ಡಾ. ನಾಗ ಎಚ್ ಹುಬ್ಳಿ ಅವರ ಪುಟ್ಟ ಪುಟ್ಟಿ ಕಥೆಗಳು ಮತ್ತು ಒಂದು ನಮಸ್ಕಾರ ಮತ್ತು ಇತರ ಕಥೆಗಳು ಎರಡು ಕೃತಿಗಳು ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಆ ಕೃತಿಗಳ ಕುರಿತು ಲೇಖಕರ ಮಾತು. ಖರೀದಿಗಾಗಿ ಸಂಪರ್ಕಿಸಿ ….
ಪುಸ್ತಕ : ಪುಟ್ಟ ಪುಟ್ಟಿ ಕಥೆಗಳು ಮತ್ತು ಒಂದು ನಮಸ್ಕಾರ ಮತ್ತು ಇತರ ಕಥೆಗಳು
ಲೇಖಕರು : ಡಾ. ನಾಗ ಎಚ್ ಹುಬ್ಳಿ
ಬೆಲೆ :೨೬೦.೦೦
ರಿಯಾಯ್ತಿ ಬೆಲೆ : ೨೨೦.೦೦
ಖರೀದಿಗಾಗಿ : 7091488490
ಮೊದಲನೆಯ ಪುಸ್ತಕ ‘ಪುಟ್ಟ ಪುಟ್ಟಿ ಕಥೆಗಳು.’ ಇದು ನನ್ನ ಸ್ವತಂತ್ರ ಕೃತಿಯಲ್ಲ; ನಾನು ಸಂಪಾದನೆ ಮಾಡಿದ್ದು. ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಪ್ರಶಸ್ತಿ ಪಡೆದ ಕನ್ನಡದ ಹೆಸರಾಂತ ಲೇಖಕರು ಬರೆದ ಹದಿನಾಲ್ಕು ಮಕ್ಕಳ ಕಥೆ (ಎರಡು ಕವನ)ಗಳನ್ನು ಒಳಗೊಂಡ ಪುಸ್ತಕವಿದು.

ಡಾ. ಬೋಳುವಾರು ಮಹಮದ್ ಕುಂಞ, ಡಾ. ನಾ. ಡಿಸೋಜ, ಶ್ರೀ ಪಳಕಳ ಸೀತಾರಾಮ ಭಟ್ಟ, ಡಾ. ಎಚ್. ಎಸ್. ವೆಂಕಟೇಶ ಮೂರ್ತಿ, ಪ್ರೊ. ನಾಗರಾಜ ಶೆಟ್ಟಿ, ಡಾ. ಸುಮತೀಂದ್ರ ನಾಡಿಗ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಶ್ರೀ ಕಂಚ್ಯಾಣಿ ಶರಣಪ್ಪ ಶಿವಸಂಗಪ್ಪ, ಶ್ರೀ ಚಂದ್ರಕಾಂತ ಕರದಳ್ಳಿ, ಶ್ರೀ ಹ.ಸ. ಬ್ಯಾಕೋಡ, ಡಾ. ಬಸು ಬೇವಿನಗಿಡದ, ಶ್ರೀ ತಮ್ಮಣ್ಣ ಬೀಗಾರ, ಶ್ರೀಮತಿ ವಿಜಯಶ್ರೀ ಹಾಲಾಡಿ ಮತ್ತು ಶ್ರೀ ಕೃಷ್ಣಮೂರ್ತಿ ಬಿಳಿಗೆರೆ ಅವರು ಬರೆದ ಮಕ್ಕಳ ಕಥೆಗಳು ಇದರಲ್ಲಿವೆ. ಕಥೆ-ಕವನ ನೀಡಿದ ಲೇಖಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಮತ್ತು ಪುಸ್ತಕಕ್ಕೆ ಮುನ್ನುಡಿ ಬರೆದು ಹಾರೈಸಿದ ಹಿರಿಯ ಸಾಹಿತಿ ಪ್ರೊ. ಕೆ. ಮರುಳಸಿದ್ದಪ್ಪ ಅವರಿಗೆ ನಾನು ಆಭಾರಿಯಾಗಿದ್ದೇನೆ.
ಇನ್ನೊಂದು ಪುಸ್ತಕ ‘ಒಂದು ನಮಸ್ಕಾರ ಮತ್ತು ಇತರ ಕಥೆಗಳು.’ ಇದು ನಾನು ಮಕ್ಕಳಿಗಾಗಿ ಬರೆದ ಇಪ್ಪತ್ತು ಕತೆಗಳನ್ನು ಒಳಗೊಂಡಿದೆ. ಈ ಕೃತಿಗೆ ನಾಡಿನ ಹೆಸರಾಂತ ಮಕ್ಕಳ ಸಾಹಿತಿ ಶ್ರೀಯುತ ತಮ್ಮಣ್ಣ ಬೀಗಾರ ಅವರು ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಅವರಿಗೆ ನಾನು ಕೃತಜ್ಞ.

ಈ ಎರಡೂ ಪುಸ್ತಕಗಳಿಗೆ ಖ್ಯಾತ ಕಲಾವಿದ ಶ್ರೀ ಸತೀಶ್ ಯಲ್ಲಾಪುರ ಅವರು ಅಂದವಾದ ಮುಖಪುಟ ಮತ್ತು ಒಳಪುಟಗಳ ಚಿತ್ರ ರಚಿಸಿದ್ದಾರೆ. ಅವರ ಸಹಕಾರಕ್ಕೆ ಶರಣು.
ನನ್ನ ಸಮೀಪದ ಬಂಧು ಪ್ರಕಾಶ್ ಅವರು ನನ್ನ ಈ ಎರಡು ಕೃತಿಗಳನ್ನು ಪ್ರಕಟಿಸುವ ಮೂಲಕ ಪ್ರಕಾಶನ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಈ ಕ್ಷೇತ್ರಕ್ಕೆ ಹೊಸಬರು… ಸದುದ್ದೇಶದಿಂದ ಎರಡೂ ಪುಸ್ತಕಗಳಿಗೆ ಬೆಲೆಯನ್ನು ತುಂಬಾ ಕಡಿಮೆ ಇರಿಸಿದ್ದಾರೆ (ಎರಡು ಪುಸ್ತಕಗಳ ಒಟ್ಟು ಮುಖಬೆಲೆ ರೂ. 260. ಪ್ರಕಾಶಕರು ರೂ. 220 ಕ್ಕೆ ನೀಡುತ್ತಿದ್ದಾರೆ. ಅಂಚೆ ವೆಚ್ಚ ಅವರೇ ಭರಿಸುತ್ತಾರೆ.) ನಿಮ್ಮೆಲ್ಲರ ಬೆಂಬಲ ಸಿಗುತ್ತದೆ ಎನ್ನುವ ನಿರೀಕ್ಷೆ ಅವರದ್ದು. ನನ್ನ ಕೋರಿಕೆಯೂ ಇದೇ ಆಗಿದೆ. ಅವರ ಮೊಬೈಲ್ ಸಂಖ್ಯೆ 7091488490. (ಮಕ್ಕಳಿಗೆ ಉಡುಗೊರೆ ನೀಡುವುದಕ್ಕೂ ಉಪಯುಕ್ತವಾಗಿದೆ)
ನೀವು ಓದಿದರೆ ನನಗೂ ಶಕ್ತಿ ಬರುತ್ತದೆ; ಇನ್ನಷ್ಟು ಬರೆಯುವುದಕ್ಕೆ ಸ್ಫೂರ್ತಿ ಸಿಗುತ್ತದೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ…
- ನಾಗ ಎಚ್. ಹುಬ್ಳಿ.
