ಮುತ್ತಿನ ಉದ್ಯಾನವನ

ಲೇಖನ :  ಭವಾನಿ ದಿವಾಕರ್

bf2fb3_d4f208c74d1b447aa6daced2595d03ef~mv2.jpg

ಪರಿಚಯ : ಭವಾನಿ ದಿವಾಕರ್ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್. ಬರವಣಿಗೆ, ಅಡುಗೆ ಅವರ ಹವ್ಯಾಸದಲ್ಲಿ ಒಂದಾಗಿದೆ. ಈಗಾಗಲೇ ಹಲವಾರು ಅಡುಗೆಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ.

ಪರಿಸರ ನಮ್ಮೆಲ್ಲರ ತಾಯಿಯಂತೆ.  ಅದನ್ನು ಕಾಪಾಡುವುದು ಪ್ರತಿ ಮನುಷ್ಯನ ಕರ್ತವ್ಯ. ಭೂಮಿಯನ್ನು ಕ್ಷಮಯಾಧರಿತ್ರಿ ಎಂದು ಉಲ್ಲೆಖಿಸುತ್ತಾರೆ. ಅದರ ಅರ್ತಾಥ್ ಭೂ ತಾಯಿ ಬಹಳ ಸಹನೆ ಉಳ್ಳವಳು ಎಂದು. ಎಲ್ಲಾವನ್ನು ಸಹಿಸುತ್ತಾಳೆ ಎಂದು. ಅದನ್ನು ಮನುಜ ಕುಲ ದುರುಉಪಯೋಗ ಮಾಡಿಕೊಳ್ಳುತ್ತಿದ್ದಾನೆ.

Robert swan ಎಂಬ ಪ್ರಖ್ಯಾತ ಲೇಖಕ ಹೇಳಿರುವ ಮಾತು ” The greatest threat to our planet is the belief that some one else will  save it”.

ಇದು ಸತ್ಯವಾದ ಮಾತು. ಯಾರೋ ಪರಿಸರವಾದಿಗಳು ಕಾಪಾಡುತ್ತಾರೆ ಎಂದು ನಾವು ಕೈ ಕಟ್ಟಿ ಕೂರಬಾರದು. ನಮ್ಮ ಕರ್ತವ್ಯವನ್ನು ನಾವು ಪಾಲಿಸೋಣ. ಪ್ಲಾಸ್ಟಿಕ್ ಬಳಿಕೆ ನಿಲ್ಲಿಸೋಣ. ಸರ್ಕಾರದ ಜೊತೆ ಕೈ ಜೋಡಿಸೋಣ. ಹಸಿ ಕಸ- ಒಣ ಕಸ ವಿಂಗಡಿಸೋಣ. ಮನೆಯ ಸುತ್ತ ಮುತ್ತ ಸ್ವಚ್ಛವಾಗಿ ಇಟ್ಟು ಕೊಳ್ಳೋಣ. ಗಿಡ ಮರಗಳನ್ನು ನೆಡೋಣ- ಪೋಷಿಸೋಣ. ಮಳೆಯ ಇಂಗು- ಗುಂಡಿಗಳನ್ನು ಮಾಡಿ, ನೀರಿನ ಬಳಿಕೆ ಕಮ್ಮಿ ಮಾಡೋಣ. ಹೀಗೆ ಹಲವಾರು ರೀತಿ ನಾವು ನಮ್ಮ ಪರಿಸರವನ್ನು ಕಾಪಾಡೋಣ ಅದನ್ನು ನಮ್ಮ ಮಕ್ಕಳಿಗೆ ಮನವರಿಕೆ ಮಾಡೋಣ.

ಈ ರೀತಿ ಮಾಡುವಲ್ಲಿ ನಮ್ಮ ಪರಿಸರವನ್ನು ತಕ್ಕಮಟ್ಟಿಗೆ ಆದರೂ  ರಕ್ಷಿಸಬಹುದು.

ನಮ್ಮ ಬಡಾವಣೆ ಇದಕ್ಕೆ ಮಾದರಿಯಾಗಿದೆ ಎಂದು ಹೇಳಲು ಹೆಮ್ಮೆ ಆಗುತ್ತದೆ. ನಮ್ಮ ಬಡಾವಣೆಯ ಹೆಸರು ಪರ್ಲ್ ಗಾರ್ಡನ್. ಹೆಸರಿಗೆ ತಕ್ಕಂತೆ ಮುತ್ತುಗಳಂತೆ ಸುತ್ತಲೂ ಗಿಡ ಮರಗಳು ಗಳ ಸಾಲುಗಳಿವೆ. ಪಕ್ಷಿಗಳ ಕಲರವ ಬೆಳಗಿನ ಶುಭೋದಯಗಳು.

ನಾನು ಆ ಬಡಾವಣೆಯ ವಾಸಿ. ನಮ್ಮದು ಚಿಕ್ಕ ಚೊಕ್ಕಬಡಾವಣೆ.

bhavani4

bhavani1

bhavani2ಫೋಟೋ ಕೃಪೆ : ವಿಸ್ಮಯ

(ವಿಸ್ಮಯ ಭವಾನಿಯವರ ಹಿರಿಯ ಮಗ. ವಿಸ್ಮಯಗೆ ಈಗ ೧೩ ವರ್ಷ ವಯಸ್ಸು. ಪಕ್ಷಿಗಳನ್ನು ತನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವ ತವಕ, ಯಾವಾಗಲೂ ಕುತ್ತಿಗೆಗೆ ಕ್ಯಾಮೆರಾ ನೇತು ಹಾಕಿಕೊಂಡು ಓಡಾಡುತ್ತ ಪ್ರಕೃತಿಯ ಸೌಂದರ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ವಿಸ್ಮಯಗೆ ಶುಭವಾಗಲಿ. )

ನಮ್ಮದು ಮುತ್ತಿನ ಉದ್ಯಾನವನ
ಪರಿಸರ ಮಾತೆಯ ಮಡಿಲಲ್ಲಿ ನಗುತಿರುವ ಉದ್ಯಾನವನ ||

ಚಿಲಿಪಿಲಿ ಚಿಲಿಪಿಲಿ ಎಂದು ಇಪಾಂಗಿ  ಹಾಡುತ್ತಿರುವ ಗಿಣಿ, ಕೋಗಿಲೆ, ಮೈನ, ಕೆಂಭೂತ ಹಲವಾರು ಪಕ್ಷಿಗಳು ಹಾಗೂ ಅಳಿಲುಗಳ ವಾಸಸ್ಥಾನ ನಮ್ಮಿ ಸುಂದರ ಉದ್ಯಾನವನ ||

ಆಗೊಮ್ಮೆ ಈಗೊಮ್ಮೆ ಬುಸ್ ಬುಸ್ ಎನ್ನೊ ನಾಗಪ್ಪನ ಜೊತೆಗೆ ಮುಂಗುಸಿ ಇರುವ ಉದ್ಯಾನವನ ||
ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ನೆರಳನ್ನು ನೀಡುತ್ತಿರುವ ಬಗೆಬಗೆಯ ವೃಕ್ಷವನ್ನು ಹೊಂದಿರುವ ನಮ್ಮಿ ಸುಂದರ ಉದ್ಯಾನವನ ||
ಶುದ್ದವಾದ ಜೀವ ಉಸಿರು  ಮತ್ತು ತಂಪಾದ ಗಾಳಿಯನ್ನುನೀಡುತ್ತಿರುವ ಶಬ್ದ ಮಾಲಿನ್ಯವಿಲ್ಲದ ಉದ್ಯಾವನ॥
ಹಿರಿಯರ ವಾಯುವಿಹಾರದಿಂದ ವಯಸ್ಕರ ಮನರಂಜನೆಯ ಜೊತೆಗೆ ಮಕ್ಕಳ ತುಂಟಾಟದ ನಗುವಿನೊಂದಿಗೆ ಕೂಡಿರುವ ನಮ್ಮಿ ಸುಂದರ ಉದ್ಯಾನವನ ||
ಒಂದು  ಮುಖ್ಯರಸ್ತೆ ಮತ್ತು ಮೂರು ಅಡ್ಡ ರಸ್ತೆಯನ್ನು ಹೊಂದಿರುವ ನಮ್ಮಿ ಉದ್ಯಾನವನ |
ಗಣೇಶನ ಪೂಜೆಗೆ ಕರ್ಣಕುಂಡಲ, ಎಕ್ಕದ ಹೂವು, ಪರಶಿವನ ಪೂಜೆಗೆ ಬಿಲ್ವಪತ್ರೆ, ಅಲಂಕಾರಕ್ಕೆ ಮಲ್ಲಿಗೆ, ದಾಸವಾಳ, ಪಾರಿಜಾತ, ನೈವೇದ್ಯಕ್ಕೆ ವಿಳ್ಳೆದೆಲೆ ಮತ್ತು ಹಲವಾರು ಬಗೆಯ ಸುಂಗಂಧ ಭರಿತ ಹೂವು ಪತ್ರೆಗಳನ್ನು ಹೊಂದಿರುವ ನಮ್ಮೀ ಸುಂದರ ಉದ್ಯಾನವನ ||

25 ಸಂಸಾರ ಸುಖವಾಗಿ ಗೂಡನ್ನು ಕಟ್ಟಿಕೊಂಡಿರುವ ಉದ್ಯಾನವನ ||

ನೆಮ್ಮದಿಯ ಸಂಸಾರದ ಹಾಡನ್ನು ಹಾಡುವುದಕ್ಕೆ, ಮಕ್ಕಳ ಆಟಪಾಠಗಳಿಗೆ, ಹಿರಿಯರ ವಾಯುವಿಹಾರಕ್ಕೆ, ವಯಸ್ಕರ ಮನರಂಜನೆಗೆ ಎಲ್ಲದಕ್ಕೂ ದಾರಿ ತೋರಿಸಿರುವ ನಮ್ಮ ಜನರ  ಉದ್ಯಾನವನ||

ಸಿಹಿಯಾದ ಹಲಸಿನಹಣ್ಣು, ರುಚಿಯಾದ ಸಪೋಟ, ಹುಳಿಯಾದ ಮಾವು, ಮಾಗಿರುವ ಬಾಳೆಹಣ್ಣು, ಉಪ್ಪಿನಕಾಯಿಗೆ ನಲ್ಲಿಕಾಯಿ, ಅಡಿಗೆಗೆ ನುಗ್ಗೆಕಾಯಿ ಹೀಗೆ ಫಲ ತುಂಬಿರುವ ಉದ್ಯಾನವನ |

ನವಿಲು, ಬೆಳ್ಳಕ್ಕಿ ಹೀಗೆ ಹಲವಾರು ಪಕ್ಷಿಗಳು ನೆಂಟರಾಗಿ ಬರುವ ನಮ್ಮ ಉದ್ಯಾನವನ |

ಹೀಗೆ ಎಲ್ಲ ಸೌಲಭ್ಯಗಳೊಂದಿಗೆ, ಪ್ರಕೃತಿಯ  ಮಡಿಲಿಲ್ಲಿ ಮಕ್ಕಳಂತೆ ಸಂಸಾರ ಮಾಡುತ್ತಿರುವ ಈ ಉದ್ಯಾನವನದ ನಿವಾಸಿಗಳು ನಿಜಕ್ಕೂ ಮುತ್ತುಗಳೇ ಸರಿ ||

ಇಂತಹ ಸುಂದರ ಪ್ರಕೃತಿಯ ಮಡಿಲಿಲ್ಲಿ ಹಕ್ಕಿಗಳಂತೆ ಗೂಡು ಕಟ್ಟಿಕೊಂಡು ಸಂಸಾರ ಮಾಡುತ್ತಿರುವ ನಾವು ನಿಜಕ್ಕೂ ಈ ಪ್ರಕೃತಿಯ ಮಕ್ಕಳೇ ಸರಿ॥

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಭವಾನಿಯವರ ಇತರೆ ಲೇಖನಗಳು :

0 0 votes
Article Rating

Leave a Reply

1 Comment
Inline Feedbacks
View all comments
vani raj

ನಿಜವಾಗಿಯೂ ಹೌದು ಭವಾನಿ

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW