ನಮ್ಮ ಶರಾವತಿ ನದಿ

ಕವನ : ನಾಗರಾಜ್ ಲೇಖನ್ (ಹರಡಸೆ, ಹೊನ್ನಾವರ)

amma

ನಮ್ಮ ಶರಾವತಿಯ ಸೌಂದರ್ಯವನ್ನು ಕವನದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಾಗರಾಜ್ ಲೇಖನ್. ಓದಿ ಇಷ್ಟವಾದರೆ ಲೈಕ್ ಮಾಡಿ,ಶೇರ್ ಮಾಡಿ ಯುವ ಬರಹಗಾರರನ್ನು ಪ್ರೋತ್ಸಾಹಿಸಿ

ಚಂದವತಿ ಈ ನಮ್ಮ ಸೃಷ್ಠಿಯ ಸೊಬಗಿನ ಶರಾವತಿ
ಬಗೆ ಬಗೆ ಬಣ್ಣನೆಯ ಜೋಗದ ಜಲಸಿರಿ ಈ ಪುಣ್ಯವತಿ
ಬಳುಕುತ, ಕುಲುಕುತ ನಗುವನು ಚೆಲ್ಲುವ ಗಂಧವತಿ
ಚಿನ್ನದ ಬದುಕಿನ ಸಂಸ್ಕೃತಿ ನಡುವೆ ಸಾಗುವ ಭಾಗ್ಯವತಿ

ಒಲವಿನ ಬೆಳೆ ಕಾಣುವ ಮನುಜರಿಗಿದು ಜೀವಜಲ
ಸುಂದರ ಸೊಬಗಿನ ಪ್ರಕೃತಿ ಹರಿಯು ನೆಲ
ಹರಿಯುತಿಹಳು ಹಸಿರಿನ ನಡುವೆ ಹರುಷದಿ
ಮಲೆನಾಡಿನ ಮಣ್ಣಿನ ಮಕ್ಕಳ ಭಾಗ್ಯನದಿ, ಪುಣ್ಯನದಿ ಈ ಶರಾವತಿ

ಸೀತೆಯ ತೃಷೆಯಿಂದ, ಶ್ರೀರಾಮನ ಶರದಿಂದ
ಜನಿಸಿದ ಪುತ್ರಿಯು
ಹಸಿರಿನ ಬೆಳೆ ತರುವ, ಕುಡಿಯುವ ಜಲ ತರುವ
ಅಂಬುತೀರ್ಥದ ಚೆಲುವೆಯು
ಅತಿವೇಗದಿ ಧುಮುಕುತ ಜೋಗ ಜಲಪಾತವ
ಸೃಷ್ಠಿಸಿದ ಜನನಿಯು

ಜಲಾಶಯದಿ ಜಿಗಿಯುತ ಬೆಳಕನು ನೀಡುವ
ಪಶ್ಚಿಮ ಘಟ್ಟದ ಜ್ಯೋತಿಯು
ತಾನು ಹೆಜ್ಜೆಯಿಟ್ಟಲೆಲ್ಲಾ ರೈತರ ಮಣ್ಣಿನ
ಹರಕೆಯ ಕಾಯುವ ದೇವಿಯು
ಬಯಲಲಿ, ಕಾಡಲಿ, ಝಳಝಳ ನಾಟ್ಯವ
ಮಾಡುತ ಹರಿಯುವಳು

ಹರಿಯುವ ನೆಲದಲಿ, ಹಸಿರಿನ ಫಲಕೊಟ್ಟು
ಮಣ್ಣಿನ ಋಣವ ತೀರಿಸುತ ಸಾಗುವಳು
ಪ್ರೇಮದಿ ಹರಿದು ಜೀವಗಳಲ್ಲೊಂದಾಗಿ ಓಡುವಳು
ಸಂಗಮಕ್ಕೆಂದು ಸಾಗರದೆಡೆಗೆ
ಮನುಕುಲ ಉಳಿಸುವ ಹಸಿರಿನ ಪರಿಸರ
ಸಂಭ್ರಮ, ಸಡಗರ ಈ ಮಾತೆಗೆ
ನಿತ್ಯವೂ ಕೈ ಮುಗಿದು ಸಾಗು ನೀ ಮನುಜ
ಈ ಸಿಹಿ ನೀರಿನ ದೇವತೆಗೆ

 

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ನಾಗರಾಜ್ ಲೇಖನ್ ಅವರ ಹಿಂದಿನ ಬರಹ : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW