ಮತ್ತೆ ಬದುಕು ಕಟ್ಟಿಕೊಂಡ ‘ನಾಗೇಂದ್ರ ಸಾಗರ್’

ಪತ್ರಿಕೋದ್ಯಮದ ಭೀಷ್ಮ ವಿ ಎನ್ ಸುಬ್ಬರಾವ್ ಅವರ ಶಿಷ್ಯರಾದ ನಾಗೇಂದ್ರ ಸಾಗರ್ ಅವರು ರವಿಬೆಳೆಗೆರೆ, ಪ್ರಕಾಶ್ ರೈ, ಪಬ್ಲಿಕ್ ಟಿವಿ ರಂಗನಾಥ ಮುಂತಾದವರ ಜೊತೆಯಾದರು. ಮುಂದೆ ತಂದೆಯ ಜಮೀನಿನಲ್ಲಿ ರೈತರಿಗಾಗಿ ಅಗ್ರಿ ಕ್ಲಿನಿಕ್ ಸಾಗರ್ ಅಗ್ರಿಕೋ ಪ್ರಾರಂಭಿಸಿದರು. ಮುಂದೇನಾಯಿತು ನಾಗೇಂದ್ರ ಸಾಗರ್ ಅವರ ಸಾಧನೆಯ ಬದುಕಿನ ಕುರಿತು ಅರುಣ್ ಪ್ರಸಾದ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಇವರು ಈ ಭಾಗದ ಕೃಷಿ ವಿಜ್ಞಾನಿ, ಜೇನು ಸಾಗಾಣಿಕೆ ತರಬೇತುದಾರರು, ಎರೆಹುಳದ ಗೊಬ್ಬರ ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಉದ್ದಿಮೆದಾರರು, ಡೈರಿ ಮಾಲೀಕರು, ಪಶು ಆಹಾರ ತಯಾರಕರು, ಹನಿ ನೀರಾವಾರಿ, ನಸ೯ರಿ, ಅಪರೂಪದ ಹೂವು, ಹಣ್ಣಿನ ತಳಿ ಸಂರಕ್ಷರು.

ಇವರ ಹತ್ತಿರ ಸಾವಯವ ಅಕ್ಕಿ, ಎರೆಹುಳ ಗೊಬ್ಬರ, ಸೂಜಿ ಮೆಣಸು, ಮಲೆನಾಡು ಗಿಡ್ಡದ ಪರಿಶುದ್ಧ ತುಪ್ಪಾ, ತುಡುವೆ ಜೇನುತುಪ್ಪಾ, ಕೆಂಪು ಜೋಳಗದ ಅಕ್ಕಿ, ಮಲೆನಾಡಿನ ಅಪರೂಪದ ಮಾವಿನ ಮಿಡಿ ಉಪ್ಪಿನ ಕಾಯಿ ಹೀಗೆ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳಿಗೆ ನಾನು ಅವರನ್ನ ಪೀಡಿಸುತ್ತೇನೆ, ಎಲ್ಲಿಂದಲೋ ಸಂಗ್ರಹಿಸಿ ಕೊಡುತ್ತಾರೆ.

ಆದರೆ ಇವರ ಹಿನ್ನೆಲೆ ಕೇಳಿ ಒಂದು ಕಾಲದ ಖ್ಯಾತ ಪತ್ರಕತ೯ರಾದ ವಿ.ಎನ್.ಸುಬ್ಬರಾವ್ ರ ಶಿಷ್ಯ, ಇವತ್ತಿನ ಪಬ್ಲಿಕ್ ಟಿವಿ ರಂಗನಾಥ, ಸುದ್ದಿ ಟಿವಿ ಸ೦ಪಾದಕರು, ರವಿ ಬೆಳೆಗೆರೆ, ನಟ ಪ್ರಕಾಶ್ ರೈ ರ ಗೆಳೆಯರಾದವರು, ಬೆಂಗಳೂರು ಬೇಡ ಅನ್ನಿಸಿ ಹಳ್ಳಿಗೆ ಬಂದವರು… ಆನಂದಪುರದ ಸಮೀಪದಲ್ಲಿ ಅವರ ಪಿತ್ರಾಜಿ೯ತ ಜಮೀನಿನಲ್ಲಿ ರಬ್ಬರ್ ಬೇಸಾಯ ಪ್ರಾರಂಭಿಸಿ ಸಾಗರದ ಮಾರಿಕಾಂಬ ದೇವಾಲಯದ ಹಿಂಭಾಗದಲ್ಲಿ ಸಾಗರ್ ಅಗ್ರಿ ಕೋ ಎಂಬ ರೈತರ ಅವಶ್ಯಕತೆಯ ನೀರಿನ ಪಂಪ್, ಡ್ರಿಪ್ ನೀರಾವರಿ ಇತ್ಯಾದಿ ಸಲಕರಣೆ ಮಾರಾಟ ಮಳಿಗೆ ಸಾಗರದಲ್ಲಿ ಮೊಟ್ಟ ಮೊದಲಿಗೆ ಪ್ರಾರ೦ಭಿಸಿದರು.

ಪ್ರಾರಂಭದಲ್ಲಿ ದೊಡ್ಡ ನಷ್ಟ ಅನುಭವಿಸಿದರು, ಗೆಳೆಯರು ಮತ್ತು ಕುಟುಂಬದಲ್ಲೇ ವಿಶ್ವಾಸ ದ್ರೋಹದಿಂದ ಎಲ್ಲಾ ಕಳೆದುಕೊಂಡು ವರದಾ ನದಿ ಮೂಲ ಸಮೀಪದ ಚಿಪ್ಪಳಿ ಎಂಬಲ್ಲಿ ಹೊಸ ಜೀವನ ಪ್ರಾರಂಭಿಸಿ ಈಗ ಆಥಿ೯ಕವಾಗಿ, ಸಾಮಾಜಿಕವಾಗಿ ಪ್ರಗತಿ ಕಂಡಿದ್ದಾರೆ.

ಇವರ ಪತ್ನಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು ಗಂಡನ ಸಂಕಷ್ಟಕ್ಕಾಗಿ ಡಾಕ್ಟರೇಟ್ ಪದವಿಯ ಆಸೆ ಕೈಬಿಟ್ಟು ಎಲ್ಲಾ ಕೃಷಿ ಪ್ರಯೋಗದಲ್ಲಿ ಭಾಗಿಯಾಗಿ ಯಶಸ್ವಿಯಾಗಿದ್ದಾರೆ. ದುರಾಸೆ ಇಲ್ಲದ, ಸಮಾಜದಲ್ಲಿ ಎಲ್ಲರೊಡನೆ ಮಾಹಿತಿ ಹಂಚಿಕೊಳ್ಳುವ ಅತ್ಯುತ್ತಮ. ಓದು- ಬರಹ- ಜೀವನ- ಅನುಭವ ಇರುವ ನಾಗೇಂದ್ರ ಸಾಗರ್ ಒಬ್ಬ ಕೃಷಿ ವಿಜ್ಞಾನಿ ಆಗಿ ಹಳ್ಳಿಯಲ್ಲಿ ಸ್ವಗ೯ ನಿಮಿ೯ಸಿಕೊಂಡಿದ್ದಾರೆ.

ಪೇಟೆ ಜೀವನ ಸಾಕು, ಹಳ್ಳಿ ಜೀವನ ಬೇಕು ಅನ್ನುವವರು ಅವರನ್ನು ಭೇಟಿ ಆಗಿ ಪ್ರತ್ಯಕ್ಷ ಅವರ ಅನುಭವ ಪಡೆಯಬಹುದು.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW