ಚಿಚ್ಛಕ್ತಿ ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಮಾಂಡಾದೇವಿ

ಸೂರ್ಯಲೋಕದಿ ವಾಸ ಮಾಡುವ ಏಕೈಕ ದೇವತೆ ಚಿಚ್ಛಕ್ತಿ, ಕೂಷ್ಮಾಂಡಾದೇವಿ. ಎಂಟು ಕರವಿರುವ ಕಾರಣದಿ ಅಷ್ಟಭುಜಾದೇವಿಯೆಂದೇ ಪ್ರಖ್ಯಾತಿಯಾಗಿರುವ ಕೂಷ್ಮಾಂಡಾದೇವಿಯ ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ್, ಬಾಣ, ಅಮೃತ ಕಲಶ, ಪುಷ್ಪ, ಚಕ್ರ, ಗದೆ ಇವೆ. ವಾಹನ ಸಿಂಹವಾಗಿದೆ. ಕೂಷ್ಮಾಂಡಾದೇವಿಯ ಮಹಿಮೆಯನ್ನು ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ ।
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ॥

ಸೃಷ್ಠಿಯ ಅಸ್ತಿತ್ವವೇ ಇಲ್ಲದಿರುವಾಗ, ಎಲ್ಲೆಡೆಯು ಗಾಢಾಂಧಕಾರವೇ ಕವಿದಿದ್ದಾಗ ತನ್ನ ‘ಈಶತ್ ‘ಹಾಸ್ಯದಿಂದ ಮಂದ, ಮಧುರ ನಗುವಿನಿಂದ ( ಕಿರುನಗೆಯ ಬೀರುತ್ತಾ ) ಅಂಡ ಅರ್ಥಾತ್ ಬ್ರಹ್ಮಾಂಡವನ್ನು ರಚಿಸಿದವಳೆ ಆದಿಶಕ್ತಿ ಜಗನ್ಮಾತೆ ಕೂಷ್ಮಾಂಡಾದೇವಿ. ತಾಯಿಯೇ ಆದಿ.ಇವಳಿಗಿಂತ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ.

ಸೂರ್ಯಮಂಡಲದೊಳಗಿನ ಲೋಕವೇ ಮಾತೆಯ ನಿವಾಸವು, ಸೂರ್ಯಲೋಕದಿ ವಾಸ ಮಾಡುವ ಏಕೈಕ ದೇವತೆ ಚಿಚ್ಛಕ್ತಿ, ಕೂಷ್ಮಾಂಡಾದೇವಿ. ಜಗದಾತ್ರಿಯ ಶರೀರದ ಪ್ರಭೆಯು, ಭಾಸ್ಕರನಿಗೂ ಮಿಗಿಲಾಗಿ ದೇದೀಪ್ಯಮಾನದಿ ಹೊಳೆಯುವಂತಿದೆ ತಾಯಿಯ ತೇಜಕ್ಕೆ ಬೇರಾವುದೇ ದೇವ – ದೇವತೆಗಳು ಸರಿಗಟ್ಟಲಾರರು,ಜನನಿಯ ತೇಜ ಪ್ರಕಾಶದಿಂದಲೇ, ದಶ ದಿಕ್ಕುಗಳು ಪ್ರಕಾಶಮಾನವಾಗಿವೆ. ಬ್ರಹ್ಮಾಂಡದ ಚರಾಚರ ವಸ್ತು, ಪ್ರಾಣಿ, ಪಕ್ಷಿಗಳಲ್ಲಿ ದೇವಿಯ ತೇಜವಿದೆ.

ಕೂಷ್ಮಾಂಡಾದೇವಿ ಸ್ವರೂಪ

ಎಂಟು ಕರವಿರುವ ಕಾರಣದಿ ಅಷ್ಟಭುಜಾದೇವಿಯೆಂದೇ ಪ್ರಖ್ಯಾತಿಯಾಗಿರುವ ಕೂಷ್ಮಾಂಡಾದೇವಿಯ ಕೈಗಳಲ್ಲಿ ಕ್ರಮಶಃ ಕಮಂಡಲು, ಧನುಷ್, ಬಾಣ, ಅಮೃತ ಕಲಶ, ಪುಷ್ಪ, ಚಕ್ರ, ಗದೆ ಇವೆ. ವಾಹನ ಸಿಂಹವಾಗಿದೆ. ಸಂಸ್ಕೃತದಲ್ಲಿ ಕುಂಬಳ ಕಾಯಿಯನ್ನು ಕೂಷ್ಮಾಂಡವೆನ್ನುತ್ತಾರೆ ಆದರಿಂದ ಬಲಿಯಲ್ಲಿ ಕುಂಬಳ ಕಾಯಿ ಬಲಿಯೇ ಮಾತೆಗೆ ಸರ್ವಾಧಿಕ ಪ್ರಿಯವಾಗಿದೆ.

ನವರಾತ್ರಿಯ ಆಚರಣೆಯಲ್ಲಿ ನಾಲ್ಕನೆಯ ದಿನವು ಕೂಷ್ಮಾಂಡಾದೇವಿಯ ಉಪಾಸನೆಯು ಈ ದಿನ ಸಾಧಕನ ಮನವು ‘ ಅನಾಹತ ‘ಚಕ್ರದಲ್ಲಿ ನೆಲೆ ನಿಲ್ಲುತ್ತದೆ, ಆದರಿಂದ ಅವನು ಅತ್ಯಂತ ಪವಿತ್ರ, ಹಾಗು ಅಚಂಚಲ ಮನಸ್ಸಿಂದ ದೇವಿಯ ಸ್ವರೂಪವನ್ನು ಧ್ಯಾನದಿ ಧರಿಸಿಕೊಂಡು, ಪೂಜಾ – ಉಪಾಸನೆಯಲ್ಲಿ ತೊಡಗಬೇಕು. ನಿರ್ಮಲ ಭಕ್ತಿಯಿಂದ ಮಾತೆ ಅಡಿದಾವರೆಗೆ ಶರಣಾಗತವಾದರೆ, ಸುಲಭವಾಗಿ ಪರಮ ಪದ ಪ್ರಾಪ್ತಿಯಾಗುವದರಲ್ಲಿ ಸಂಶಯವಿಲ್ಲ.

ಕೂಷ್ಮಾಂಡಾದೇವಿ ಲೀಲೆ :

ಮಾತೆ ಪಾರ್ವತಿಯ ಕರಗಳಿಂದ ತಾರಕಸುರನ ಬಂಟ ಜಟುಕಾಸುರ ಸೋಲಿನ ನಂತರ, ಮಾಲಿ ಮತ್ತು ಮಹಾ ಅಸುರ ಯೋಧ ಸುಕೇಶನ ಮಗ ಸುಮಾಲಿ ಎಂಬ ಇಬ್ಬರು ಅಸುರರು ಶಿವನನ್ನು ಮೆಚ್ಚಿಸಲು ಮತ್ತು ಆಶೀರ್ವಾದ ಪಡೆಯಲು ಒಂದು ದೊಡ್ಡ ತಪಸ್ಸನ್ನು ಮಾಡಲು ಶುರುಮಾಡಿದರು ಅವರು ಮಾಡುತ್ತಿದ್ದ ತಪಸ್ಸು ಎಷ್ಟು ತೀವ್ರವಾಗಿತ್ತೆಂದರೆ, ಅವರ ದೇಹವು ಅವರ ದೇಹದಿಂದ ಹೊರಹೊಮ್ಮುವ ಧನಾತ್ಮಕ ಅಂಶದಿಂದ ಹೊಳೆಯಲು ಪ್ರಾರಂಭಿಸಿತು. ಭೂಮಿಯ ಮೇಲೆ ಹೆಚ್ಚುತ್ತಿರುವ ಹೊಳಪಿನ ಬಗ್ಗೆ ಸೂರ್ಯದೇವ ಆತಂಕ ಮತ್ತು ಕುತೂಹಲದಿಂದ ವೀಕ್ಷಿಸಲು ಪ್ರಾರಂಭಿಸಿದನು. ಸೂರ್ಯದೇವ ಒಮ್ಮೆ ಭೂಮಿಯ ಮೇಲಿನ ಹೊಳೆಯುವ ದೇಹಗಳನ್ನು ನೋಡಲು ಹೋಗಲು ನಿರ್ಧರಿಸಿದನು. ಪ್ರಕೃತಿಯ ನಿಯಮದ ಪ್ರಕಾರ, ಆಕಾಶಕಾಯಗಳು ತಮ್ಮ ಸ್ವಭಾವವನ್ನು ಬದಲಾಯಿಸುವವರೆಗೆ ಮತ್ತು ಅವು ತಮ್ಮ ಸ್ಥಳವನ್ನು ಬಿಡಲು ಸಾಧ್ಯವಿಲ್ಲ.ಆದ್ರೆ ಸೂರ್ಯದೇವನು ತುಂಬಾ ಕುತೂಹಲದಿಂದ ಸೌರವ್ಯೂಹದಿಂದ ತನ್ನ ಸ್ಥಳವನ್ನು ಬಿಟ್ಟು ಭೂಮಿಯ ಮೇಲಿನ ಹೊಳೆಯುವ ದೇಹಗಳನ್ನು ನೋಡಲು ಹೋದನು. ಇದು ಇಡೀ ವಿಶ್ವವನ್ನು ಹಾನಿಗೊಳಿಸಿತು. ಸೂರ್ಯದೇವನನ್ನು ಎಲ್ಲವನ್ನೂ ನಿರ್ಲಕ್ಷಿಸಿ, ಇಬ್ಬರೂ ಸಹೋದರರ ಬಳಿಗೆ ಹೆಚ್ಚು ಹತ್ತಿರ ಹೋದನು. ಧ್ಯಾನದಲ್ಲಿ ತಲ್ಲೀನರಾಗಿದ್ದ ಇಬ್ಬರೂ ಸಹೋದರರಿಗೆ ಸೂರ್ಯ ತಮ್ಮ ಹತ್ತಿರವಾಗುತ್ತಿದ್ದಾನೆಂದು ತಿಳಿದಿರಲಿಲ್ಲ.

ಸೂರ್ಯ ಹತ್ತಿರ ಬರುತ್ತಿದ್ದಂತೆ ಇಬ್ಬರೂ ಸಹೋದರರು ಸುಟ್ಟುಹೋದರು. ಶಿವನಿಗೆ ಇದು ತಿಳಿದು ಸೂರ್ಯದೇವನ ಮೇಲೆ ಕೋಪಗೊಂಡನು. ಅವನು ತನ್ನ ತ್ರಿಶೂಲವನ್ನು ಸೂರ್ಯದೇವನ ಕಡೆಗೆ ಎಸೆದು ಅವನನ್ನು ಅಸಮರ್ಥಗೊಳಿಸಿದನು. ಪರಿಣಾಮವಾಗಿ, ಇಡೀ ಜಗತ್ತು ಮತ್ತು ಸೌರವ್ಯೂಹವು ಕತ್ತಲೆಯಲ್ಲಿ ಮುಳುಗಿತು. ಕತ್ತಲೆ ಎಷ್ಟು ಭಯಾನಕವಾಗಿತ್ತೆಂದರೆ ಯಾರಾದರೂ ಬರಿಗಣ್ಣಿನಿಂದ ವಿಶ್ವವನ್ನು ನೋಡಬಹುದಿತ್ತು. ಅಲ್ಲದೆ, ಇದು ಗುರುತ್ವಾಕರ್ಷಣೆಯ ನಷ್ಟಕ್ಕೆ ಕಾರಣವಾಯಿತು ಮತ್ತು ಆಕಾಶಕಾಯಗಳು ಅಸಮತೋಲನವನ್ನು ಎದುರಿಸಿದವು. ಸೂರ್ಯದೇವನು ಪ್ರಜ್ಞಾಹೀನನಾಗಿ ಬಿದ್ದಿರುವುದನ್ನು ನೋಡಿ ತಂದೆಯಾದ ಋಷಿ ಕಶ್ಯಪನು ಕ್ರೋದಗೊಂಡು. ಶಿವನು ಇಂದು ನನ್ನ ಮಗನನ್ನು ಕೊಂದಂತೆಯೇ; ಒಂದು ದಿನ ಅವನು ತನ್ನ ಸ್ವಂತ ಮಗನನ್ನೂ ಕೊಲ್ಲುತ್ತಾನೆ ಎಂದು ಶಪಿಸಿದನು. ಶಿವನು ಪಾರ್ವತಿಯ ಬಳಿಗೆ ಹೋಗಿ ತನ್ನ ತಪ್ಪನ್ನು ಸರಿಪಡಿಸಲು ಸಹಾಯ ಕೇಳಿದನು. ಕಾರಣ ಮಾತೆಯು ಎಲ್ಲಾ ಶಕ್ತಿಗಳ ಮೂಲ, ಅವಳೆ ಇಡಿ ಬ್ರಹ್ಮಾಂಡದ ತಾಯಿ ಎಂದು ಮಹಾದೇವ ಅರಿತುಕೊಂಡಿದ್ದನು, ಶಿವನಿಗಾಗಿ ಪಾರ್ವತಿ, ಸೂರ್ಯದೇವನನ್ನು ಇರಿಸಲಾಗಿದ್ದಲಿಗೆ ಹೋದಳು. ಅವಳು ತನ್ನ ಉಗ್ರತೆಯಿಂದ ಬೆಂಕಿ ಮತ್ತು ಬೆಳಕಿನಿಂದ ತುಂಬಿದ ಗೋಳಾಕಾರದ ದೇಹವನ್ನು ಸೃಷ್ಟಿಸಿದಳು, ಅದನ್ನು ಈಗ ಸೂರ್ಯ ಎಂದು ಕರೆಯಲಾಗುತ್ತದೆ. ಪಾರ್ವತಿ ಆ ಬೆಂಕಿಯ ಉಂಡೆಯಿಂದ ಹೊರಬಂದಾಗ; ಅವಳು ಬ್ರಹ್ಮಾಂಡದ ಶಾಶ್ವತ ಸೌಂದರ್ಯದಂತೆ ಅರಳಿದಳು. ಕೂಷ್ಮಾಂಡಾದೇವಿಯಿಂದ ಮರುಹುಟ್ಟು ಪಡೆದ ಸೂರ್ಯನಿಗೆ ತಾಯಿಯೇ ನಿರ್ದೇಶನಗಳನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ .
ಲೋಕಮಾತೆಯ ಪದ್ಮಕೆ ನಾವುಗಳೆಲ್ಲ ಶುದ್ಧಮನದಿ ಶಿರಬಾಗೋಣ.

ನಾಳಿನ ಸಂಚಿಕೆಯಲ್ಲಿ ದುರ್ಗೆಯ ಪಂಚಮ ಸ್ವರೂಪ, ಶ್ರೀ ಸ್ಕಂದಮಾತೆಯ ಕುರಿತು ತಿಳಿಯೋಣ.

ದುರ್ಗೆಯ ಮಹಿಮೆ ಹಿಂದಿನ ಸಂಚಿಕೆಗಳು :


  • ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ ಜಿಲ್ಲಾ, ಕಲಬುರ್ಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW