‘ನಮ್ಮ ಮಕ್ಕಳು ನಮ್ಮ ಭವಿಷ್ಯ’ ಕಾರ್ಯಾಗಾರ

ಸಮರಸ ವೆಂಚರ್ಸ ‘ನಮ್ಮ ಮಕ್ಕಳು ನಮ್ಮ ಭವಿಷ್ಯ’ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಮೈಸೂರಿನಲ್ಲಿ ಆಯೋಜಿಸಿದೆ. ಆಸಕ್ತರು ಈಗಲೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿ…ಈ ಕಾರ್ಯಗಾರದಲ್ಲಿ ನುರಿತ ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ, ಖ್ಯಾತ ಮನ:ಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ, ಖ್ಯಾತ ವೃತ್ತಿ ಸಮಾಲೋಚಕರು ಪ್ರೊ. ಶಂಕರ್ ಬೆಳ್ಳೂರ್ ಭಾಗವಹಿಸುವರು, ತಪ್ಪದೆ ಮುಂದೆ ಓದಿ…

ಮಕ್ಕಳು ನಮ್ಮ ಆಸ್ತಿ. ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸಿ ಅವರನ್ನು ಒಂದು ದಡಕ್ಕೆ ಸೇರಿಸುವುದು ಒಂದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಸಮರಸ ವೆಂಚರ್ಸ ‘ನಮ್ಮ ಮಕ್ಕಳು ನಮ್ಮ ಭವಿಷ್ಯ’ ಎಂಬ ಒಂದು ದಿನದ ಕಾರ್ಯಾಗಾರ ಏರ್ಪಡಿಸಲು ನಿಶ್ಚಯಿಸಿದೆ. ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಖ್ಯಾತ ಮನ:ಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ, ಖ್ಯಾತ ವೃತ್ತಿ ಸಮಾಲೋಚಕರು ಪ್ರೊ. ಶಂಕರ್ ಬೆಳ್ಳೂರ್ ಅವರೂ ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಮಾರ್ಚ 2 ರಂದು ನಡೆಯುವ ಈ ಕಾರ್ಯಾಗಾರಕ್ಕೆ ಒಂದು ಶುಲ್ಕವೂ ಇರುತ್ತದೆ. ಈ ಕಾರ್ಯಾಗಾರವು ಪೋಷಕರಿಗೆ, ಅಧ್ಯಾಪಕರಿಗೆ ಹಾಗೂ ಶಿಕ್ಷಣತಜ್ಞರಿಗೆ ಸಹಕಾರಿಯಾಗಲಿದೆ. ಆಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಕೋರುವೆ.

ಧನ್ಯವಾದಗಳೊಂದಿಗೆ,

ಕನಕರಾಜು – ಸಮರಸ ವೆಂಚರ್ಸ, ಮೈಸೂರು  (9448973582)


  • ಆಕೃತಿಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading