ಸುಜಾತ ಎಸ್ ಭಟ್ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ಮೆತ್ತನೆಯ ಸೀರೆಯ
ನೇರಿಗೆ ಹಿಡಿಯುವಾಗ
ಗಾಜಿನ ಬಳೆಗಳು ಕೈಗೆ
ಏರದೆ ಹಠಮಾರಿಯಾದಾಗ
ಹಾರಾಡುವ ಮುಂಗುರುಳು
ಕೆನ್ನೆ ಸವರುವಾಗ
ನಲ್ಲ ನಿನ್ನ
ಕೈಗಳ ಸಹಾಯ
ಬೇಕೆನಿಸುವುದು
ಹೃದಯಕ್ಕೆ ನೇರತಾಗುವ
ಮಾತುಗಳು ಬಂದಾಗ
ಹಳೆಯ ಗಾಯಗಳಿಂದಾದ
ನೋವಿನ ನೆನಪಾದಾಗ
ಬದುಕಿನ ಬಂಡಿ ಎಳೆಯುತ್ತಾ
ದಣಿವಾರಿಸುವ ಆಸರೆ ಬೇಕಾದಾಗ
ನಲ್ಲ ನಿನ್ನ
ಹೆಗಲು ತಲೆಯಾನಿಸಲು
ಬೇಕೆನಿಸುವುದು.!
- ಸುಜಾತ ಎಸ್ ಭಟ್
