ಬರುತಿದೆ ನವನೂತನ ವರುಷವು ಭೂಲೋಕಕೆ

ಸುಖ ಶಾಂತಿ ನೆಮ್ಮದಿ ಸದಾ ತುಳುಕುತಿರಲಿ, ಸಂತಸ ಸಂತೋಷ ಸದಾ ನಿಮ್ಮದಾಗಿರಲಿ….ಸುಂದರ ಸಾಲುಗಳನ್ನು ಕವಿ ರಾಮಪ್ರಸಾದ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ಉರುಳುವ ಕಾಲಕೆ ನೃತ್ಯವ ಮಾಡುತ/
ನೂಪುರ ಮಾಡುವ ಝುಲ್ ಝುಲ್ ನಾದಕೆ/
ನಲಿಯುತ ಕುಣಿಯುತ ಕೇಕೆ ಹಾಕುತ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ

ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿ
ಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/
ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/
ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/

ಹೊಳೆಯುವ ಮಿನುಗುವ ಉಡುಗೆ ತೊಡುಗೆಗಳಲಿ/
ಮಿನುಗನು ಮೆರುಗನು ಸಿಂಪಡಿಸಿ ಪ್ರಪಂಚಕೆ/
ಮನ ಸೆಳೆಯುವ ಕಣ್ಸೆಳೆಯುವ ವಸ್ತ್ರಾಲಂಕಾರದಲಿ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ

ಭಗವಂತನ ಕೃಪೆಗೆ ಶಿರಬಾಗಿ ಕೈಜೋಡಿಸಿ ನಮಿಸುವ
ಬೇದಭಾವಗಳಿಲ್ಲದೆ ಭಿನ್ನಾಭಿಪ್ರಾಯವಿಲ್ಲದೆ ಬಾಳುವ
ಯಾವ ಕಲಹ ಕೋಲಾಹಲವಿಲ್ಲದೆ ಒಂದಾಗಿ ಇರುವ/
ಪರಮಾತ್ಮನ ದಯೆಗೆ ಮಾನವೀಯತೆಯಲ್ಲಿ ಬದುಕುವ

ಸುಖ ಶಾಂತಿ ನೆಮ್ಮದಿ ಸದಾ ತುಳುಕುತಿರಲಿ/
ಸಂತಸ ಸಂತೋಷ ಸದಾ ನಿಮ್ಮದಾಗಿರಲಿ/
ಯಶಸ್ಸು ನಿಮ್ಮ ಬದುಕಲ್ಲಿ ವಿಪುಲವಾಗಿರಲಿ/
ನಿಮ್ಮ ಬಾಳು ಹಸನಾಗಿರಲಿ ಸುಗಮವಾಗಿರಲಿ/


  • ಮುತ್ತು ರಾಮಪ್ರಸಾದ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading