
ನೆಲನೆಲ್ಲಿ ಗಿಡ ಕಸದಲ್ಲಿ ಬೆಳೆದು ದೇಹಕ್ಕೆ ರಸಬರಿತ ಆರೋಗ್ಯ ಕೊಡುವ ಉತ್ತಮ ಔಷಧಿ ಸಸ್ಯವಾಗಿದೆ. ಸಣ್ಣ ಸಸ್ಯವಾದರೂ ಇದರ ಉಪಯೋಗ ಅಪಾರ. ಇದರ ಪಂಚಾಂಗವೂ ಔಷಧಿ ಗುಣ ಹೊಂದಿದೆ.ಅದರ ಮಹತ್ವವನ್ನು ಅರಿಯಿರಿ…
1)ಜಾಂಡೀಸ್ ಗೆ ನೆಲನೆಲ್ಲಿ ಸೊಪ್ಪು ಒಂದು ಹಿಡಿ ತಂದು ತೊಳೆದು ಹಾಲು (ಹಿಂಡಿದ ಬಿಸಿ ಹಾಲು ಉತ್ತಮ) ಹಾಕಿ ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ಮೇಲಿನ ಪೇಸ್ಟ್ ಹಾಕಿ ಕುದಿಸಬೇಕು ಒಂಬತ್ತು ದಿನಗಳ ಕಾಲ. ಊಟಕ್ಕೆ ಉಪ್ಪು ಖಾರ ಮಾಂಸಾಹಾರ ಸೇವನೆ ಮಾಡುವಂತಿಲ್ಲ.
2) ಶುಗರ್ ಮೊದಲ ಹಂತದಲ್ಲಿ ತಡೆಗಟ್ಟಲು ನೆಲನೆಲ್ಲಿ ಸೊಪ್ಪು ಒಂದು ಒಳ ಮುಷ್ಠಿ ತೆಗೆದುಕೊಂಡು ರಸ ತೆಗೆದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
3) ಬಹಳ ಹಳೆಯ ಗಾಯಕ್ಕೆ ಸೊಪ್ಪು ಮತ್ತು ಎಳ್ಳೆಣ್ಣೆ ಹಾಕಿ ಕುದಿಸಿ ಎಲೆ ಗರಿಗರಿಯಾದ ಇಳಿಸಿ ತಣ್ಣಗಾಗಲು ಬಿಡಿ ಹದವಾಗಿ ಎಲೆಯ ಸಹಿತ ವಾಗಿ ಗಾಯಕ್ಕೆ ಹಚ್ಚುವುದು.
ಫೋಟೋ ಕೃಪೆ : kannada.news18
4) ಮಕ್ಕಳಲ್ಲಿ ಕಂಡುಬರುವ ಲಿವರ್ ಸಮಸ್ಯೆಗಳು ಕೆಲವು ಮಕ್ಕಳಿಗೆ ಕೈ ಕಾಲು ಸಣ್ಣ ಹೊಟ್ಟೆ ದೊಡ್ಡದು ಇರುತ್ತದೆ ಇದು ಲಿವರ್ ನಿಂದ ಆಗುವ ಸಮಸ್ಯೆ ಇಂತಹ ಖಾಯಿಲೆ ಹಾಲು ಸ್ವಲ್ಪ ಬೆಲ್ಲ ಸೇರಿಸಿ ಎರಡು ಚಮಚ ಸೊಪ್ಪಿನ ರಸವನ್ನು ಸೇರಿಸಿ ವಾರಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಕೊಡಿ ತುಂಬಾನೇ ಒಳ್ಳೆಯದು.
5)ಭೇದಿಯಾಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು.
6) ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದ ಇಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕ
7) ನೆಲನೆಲ್ಲಿಯ ಕಷಾಯ ಮಾಡುವಾಗ, ನೀರನ್ನು ಬಿಸಿಗಿರಿಸಿ, ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ, ಎಲ್ಲವನ್ನು ಕತ್ತರಿಸಿ ಹಾಕಬೇಕು, ನಂತರ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ, ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು, ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿನ, ಸ್ವಲ್ಪ ಸೈ೦ಧವ ಲವಣ ಹಾಕಿ, ಒಂದು ನಿಮಿಷ ಬಿಟ್ಟು ಇಳಿಸಿ, ಸೋಸಿದರೆ, ಕಷಾಯ ಸಿದ್ದವಾಗುತ್ತದೆ. ಇದನ್ನು, ೧೦-೧೫ ಎಂ,ಎಲ್ ನಷ್ಟನ್ನು ಘಂಟೆಗೊಮ್ಮೆ ಕುಡಿಯುತ್ತ ಬಂದರೆ ಇದು ಎಲ್ಲ ರೀತಿಯ ಜ್ವರಕ್ಕೂ ರಾಮಬಾಣವಾಗಿದೆ.ಇದು ಕೊರೋನಾ ದಂತಹ ಜ್ವರ ಓಡಿಸುವ ಪವರ್ ಇದರಲ್ಲಿ ಇದೆ.
8) ತಂಬುಳಿ ಚಟ್ನಿ ಮಾಡಿ ಊಟ ಮಾಡಿದರೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
9) ಪಂಚಾಂಗ ವನ್ನು ಕುದಿಸಿ ಕುಡಿದರೆ ಜಲೋದರ ರೋಗ ಗುಣವಾಗುತ್ತದೆ.
ವಿಶೇಷ ಎಚ್ಚರಿಕೆ : ಈ ಗಿಡದ ಬಳಕೆ ಹೆಚ್ಚಾದರೆ ದೇಹದ ಉಷ್ಣತೆ ಹೆಚ್ಚಾಗಿ ಮೂಲವ್ಯಾಧಿ ,ಉರಿಮೂತ್ರದಂತಹ ಕಾಯಿಲೆಗಳು ಬರಬಹುದು.
- ಸುಮನಾ ಮಳಲಗದ್ದೆ