿ ಹಾಲಿಗೆ ವಾಸನೆ ಬರುತ್ತದೆ. ಕಾರಣಜಾನುವಾರಿಗೆ ಸೋಡಿಯಂ ಅಸಿಡ್ ಸಿಟ್ರೇಟ್ 15 ಗ್ರಾಮ್ ಮುಂಜಾವು ಮತ್ತು ಸಂಜೆ ನೀಡಬಹುದು. ಇದು ಸಿಗದೇ ಇದ್ದ ಪಕ್ಷದಲ್ಲಿ 5-6 ನಿಂಬೆ ಹಣ್ಣ್ಣುಗಳನ್ನು 4-5 ದಿನ ಅಹಾರದಲ್ಲಿ ನೀಡಬಹುದು.


  • ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW