ಕವಿ ಮೇಗರವಳ್ಳಿ ರಮೇಶ್ ಅವರ ಎರಡು ಕವನಗಳು

ಅವಳ ಮುಖ ಕಾಣುತ್ತಿಲ್ಲ, ಸು೦ದರ ವದನವೇ ಇರಬೇಕು! ಕವಿ ಮೇಗರವಳ್ಳಿ ರಮೇಶ್ ಅವರ ಎರಡು ಕವನಗಳು, ಓದುಗರ ಮುಂದೆ….

ಡೈನಿ೦ಗ್ ಟೇಬಲ್ಲಿನ ಮೇಲೆ
ಒ೦ದು ಗಾಜಿನ ಲೋಟ.
ಎಷ್ಟು ಸ್ವಚ್ಛ
ಎಷ್ಟು ಪಾರದರ್ಷಕ!

ಗಾಜಿನ ಲೋಟಕ್ಕೆ
ಹಾಲು ಸುರಿದರೆ
ಹಾಲೇ ಲೋಟವಾದ ಹಾಗೆ
ನೀರು ಸುರಿದರೆ
ನೀರೇ ಲೋಟವಾದ ಹಾಗೆ
ಬೀರು ಸುರಿದರೆ
ಬೀರೇ ಲೊಟವಾದ ಹಾಗೆ.

ಗಾಜಿನ ಲೋಟದ ಬಳಕೆ
ಬಳಸುವವರ ವಿವೇಕಕ್ಕೆ ಬಿಟ್ಟದ್ದು!


ಬೆನ್ನು

ಅದೋ ಅಲ್ಲಿ ಹೊಗುತ್ತಿರುವ ಹೆ೦ಗೆಳೆಯರ
ಆ ಪುಟ್ಟ ಗು೦ಪಿನಲ್ಲೊ೦ದು
ಆಳ ಕತ್ತಿನ ಕುಪ್ಪುಸ ಬಿಗಿ ಹಿಡಿದ ಸು೦ದರ
ಬಿಳಿಯ ಬೆನ್ನು.
ಮುಖ ಕಾಣುತ್ತಿಲ್ಲ
ಸು೦ದರ ವದನವೇ ಇರಬೇಕು!

ನೋಡಲೇ ಬೇಕೆ೦ಬ ಹಠದಲ್ಲವನು
ದಾಪುಗಾಲಿಕ್ಕುತ್ತಿರಲು
ಆ ಗು೦ಪು ಬೀದಿ ಕೊನೆಯ ತಿರುವಿನ
ಮನೆಯೊಳಗೆ ನುಗ್ಗಿ ಬಿಟ್ಟಿತು.

ಮುಚ್ಚಿದ ಬಾಗಿಲಿನ ಮನೆಯೆದುರು ಹೋಗುವಾಗ
ಅ೦ದುಕೊ೦ಡ
ಆ ಸು೦ದರ ಬೆನ್ನಿನ ವದನ
ಸು೦ದರವಾಗಿಲ್ಲದೇ ಇರಬಹುದು!


  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು, ಕವಿಗಳು)ಬೆಂಗಳೂರು. 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW