‘ನೆಹರು ನಡಿಗೆ’ ಪುಸ್ತಕದ ಬೆನ್ನುಡಿ ಬರಹ – ಪುರುಷೋತ್ತಮ ಬಿಳಿಮಲೆ

“ನೆಹರು ನಡಿಗೆ” ಹೊತ್ತಿಗೆಯಲ್ಲಿ ಕುವೆಂಪು , ಸರ್ಧಾರ್ ವಲ್ಲಬಾಯಿ ಪಟೇಲ್, ನಾ ಸು ಹರ್ಡಿಕರ್, ಅಟಲ್‌ಬಿಹಾರಿ ವಾಜಪೇಯಿ ಸೇರಿದಂತೆ ಸಮಕಾಲೀನ ಚಿಂತಕರು ನೆಹರು ಅವರ ವ್ಯಕ್ತಿತ್ವ, ದೃಷ್ಟಿಕೋನ ಹಾಗು ಭಾರತಕ್ಕೆ ಅವರ ಕೊಡುಗೆ ಕುರಿತು ಬರೆದಿದ್ದಾರೆ. ಪುರುಷೋತ್ತಮ ಬಿಳಿಮಲೆ ಅವರು ಬರೆದಿರುವ ಬೆನ್ನುಡಿಯನ್ನು ತಪ್ಪದೆ ಮುಂದೆ ಓದಿ…

ಪುಸ್ತಕ: ನೆಹರು ನಡಿಗೆ
ಸಂಪಾದಕರು : ಸತೀಶ್ ನಾಯಕ್, ಮುರಳಿ ಮೋಹನ್ ಕಾಟಿ
ಪ್ರಕಾಶನ : ಕೌದಿ ಪ್ರಕಾಶನ
ಬೆಲೆ : ೧೭೦ .೦೦
ಖರೀದಿಸಲು – ೯೦೦೮೬೬೦೩೭೧

ನೆಹರೂ ಅವರು ಗಾಂಧೀಜಿಯ ಮಾರ್ಗದರ್ಶನದಲ್ಲಿ ಪಳಗಿದ ಸರ್ವ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಪ್ರಖರ ರಾಷ್ಟ್ರವಾದಿ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ೯ ಬಾರಿ ಜೈಲು ಪಾಲಾಗಿ ಒಟ್ಟು ೩೨೫೯ ದಿನಗಳನ್ನು ಕತ್ತಲ ಕೋಣೆಯಲ್ಲಿ ಕಳೆದರು. ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ಹಕ್ಕು ಅಥವಾ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನಿಟ್ಟಾಗ ಅದನ್ನು ಬಲವಾಗಿ ವಿರೋಧಿಸಿದ್ದ ನೆಹರೂ ಕೇಂದ್ರ ಪ್ರಧಾನ ಒಕ್ಕೂಟ ವ್ಯವಸ್ಥೆಯ ಸ್ವತಂತ್ರ ಭಾರತದ ಪರವಾಗಿ ವಾದಿಸಿದ್ದರು.

೧೯೫೦ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸುವಲ್ಲಿ ಅವರದ್ದೂ ಮುಖ್ಯಪಾತ್ರವಿತ್ತು. ವಸಾಹತು ದೇಶವಾಗಿದ್ದ ಭಾರತವನ್ನು  ಗಣರಾಜ್ಯವಾಗಿಸುವತ್ತ ಅವರು ಇಟ್ಟ ಹೆಜ್ಜೆಗಳು  ಅಸಾಮಾನ್ಯ ಧೈರ್ಯ ಮತ್ತು ಮುನ್ನೋಟಗಳಿಂದ ಕೂಡಿದ್ದುವು. ೧೯೫೪ರ ಚೀನಾ ಭಾರತ ಗಡಿ ಒಪ್ಪಂದದ ಆಧಾರದ ಮೇಲೆ ಶಾಂತಿಯುತ ಸಹಬಾಳ್ವೆಗಾಗಿ ಒಪ್ಪಿಕೊಳ್ಳಲಾಗಿದ್ದ ಪಂಚಶೀಲ ತತ್ವಗಳನ್ನು ನೆಹರೂ ನಂಬಿದ್ದರು.

ನೆಹರೂ ಅವರು ಸಮಾಜವಾದೀ ತತ್ವಗಳ ಆಧಾರದಲ್ಲಿ ಸ್ವತಂತ್ರ ಭಾರತವನ್ನು ಕಟ್ಟುವ ಕನಸು ಕಂಡರು.  ಅದಕ್ಕಾಗಿ ಪ್ರಜಾಪ್ರಭುತ್ವವಾದೀ ಗಣರಾಜ್ಯದ ಮತ್ತು ಜಾತ್ಯತೀತ ತತ್ವಗಳನ್ನು ಬಲಪಡಿಸಲು ಶ್ರಮಿಸಿದರು.   ಆದರೆ ಸಮಾಜವಾದದ ಗುರಿಯನ್ನು ಸಾಧಿಸುವುದು ಸುಲಭದ ಕೆಲಸ ಅಲ್ಲ ಎಂದು ಅವರು ಹೇಳುತ್ತ ಜನರನ್ನು ಎಚ್ಚರಿಕೆಯಲ್ಲಿಟ್ಟರೇ ವಿನಾ ʼಎಲ್ಲವನ್ನು ಸಾಧಿಸಿಬಿಟ್ಟೆʼ  ಎಂದು ಹೇಳಿ ಜನರನ್ನು ಹಾದಿ ತಪ್ಪಿಸಲಿಲ್ಲ. ಅವರ ದಿಟ್ಟ ನಿಲುವುಗಳಿಗಾಗಿ   ಅವರನ್ನು ಒಟ್ಟು ನಾಲ್ಕು ಸಲ ಕೊಲೆ ಮಾಡಲು ಪ್ರಯತ್ನಿಸಲಾಗಿದ್ದು ಅದರಲ್ಲಿ ಮೂರು ಯತ್ನಗಳು ಮಹಾರಾಷ್ಟ್ರದಲ್ಲಿಯೇ ನಡೆಯಿತು.  ನೆಹರೂ ಅವರು ಭಾರತದ ಯುವಕರ ಭವಿಷ್ಯವನ್ನು ಆಧುನಿಕ ಶಿಕ್ಷಣದಲ್ಲಿ ಕಂಡದ್ದರಿಂದಲೇ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲಾದ ಉನ್ನತ ಶಿಕ್ಷಣದ ಸಂಸ್ಥೆಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡರು.

ಸದ್ಯದ ರಾಜಕೀಯ ಲಾಭಕ್ಕಾಗಿ ಅವರ ವಿರುದ್ಧ ನಡೆದಿರುವ ಅಪಪ್ರಚಾರಕ್ಕೆ ಅವರು ಒಂದಲ್ಲ ಒಂದು ದಿವಸ ಬೆಲೆ ತೆರಲೇ ಬೇಕಾಗುತ್ತದೆ.

 

ಸೊಫೊಕ್ಲಿಸ್‌ ಬರೆದ ಅಂತಿಗೊನೆ ನಾಟಕದಲ್ಲಿ ಕುರುಡ ಟೈರಿಸಿಯಸ್‌ ಅರಸನಿಗೆ ಶಾಪ ಹಾಕುತ್ತಾನೆ-

ʼ ನಮಗೆ ನಿನ್ನ ಕೃತ್ಯಗಳಿಂದ ರೋಗತಟ್ಟಿದೆ,

ನಮ್ಮ ಪುಣ್ಯಪೀಠಗಳನ್ನು , ದೇವಸ್ಥಾನಗಳನ್ನು

ನೆನೆಸಿದ ರಕ್ತ ,

ಹದ್ದು ನಾಯಿಗಳು ನೆಕ್ಕಿ ಕುಡಿಯುವ ರಕ್ತ ,

ನೀನು ನಿರ್ಭಾಗ್ಯ ಈಡಿಪಸ್ ಪುತ್ರನ ನಾಳಗಳಿಂದ ಚೆಲ್ಲಿದ ನೆತ್ತರಲ್ಲದೆ ಬೇರೆಯಲ್ಲ.

ನಮ್ಮ ಪ್ರಾರ್ಥನೆ, ಯಜ್ಞ , ಕಾಣಿಕೆಗಳನ್ನು ದೇವರು ತಿರಸ್ಕರಿಸಿದ್ದಾನೆ.

ಮನುಷ್ಯ ರಕ್ತ ಹೀರಿದ ಹಕ್ಕಿ

ಆಪಶಕುನದ ಸದ್ದಲ್ಲದೆ ಮತ್ತೇನನ್ನು ಮಾಡೀತು

ಆದರೆ ಪಶ್ಚಾತ್ತಾಪ ಪಡದೆ ಉಬ್ಬುವವ ಮಾತ್ರ

ನಿರ್ವಿರ್ಯನಾಗಿ ನಾಶವಾಗುತ್ತಾನೆ.

ನಿನ್ನ ಒಳ್ಳೆಯದಕ್ಕೆ ಇಷ್ಟು ಹೇಳಿದ್ದೇನೆʼ


  • ಪುರುಷೋತ್ತಮ ಬಿಳಿಮಲೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW