೯೦ರ ದಶಕದ ನಂತರ ಹೇಗಾಯಿತು ನಮ್ಮ ಬೆಂಗಳೂರು. ಹೀಗಿರಲಿಲ್ಲ ನನ್ನ ಬೆಂಗಳೂರು ಎನ್ನುವ ತಮ್ಮ ಭಾವನೆಯನ್ನು ಅಕ್ಷರದ ಮೂಲಕ ವ್ಯಕ್ತಪಡಿಸಿದ್ದಾರೆ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಮಹೇಂದ್ರ ಡಿ ಅವರು ತಪ್ಪದೆ ಓದಿ …
ನನ್ನ ಬೆಂಗಳೂರಿನಲ್ಲಿ ಎಲ್ಲವೂ ಕನ್ನಡವೇ ಇತ್ತು.. ನಮ್ಮ ಪಾಲಿನ ಶಾಪಿಂಗ್ ಮಾಲುಗಳು ಚಿಕ್ಕಪೇಟೆ, ಬಳೆಪೇಟೆಗಳೆ ಆಗಿದ್ದವು, ವರ್ಷಕ್ಕೊಮ್ಮೆ ಸುಜಾತ ಟಾಕೀಸ್ ಬಳಿಯ ಸರ್ಕಸ್ಸು, ಲಾಲ್ ಬಾಗ್ ಫಲ ಪುಷ್ಟ ಪ್ರದರ್ಶನ, ಗಣೇಶ್ ರಾಜ್ಯೋತ್ಸವ ಆಚರಣೆಯ ಆರ್ಕೇಸ್ಟ್ರಾಗಳು…
ಫೋಟೋ ಕೃಪೆ : justdia
ರಾಜಕೀಯ ಗಾಳಿಗಂಥವಿಲ್ಲದ ಕನ್ನಡ ಪ್ರೀತಿಯ ವಾಟಳ್ ನಾಗರಾಜ್ ಅವರ ನವೆಂಬರ್ ೧ರಂದು ನಡೆಸುತ್ತಿದ್ದ ಕಲಾತಂಡಗಳ ಮೆರವಣಿಗೆ, ಪ್ರೇಮಕ್ಕೆ ಕಬ್ಬನ್ ಪಾರ್ಕ್! ಅಣ್ಣೊರ್ರ ಸಿನಿಮಾಕ್ಕೆ ಟೂರಿಂಗ್ ಟಾಕಿಸು. ೫ ರೂಪಾಯಿ ಚಿಪ್ಸ್ ಪಾಕೇಟು!! ನಂದನ ಕಾರ್ಯಕ್ರಮ ಕೇಳುತ್ತಲೆ ಬೆಳಗೆದ್ದು ಶಾಲೆಗೆ ತಯಾರಾಗುವ ಸಂಭ್ರಮ, ಯುನಿಫಾರಂ ಗೊಜು ಇಲ್ಲ!! ಶೂ ಧರಿಸುವ ಕಡ್ಡಾಯವಿಲ್ಲ!!ನಂದನ ಕಾರ್ಯಕ್ರಮ ಮುಗಿಸಿ ಧಾವಂತ ಇಲ್ಲದ ಆಪೀಸ್ಸಿಗೆ ಹೊರಡುವ ಶಿಸ್ತು.. ಬಿಟಿಎಸ್ ಬಸ್ ಕಂಡಕ್ಟರ್ ಮುಗುಳ್ನಗೆ.. ಕಷ್ಟಸುಖಗಳ ಮಾತಾಡಸುವ ಡ್ರೈವರ್ರು.. .. ಪ್ರಜಾಮತ, ಸುಧಾ ವ್ಯಾನಿಟಿ ಬ್ಯಾಗಿನಲ್ಲಿಟ್ಟು ವಾಯಿಲ್ ಸೀರೆ ಉಟ್ಟು ಆಫಿಸಿಗೆಂದೆ ಬಸ್ಸು ಏರುತ್ತಿದ್ದ ಮಹಿಳೆಯರು, ಲೋನ್ ಸೈಟು, ಎಜುಕೇಶನ್ ಸೀಟು ಚರ್ಚೆಯಿಲ್ಲದ ಬಸ್ ಜರ್ನಿ, ತಿಂಗಳ ಸಂಬಳ ಬಂದರೆ ಕಬ್ಬನಪೇಟೆ ಗುಂಡಪ್ಪ ಹೊಟೇಲ್ ಮೈಸೂರು ಪಾಕು, ನಮ್ಮ ಪಾಲಿನ ಮ್ಯಾಕ್ ಡೊನಾಲ್ಡ್ , ಕೆ.ಎಫ್.ಸಿ, ಗಳೆಂದರೆ ಗಣೇಶ ಭವನದ ತಿಂಡಿ, ವಿದ್ಯಾರ್ಥಿಭವನ ದೋಸೆ, ೮ನೆ ಕ್ರಾಸ್ ಜನತಾ ಹೋಟೆಲ್ ಮಂಗಳೂರು ಬಜ್ಜಿ.. ಆಹಾ ಹಣವಿದ್ದವರಿಗೆ ಎಂಟಿಆರ್.. ಇಲ್ಲದವರಿಗೆ ಇಂಡಿಯನ್ ಕಾಫಿ ಬಾರ್ರು!! ಓಣಿಗೆರಡು ಸೈಕಲ್ಲು.. ರಸ್ತೆಗೊಂದು ಸ್ಕೂಟರ್ರು…
ಫೋಟೋ ಕೃಪೆ : twitter
ಮನೆಬಳಿಯ ಶೆಟ್ಟರ ಅಂಗಡಿಯೆ ಮಾಲು, ಡಿಪಾರ್ಟ್ ಮೆಂಟ್ ಸ್ಟೋರು, ತಿಂಗಳಾಂತ್ಯಕ್ಕೆ ಬಂದ ಹಬ್ಬಕ್ಕೆ ಉದರಿ ಕೋಡುತ್ತಿದ್ದ ಶೆಟ್ಟರು ಸಂಬಳ ಬಂದಾಗ ಕೋಡಿ ಅನ್ನೊ ನಗುಮುಖ,
ಹಬ್ಬ, ಮದುವೆ ಮುಂಜಿಗೆ ಬಟ್ಟೆ ಖರಿದಿಗೆ ಡಿವಿಜಿ ರಸ್ತೆ, ಸಂಪಿಗೆ ರಸ್ತೆ!! ಬಳೆಪೇಟೆ.. ರೇಡಿಯೋ ಕ್ಯಾಸೆಟ್ ಖರೀದಿಗೆ ಬರ್ಮಾ ಬಜಾರ್, ಗುಪ್ತ ಮಾರ್ಕೆಟ್ ..
ಹಬ್ಬದ ಹಿಂದಿನ ರಾತ್ರಿ ೧೦ ತನ್ಕ ಸತಾಯಿಸಿ ಬಟ್ಟೆ ಹೊಲಿದು ಕೊಡುತ್ತಿದ್ದ ಮೆನ್ಸ್ ವೇರ್ ಗಳ ಟೈಲರ್ ಅಂಕಲ್ ಗಳು… ಆಹಾ ನನ್ನ ಬೆಂಗಳೂರೆ… ಬೆಂಗಳೂರು
ಏನಾಯ್ತು. ೯೦ರ ದಶಕದ ನಂತರ ಐಟಿ-ಬಿಟಿ ಬಂತು ಸಿಂಗಲ್ ಬೆಡ್ ರೂಂ ಮನೆ ೧೨೦೦ ಇದ್ದದ್ದು ೧೨ ಸಾವಿರವಾಯ್ತು.. ೭೦ ಸಾವಿರಕ್ಕೆ ಸಿಗುತ್ತಿದ್ದ ಸೈಟು ೭೦ ಲಕ್ಷ ದಾಟಿತು.. ಮಾಲುಗಳು ಬಂದವು ಶೇಟ್ಟರು ಅಂಗಡಿ ಶೇಟರ್ ಹಾಕಿತು. ಗುಂಡಪ್ಪ ಹೊಟೆಲ್ ಮರೆಯಾಯ್ತು, ಬಿಟಿಎಸ್ ಬಿಎಂಟಿಎಸ್ ಆಗಿ ಸಲಿಗೆ ಆತ್ಮೀಯ ಸೇವೆಗೆ ಟಿಸಿ ನೀಡಿತು!!
ಕೆರೆ ಕಟ್ಟೆ ಕಾಲುವೆಗಳು ರಿಯಲ್ ಎಸ್ಟೇಟ್ ಪಾಲಾಯ್ತು.. ಬೆಂಗಳೂರು ಪರಭಾರೆಯಾತ್ತು.. ಕನ್ನಡದ ಕಂಪು ಕಮರುಗಟ್ಟಿತು.
‘ಪ್ರಿಯ ಐಟಿಬಿಟಿಯವರೆ ಬೆಂಗಳೂರು ಬಿಡುವಿರಾ..’ ಅಗತ್ಯ ಹೊರಡಿ!! ನಮ್ಮ ಮುಗ್ಧ ಬೆಂಗಳೂರನ್ನು ನಾವು ಮರಳಿ ಪಡೆಯಬೇಕಿದೆ… ಮಳೆ ಪ್ರವಾಹ ಬೆಂಗಳೂರನ್ನು ನಡುಗಿಸಿದೆ.. ನಾವು ಕಂಡು ಬೆಳೆದ ಬೆಂಗಳೂರು ಮುಳುಗಿಸಿದೆ .. ಈಗ ಹುಡುಕಬೇಕಿದೆ..
- ಮಹೇಂದ್ರ ಡಿ ( ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರು)