‘ನಮ್ಮ ಬಾಪು’ ಕವನ – ರೇಶ್ಮಾ ಗುಳೇದಗುಡ್ಡಾಕರ್



ನಮನಗಳಲ್ಲಿ ಅಳಿಯದೇ ಉಳಿದಿರುವರು ನಮ್ಮ ಬಾಪು ..ಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಬರೆದಿರುವ ಸುಂದರ ಕವನ, ಮುಂದೆ ಓದಿ…

ಮುಟ್ಟದವರ ಅಪ್ಪಿ
ಮೇಲು ಕೀಳು ಎಂಬದನ್ನು
ಕಾಲಡಿಯಲಿ ಮೆಟ್ಟಿ
ಮೌನದಲೇ ಸಂವಹನ
ಮಾಡಿ ಮಹಾತ್ಮರಾದರು

ಗಡಿಗಡಿಗಳ ದಾಟಿ
ಮನಮನಗಳ ತಲುಪಿ
ಸರಳತೆಯಲಿ ಬದುಕಿ
ಅಹಿಂಸೆಯ ಹಾದಿಯಲ್ಲಿ ನಡೆದರು
ದೀನರಿಗೆ ದೀವಿಗೆಯಾದರು

ಜನನಾಯಕರಾದರು
ಅಧಿಕಾರದ ಹತ್ತಿರ ಸುಳಿಯದೆ
ಉಳಿದರು, ಉಚ್ಚ ಪಂಥದವಾರದರೂ
ತಳಸಮುದಾಯದವರಿಗಾಗಿ ಬಾಳಿದರು

ಹಗಲು ಇರುಳು ಸತ್ಯವನ್ನೇ
ಪ್ರತಿಪಾದಿಸಿದರು
ತಮ್ಮ ಬದುಕನ್ನೆ ಒರೆಹಚ್ಚಿ
ತಾವೇ ನೋಡಿದರು
ಮಾಡು ಇಲ್ಲವೇ ಮಡಿ ಎಂದರು
ಅನ್ಯರ ದೋಷಿಸುವ ಬದಲು
ನಿನ್ನ ನೀ ಅರಿ ಎಂದರು

ಆದರ್ಶ ತತ್ವಗಳು ಪಠಣದ
ಮಂತ್ರವಲ್ಲ ಎಂದು
ಜೀವಿಸಿ ತೋರಿಸಿದರು
ಬಹುತ್ವ ಭಾರತಕ್ಕೆ ಭಾತೃತ್ವದ
ಮಡಿಲು ನೀಡಿದರು

ಅನೇಕತೆಯಲ್ಲಿ ಏಕತೆಯ
ಭಾರತವ ಕನಸ ಕಂಡರು
ನಮ್ಮ ರಾಷ್ಟ್ರ ಪಿತ ಎಂಬ
ಹೆಮ್ಮೆ ಇವರು
ಇಂದಿಗೂ ಅವರು ಜನಮನಗಳಲ್ಲಿ
ಅಳಿಯದೇ ಉಳಿದಿರುವರು ……


  • ರೇಶ್ಮಾ ಗುಳೇದಗುಡ್ಡಾಕರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading