ನಿಮ್ಮ ನಗು ಎಂದೂ ಬಾಡದಿರಲಿ…

ಗತಿಸಿದ ಕಾಲದ ಬಗ್ಗೆ ನೆನಪಿಸಿ ‘ಅಯ್ಯೋ’ ಅನ್ನುವುದಕ್ಕಿಂತ, ಸಾಧ್ಯವಾದರೆ ಸಕಾರಾತ್ಮಕ ವಿಷಯಗಳನ್ನು ಬರೆದು ನೊಂದು- ಬಾಡಿದ ಜೀವಗಳಿಗೆ ಉತ್ಸಾಹ ತುಂಬೋಣ…

ಮೇಘನಾ ರಾಜ್ ಪರಿಸ್ಥಿತಿ ನೋಡಿದ ಮೇಲೆ ಜೀವನ ಇಷ್ಟೇನಾ ಅನ್ನಿಸಿಬಿಟ್ಟಿತು. ನಾವು ಅಂದುಕೊಂಡಷ್ಟು ಜೀವನ ಸುಲಭವಾಗಿಲ್ಲ. ಸಾಕಷ್ಟು ಏರಿಳಿತಗಳಿವೆ. ಎಲ್ಲವನ್ನು ಎದುರಿಸಿ ಮುನ್ನುಗ್ಗಿ ಹೊರಟಾಗ ಈ ರೀತಿ ಅಚಾನಕ ತಿರುವುಗಳು ದೇಹ, ಮನಸ್ಸನ್ನು ಸ್ತಬ್ಧವಾಗಿಸಿ ಬಿಡುತ್ತದೆ. ಭಾನುವಾರ ಚಿರು ಕುಟುಂಬಕ್ಕಷ್ಟೇ ಕರಾಳ ದಿನವಾಗಿರಲಿಲ್ಲ. ಇಡೀ ನಾಡಿಗೆ ಕರಾಳ ದಿನವಾಗಿತ್ತು. ಯಾರ ಮನೆಯಲ್ಲಿಯೂ ನಗುವಿರಲಿಲ್ಲ. ಮೇಘನಾ ಅವರನ್ನು ನೋಡಿ ಹೃದಯ ಮಿಡಿಯದ ಜೀವಗಳಿರಲಿಲ್ಲ. ಕಣ್ಣೀರು ಇಲ್ಲದ ಮನೆಗಳಿರಲಿಲ್ಲ.

ಎಲ್ಲರಿಗೂ ಜೂನ್ ೭ ನೇಯ ತಾರೀಖು ಎಂದು ಮರೆಯದ ಕರಾಳ ದಿನವಾಗಿ ಹೋಯಿತು. ಪ್ರತಿಯೊಬ್ಬರ ಕಣ್ಣಲ್ಲಿ ನೀರು. ಕೆಲವರು ಬಾತ್ ರೂಮ್ ನಲ್ಲಿ ಕೂತು ಅತ್ತರೆ, ಇನ್ನು ಕೆಲವರು ಟಿವಿ ನೋಡುತ್ತಲ್ಲೇ ದುಕ್ಕಿಸಿದರು.

bhavaniಫೋಟೋ ಕೃಪೆ : Newskarnataka.com

ಮೇಘನಾ ಅವರೇ, ಮತ್ತೆ ಮತ್ತೆ ಹಳೆಯದನ್ನು ನೆನಪಿಸಿ ನಿಮಗೆ ನೋವು ಕೊಡುವ ಉದ್ದೇಶ ನನ್ನದಲ್ಲ. ನೀವು ಒಂಟಿಯಲ್ಲ. ನಿಮ್ಮೊಂದಿಗೆ ನಾಡಿನ ಜನತೆ ಇದೆ ಎಂದು ನೆನಪಿಸಿದ್ದಷ್ಟೇ. ನೀವು ಅಳಬಾರದು. ಹೋದ ಜೀವ ಮತ್ತೆ ಬರುವುದಿಲ್ಲ. ಆದರೆ ನಿಮ್ಮ ಹೊಟ್ಟೆಯಲ್ಲಿರುವ ಪುಟ್ಟ ಜೀವವನ್ನು ಮರೆಯಬೇಡಿ. ಆ ಪುಟ್ಟ ಕಂದಮ್ಮನ ಬಗ್ಗೆ ಕನಸ್ಸು ಕಾಣಿ. ಆ ಮುದ್ದು ಮುಖ ನಿಮ್ಮ ನೋವನ್ನೆಲ್ಲ ಮರಿಸಿಯೇ ಮರೆಸುತ್ತದೆ. ಆದರೆ ಈ ಸಮಯದಲ್ಲಿ ನಿಮ್ಮ ಕರ್ತವ್ಯ ಹೊಟ್ಟೆಯಲ್ಲಿರುವ ಆ ಕಂದಮ್ಮನ ಆರೋಗ್ಯದ ಕಡೆವಿರಬೇಕು.

ದೇಶಕ್ಕಾಗಿ ಪ್ರಾಣ ಬಿಟ್ಟ ಎಷ್ಟೋ ಯೋಧರ ಹೆಂಡತಿಯರಿಗೆ ನೀವು ಆದರ್ಶವಾಗಬೇಕು. ಹೆಣ್ಣು ಒಂಟಿಯಲ್ಲ. ಎಂತಹ ಸಂಕಷ್ಟಗಳು ಬಂದರೂ ಸಹ ಧೈರ್ಯವಾಗಿ ಆಕೆ ನಿಭಾಯಿಸಬಲ್ಲಳು ಎಂದು ನೀವು ಸಾಧಿಸಿ ತೋರಿಸಬೇಕು. ಬಂದ ಕಷ್ಟಗಳನ್ನು ಎದುರಿಸಲಾಗದೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಗಳಿಗೆ ತಕ್ಕ ಪಾಠ ಕಲಿಸುವ ಜೀವನ ನಿಮ್ಮದಾಗಬೇಕು.

೧೬ ಕನ್ನಡ ಚಿತ್ರಗಳು, ೨೧ ಮಳಿಯಾಳ0 ಚಿತ್ರಗಳು ಸೇರಿದಂತೆ ಇತರೆ ಭಾಷೆಗಳಲ್ಲಿ ನೀವು ನಟಿಸಿದ್ದೀರಿ. ನಿಮ್ಮ ಅತ್ಯುತ್ತಮ ನಟನೆಗೆ ಕೈಗನ್ನಡಿಯಂತೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ನಿಮ್ಮ ಮೂಡಿ ಸೇರಿವೆ. ನೀವು ಶ್ರೀ ಸಾಮಾನ್ಯರಂತೆ ಮೂಲೆ ಸೇರಬಾರದು. ನಿಮ್ಮಲ್ಲಿ ಪ್ರತಿಭೆಯಿದೆ. ಮಗು ದೊಡ್ಡದಾದ ಮೇಲೆ ಮತ್ತೆ ಬಣ್ಣ ಹಚ್ಚಿ, ಚಿತ್ರಲೋಕವಾಗಲಿ ಅಥವಾ ನಾಡಿನ ಜನತೆಯಾಗಲಿ ನಿಮ್ಮನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎನ್ನುವ ಭರವಸೆ ನನಗಿದೆ.

ಈ ಸಂದರ್ಭದಲ್ಲಿ ಬಂದ ಕಷ್ಟಗಳನ್ನು ಎದುರಿಸುವ ಶಕ್ತಿ ಆ ಭಗವಂತ ನಿಮಗೆ ನೀಡಲಿ. ನಿಮ್ಮ ಮುಖದಲ್ಲಿ ನಗು ಮತ್ತೆ ಅರಳಲಿ. ಮತ್ತು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಸದಾ ಆಶಿಸುತ್ತೇನೆ.

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಇತರೆ ಲೇಖನಗಳು : 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW