ಮೊದಲ ನುಡಿ ‘ಕನ್ನಡ’ ಕವನ – ಅವಿನಾಶ ಸೆರೆಮನಿ

ಅವಿನಾಶ ಸೆರೆಮನಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ತಾಯೊಡಲಿಂದ ಹೊರಜಗತ್ತಿಗೆ ಬರುತ
ಮೊದಮೊದಲು ತೊದಲು ನುಡಿಯುತ
ಅಮ್ಮಾ ಎಂದುಸುರಿದ ಮೊದಲ ನುಡಿ
ಕನ್ನಡ

ಬರಿಗಲ್ಲಾಗಿದ್ದ ಮನಗಳ ಕೆತ್ತಿ
ಅದರೊಳಗೆ ಅಕ್ಷರವ ಬಿತ್ತಿ
ಸಾರ್ಥಕ ಬದುಕನು ಕಲಿಸಿದ ಭಾಷೆ
ಕನ್ನಡ

ಪರ ಭಾಷಿಗರನ್ನೂ ಸೆಳೆದು
ನಿರಾಶ್ರಿತರಿಗೂ ಆಶ್ರಯವಿತ್ತು
ಸ್ಫೂರ್ತಿಯಿಂದ ಬಾಳಲು ಕಲಿಸಿದ ಬೀಡು
ಕನ್ನಡ

ದ್ವೇಷಿಸುವವರಿಗೂ ಶುಭವನು ಕೋರಿದ
ಅಕ್ಕರೆಯಿಂದ ಸತ್ಕಾರ ತೋರಿದ
ಹೃದಯ ವೈಶಾಲ್ಯತೆಯ ಗೂಡು
ಕನ್ನಡ


  • ಅವಿನಾಶ ಸೆರೆಮನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading