‘ನನ್ನ ತಂಗಿ ಈಡಾ’ ಕೃತಿ ಪರಿಚಯ

‘ನನ್ನ ತಂಗಿ ಈಡಾʼ ಜರ್ಮನ್‌ ಭಾಷೆಯಲ್ಲಿ ಕಾರೋಲೀನ್‌ ವಾಲ್‌ ಬರೆದಿರುವ ಕಾದಂಬರಿಯನ್ನು ನೇರ ಕನ್ನಡಕ್ಕೆ ಅನುವಾದ ಮಾಡಿ ಕೊಟ್ಟಿರುವರು ಹರ್ಷ ರಘುರಾಮ್‌ ರವರು. ಅವರ ಕೃತಿಯ ಕುರಿತು ಲೇಖಕರಾದ ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ನನ್ನ ತಂಗಿ ಈಡಾ
ಅನುವಾದ : ಹರ್ಷ ರಘುರಾಮ್‌
ಲೇಖಕರು:ಕಾರೋಲೀನ್‌ ವಾಲ್(ಜರ್ಮನ್)
ಬೆಲೆ:೨೬೦
ಪುಟ:೨೧೪
ಪ್ರಕಾಶನ: ಛಂದ ಪುಸ್ತಕ

ಮನೆಯಲ್ಲಿ ತಂದೆ ಅಥವಾ ತಾಯಿ ಯಾರಾದರೊಬ್ಬರು ಮದ್ಯದ ದಾಸರಾದರೆ ಆ ಮನೆಯಲ್ಲಿ ಯಾರಿಗೂ ಶಾಂತಿಯಿಲ್ಲವೇನೋ! ದಿನಾಲೂ ಕುಡಿದ ಅಮಲಿನಲ್ಲುಳಿದು, ತನ್ನ ಮಕ್ಕಳ ನಿಗಾವಹಿಸಲು ಮರೆತು ಹೋಗುವ ತಾಯಿ ಮನೆಯಲ್ಲಿದ್ದರೆ ಮನೆಯಲ್ಲಿ ಹಿರಿಮಗಳೇ ಜವಾಬ್ದಾರಿ ವಹಿಸುವಂತಹ ಸನ್ನಿವೇಶ. ಮನೆಯಲ್ಲಿರುವ ಕಿರಿಯ ತಂಗಿಯ ಕಾಳಜಿಯ ಚಿಂತೆ, ಹೀಗೆ ಗಣಿತದಲ್ಲಿ ಸಾಧನೆ ಮಾಡುವ ಕನಸು ಹೊತ್ತ ಟಿಲ್ಡಾ ಮುಂದೆ ತಾನು ಪಿ.ಎಚ್.ಡಿ ಮಾಡಲು ದೂರದ ಶಹರಕ್ಕೆ ಹೋಗಲು ತಂಗಿ ಇನ್ನೂ ಸಣ್ಣವಳು ಎಂಬ ಚಿಂತೆ.ʼ ನನ್ನ ತಂಗಿ ಈಡಾʼ ಜರ್ಮನ್‌ ಭಾಷೆಯಲ್ಲಿ ಕಾರೋಲೀನ್‌ ವಾಲ್‌ ಬರೆದಿರುವ ಕಾದಂಬರಿಯನ್ನು ನೇರ ಕನ್ನಡಕ್ಕೆ ಅನುವಾದ ಮಾಡಿ ಕೊಟ್ಟಿರುವರು ಹರ್ಷ ರಘುರಾಮ್‌ ರವರು.

ಟಿಲ್ಡಾಳು ಸಣ್ಣವಳಿಂದಲೇ ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳುತ್ತಾ ಓದುವುದರೊಂದಿಗೆ ಸಣ್ಣಪುಟ್ಟ ಕೆಲಸ ಮಾಡಿ ಸಣ್ಣ ಸಂಬಳ ಪಡೆಯುವ ಕೆಲಸ.ಕಾಲೇಜು ಮುಗಿದ ನಂತರ ಸೂಪರ್‌ ಮಾರ್ಕೆಟಿನಲ್ಲಿ ೩-೪ ತಾಸು ಬಿಲ್ಲಿಂಗ್‌ ಕೆಲಸ ಮಾಡಿ,ಸ್ವಲ್ಪ ಹೊತ್ತು ಈಜುಕೊಳದಲ್ಲಿ ಕಳೆದು ಮನೆಗೆ ಹೋಗಿ ತಂಗಿಗಾಗಿ ಅಡುಗೆ ಮಾಡಿ,ಇನ್ನೂ ತಾಯಿಯ ಕಾಳಜಿಯನ್ನೂ ಒಮ್ಮೊಮ್ಮೆ ಮಾಡಬೇಕು.

ಈಡಾಳಂತೂ ಇನ್ನೂ ಸಣ್ಣ ಹುಡುಗಿ.ಅಮ್ಮ ಕುಡಿದ ಅಮಲಿನಲ್ಲಿ ಹೊಡೆದರೂ ಸಹಿಸಿಕೊಂಡು,ಶಾಲೆಯಲ್ಲಿ ಇತರೆ ವಿದ್ಯಾರ್ಥಿಗಳೊಂದಿಗೆ ಜಾಸ್ತಿ ಬೆರೆಯದೇ ಅಂತರ್ಮುಖಿಯಾಗಿ ತನ್ನಷ್ಟಕ್ಕೇ ತಾನಿದ್ದು,ತಾನಾಯ್ತು ತನ್ನ ಓದಾಯ್ತು ಅಂತ ಇದ್ದು ಕೆಲವೊಮ್ಮೆ ಅಂದಚಂದದ ಚಿತ್ರಗಳನ್ನು ಬಿಡಿಸಿ,ಅದರಲ್ಲಿ ರಕ್ಕಸಿಯೊಬ್ಬಳು ನೀಡುವ ಚಿತ್ರಹಿಂಸೆ ಹೀಗೆ ತಾನು ತಾಯಿಯಿಂದ ಅನುಭವಿಸುವ ನೋವುಗಳ ಕುರಿತು ಹೀಗೆ ಅವಳದೇ ಸ್ವಂತ ಜಗತ್ತಿನ ಚಿತ್ರ ಬಿಡಿಸುವ ಅವಳ ಪ್ರತಿಭೆ.ಅವಳನ್ನು ಯಾರಿಗೂ ಹೆದರದೇ,ಎಲ್ಲರೊಂದಿಗೆ ಬೆರೆಯುವಂತಹ,ಈಜು ಕಲಿತು ಸಾಧನೆ ಮಾಡುವ,ಹೀಗೆ ಅನೇಕ ಪ್ರೌಢತೆಯ ಗುಣಗಳನ್ನು ಅವಳಲ್ಲಿ ತುಂಬಿ ಅವಳು ತಾಯಿಯನ್ನು ಎದುರಿಸುವಂತಹ ಸ್ಥಿತಿಗೆ ಬಂದರೆ ತಾನು ಓದು ಮುಂದುವರೆಸಲು ದೂರ ಶಹರಕ್ಕೆ ಹೋಗಬಹುದು,ಇಲ್ಲದಿರೆ ಅದು ಅಸಾಧ್ಯವೇನೋ ಎಂಬಂತೆ ಅವಳಿಗೆ ತರಬೇತಿ ನೀಡುವ,ಅವಳಲ್ಲಿ ಹುಮ್ಮಸ್ಸು ತುಂಬುವ ಅಕ್ಕ ಟಿಲ್ಡಾಳ ಪ್ರಯತ್ನ ಸಫಲವಾದೀತೆ?.

ವಿಕ್ಟೋರ್‌ ನ ಮೊಬೈಲ್‌ ಸಂಖ್ಯೆ ಪಡೆದು, ತುರ್ತು ಸಮಯದಲ್ಲಿ ಅವನಿಗೆ ಕರೆ ಮಾಡಿ ಸಹಾಯ ಕೇಳಬೇಕು, ಅಕ್ಕನಿಗೆ ಜ್ವರವೇರಿ ವೈದ್ಯರ ಬಳಿ ಕರೆದುಕೊಂಡು ಹೋಗಲು, ಅವನಿಗೆ ಕರೆ ಮಾಡಿ ಕರೆದುಕೊಂಡು ಹೋಗಲು ಹೇಳಬೇಕು ಎಂಬ ಸಮಯಪ್ರಜ್ಙೆ ಅವಳಿಗೆ ಬಂದದ್ದು ಯಾವಾಗ?ವಿಕ್ಟೋರ್‌ ಅಕ್ಕ-ತಂಗಿಯರಿಬ್ಬರಲ್ಲೂ ಆತ್ಮವಿಶ್ವಾಸ ಮೂಡಿಸಿ ತಾನು ಬೇರೆ ಶಹರಕ್ಕೆ ಕೆಲಸಕ್ಕೆ ಹೋಗುವಾಗ ಇದು ವಿದಾಯವಲ್ಲ,ಇದು ನಮ್ಮ ಹೊಸಬದುಕಿನ ಆರಂಭ ಎನ್ನುವ ಆಶಾಕಿರಣ ಅಕ್ಕ-ತಂಗಿಯರಿಬ್ಬರ ಮನದಲ್ಲಿ ಬಿತ್ತಿದ ಭಾವ ಇಬ್ಬರ ಬದುಕಿಗೂ ಹೊಸಹಾದಿ ಖಂಡಿತ ಸಿಕ್ಕಿತೇನೋ!

ಹೀಗೆ ಕೃತಿಯ ತುಂಬಾ ಬರುವ ಪಾತ್ರಗಳೆಲ್ಲ ನಮ್ಮನ್ನು ಕಾಡುತ್ತಾ ಸಾಗಿ,ಜರ್ಮನ್‌ ನೆಲದ ಕಥೆಯನ್ನು ನಾವು ಓದುವಂತಹ ರಸಾನುಭೂತಿ ನೀಡಿದ ಹರ್ಷ ರಘುರಾಮ್‌ ರವರ ಕಾದಂಬರಿಯನ್ನು ಓದಿಯೇ ಸವಿಯಬೇಕು.


  • ಸಾವಿತ್ರಿ ಶ್ಯಾನುಭಾಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading