ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಯಾರು ಬರುವರು
ಹೊಸ ವರ್ಷ ಬಂದಂತೆ
ತರು ಲತೆಗಳಲ್ಲಿ
ಕಂಪು ಹೂ ಬಿರಿದಂತೆ
ಹರಿಯುವ ತೊರೆಯಲಿ
ಸಂತಸದ ನಿನಾದ
ಹನಿಹನಿಯ ಧಾರೆಯಲಿ
ಮಕುಟಮಣಿ ಚಂದ
ಅರಳಿದ ಮೊಗ್ಗಿನಲಿ
ಪರಿಮಳದ ಘಮ
ರೆಂಬೆ ಕೊಂಬೆಗಳಿಂದ
ತಂಪನೆಯ ಧಾಮ
ನಸುಕಿನ ಘಳಿಗೆಯಲಿ
ಬೆಳಗುತಿಹ ದಿನಪ
ಜೀವಜಾಲಕೆ ತಂದಿಹನು
ಚೇತನದ ಸಲ್ಲಾಪ
ಹಕ್ಕಿ ಪಕ್ಷಿ ರೆಕ್ಕೆ ರೆಕ್ಕೆಯಲೂ
ಹೊಸತನದ ಬಿಸುಪು
ಹಾರಿವೆ ಗಾವುದ ದೂರ
ಕಣ್ಣಿಗೆಸೆಯುತ ಒನಪು
- ಮಲ್ಲಿಕಾರ್ಜುನ ಶೆಲ್ಲಿಕೇರಿ
