ನಾಗ ಸಂಪಿಗೆ ಮಹತ್ವ : ಸುಮನಾ ಮಳಲಗದ್ದೆ

ನಾಗ ಕೇಸರ ಕುಸುಮದ ಪುಡಿಯನ್ನು ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ. ನಾಗಸಂಪಿಗೆ ಮಹತ್ವದ ಕುರಿತು ನಾಟಿವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..

ನಾಗ ಕೇಸರ ಅಥವಾ ಚಿತ್ತೆ ಬೀಜ. ಶಾಲೆಯ ರಜಾದಿನಗಳಲ್ಲಿ ಪಿರಿಯಡ್ ಗ್ಯಾಪ್ ಅಲ್ಲಿ ನಮ್ಮ ಆಟಗಳ ಸಾಲಿನಲ್ಲಿ ಚಿತ್ತೆಯಾಗಿ, ಗೋಲಿಯಾಗಿ, ಹುಲಿ ಹಸುವಿನ ದಾಳಗಳಾಗಿ, ಪಗಡೆಯ ಕವಡೆಯಾಗಿ ನಮ್ಮ ಆಟದ ಪರಿಕರ ಗಳಲ್ಲಿ ಒಂದು. ನಾಗಬನಗಳಂತಹ ದೇವರ ಸಾನಿಧ್ಯದಲ್ಲಿ ಈ ಮರಗಳ ಆಯ್ಕೆ ಹೆಚ್ಚು. ಮಲೆನಾಡಿನ ಮರದ ಹಲಗೆಯ ಚಾವಣಿಗೆ ಇದರ ಎಲೆ ಹಾಕಿ ಮಣ್ಣು ಹಾಕಿ ನೆಲಮಾಡಿದರೆ ಗೆದ್ದಲು ಭಯ ಇರುವುದಿಲ್ಲ. ಈಗಲೂ ಹಳೆಯ ಕಾಲದ ಮನೆ ಕೆಡವಿದಾಗ ಈ ಎಲೆಗಳ ಪಳೆಯುಳಿಕೆ ಹಾಗೆ ಇರುವುದು ಕಾಣಬಹುದು. ಇದರ ಎಣ್ಣೆ ಸವರಿದ ಮರದ ಫೀಟೋಪಕರ್ಣ ಹಾಳಾಗುವುದಿಲ್ಲ. ಇದರ ಕಾಯಿ, ಹೂವಿನ ಕುಸುಮ, ಎಲೆಗಳನ್ನು ಮೆಡಿಸಿನ್ ಗೆ ಉಪಯೋಗಿಸುತ್ತಾರೆ.

1) ಹೂವಿನ ಕುಸುಮವನ್ನು ಬೆಣ್ಣೆ ಸೇರಿಸಿ ಸೇವಿಸಿದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.

2) ಕುಸುಮದ ಪುಡಿಯನ್ನು ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.

3) ಕೇಸರವನ್ನು ತುಪ್ಪ ಸೇರಿಸಿ ಸೇವಿಸಿದರೆ ಬಿಳಿಮುಟ್ಟು ಗುಣವಾಗಿ ದೇಹ ಪುಷ್ಟಿ ಆಗುತ್ತದೆ.

4) ಅಂಗಾಲು ಅಂಗೈ ಉರಿಗೆ ನಾಗಸಂಪಿಗೆ ತುಪ್ಪವನ್ನು ಸವರಿ ಕೆಂಡದಲ್ಲಿ ಕಾಯಿಸಿದರೆ ಗುಣವಾಗುತ್ತದೆ.

5) ನಾಗಸಂಪಿಗೆ ತುಪ್ಪವನ್ನು ಜಾಯಿಕಾಯಿ ಪುಡಿಸೇರಿಸಿ ಸೇವಿಸಿದರೆ ಬೇದಿ ನಿಲ್ಲುತ್ತದೆ.

6) ಇದರ ತುಪ್ಪದ ದೀಪ ಬಾಣಂತಿ ಕೋಣೆಯಲ್ಲಿ ಬೆಳಗಿಸಿ ದರೆ ವಿಷ ಜಂತು ಭಯವಿಲ್ಲ ಮತ್ತು ಶಿಶು ಬಾಳಂತಿಗೆ ಧನುರ್ವಾತ ಬರುವುದಿಲ್ಲ.

7) ವಾತರೋಗಕ್ಕೆ ಹೊರಗಡೆ ಹಚ್ಚಿದರೆ ನೋವು ಶಮನವಾಗುತ್ತದೆ.

8) ಹೂವಿನ ಕುಸುಮ ವನ್ನು ತುಪ್ಪ ದಲ್ಲಿ ಹುರಿದು ಅನೇಕ ಗಿಡಮೂಲಿಕೆ ಉಪಯೋಗಿಸಿ ನಾನು ತಯಾರಿಸುವ ಔಷಧಿ ವೀರ್ಯ ವೃದ್ಧಿ ಗೆ ಬರುತ್ತದೆ.


  • ಸುಮನಾ ಮಳಲಗದ್ದೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW