‘ನಿರ್ವಾಣ’ ಕನ್ನಡ ಅನುವಾದ – ಬಿ.ಆರ್. ಜಯರಾಮರಜೇ ಅರಸ್

ಪುಸ್ತಕ ಪರಿಚಯ

ಪುಸ್ತಕ: ನಿರ್ವಾಣ
ಲೇಖಕರು: ಪೌಲ್ ಕಾರೂಸ್(ಮೂಲ)
ಕನ್ನಡ ಅನುವಾದ :  ಬಿ.ಆರ್ .ಜಯರಾಮರಜೇ ಅರಸ್
ಪ್ರಕಟಣೆ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು

ಬೌಧ ಧರ್ಮದ ವಿಶಿಷ್ಟ ಪರಿಕಲ್ಪನೆ “ನಿರ್ವಾಣ ” ಇದರ ಗುಣ ವಿಶೇಷತೆಯನ್ನು ಸರಳವಾಗಿ ಓದುಗರ ಮನದಾಳಕ್ಕೆ  ತಲುಪಿಸುದೆ  ಈ ಕೃತಿ. ಪೌಲಸ್ ಕಾರೂಲ್ ಅವರ ಕೃತಿಯನ್ನು ಬಿ. ಆರ್. ಜಯರಾಮರಾಜೇ ಅರಸ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುದ್ದ ಧರ್ಮದ ಸಂದೇಶ ಅರಿಯುವಲ್ಲಿ. ಈ ಕೃತಿ ಹೆಚ್ಚು  ಉಪಯುಕ್ತ ಸಮಕಾಲೀನ ಬದುಕಿನಲ್ಲಿ ಬುದ್ದ ಮತ್ತು ಅವನ ತತ್ವಗಳು ಹೆಚ್ಚು ಜನಪ್ರಿಯ .

3a

ಈ ಕೃತಿಯಲ್ಲಿ ಒಟ್ಟು ಐದು ಪಾತ್ರಗಳು ಮತ್ತು ಹದಿಮೂರು ಅಧ್ಯಯಗಳು ಇವೆ. ಬುದ್ಧ ಸಂದೇಶಗಳು ಸರಳತೆ, ಮನವೀಯತೆ, ನಿಸ್ವಾರ್ಥ, ಮಮತೆಗೆ ಹೆಚ್ಚು ಪ್ರಧಾನ್ಯತೆ ಇರುತ್ತವೆ. ಅಂತಯೇ ಈ ಕೃತಿಯು ಅವುಗಳಿಂದ  ಹೊರತಲ್ಲ. ಸಾವನ್ನು ಸಹಜವಾಗಿ, ದೃಢವಾಗಿ, ಶಾಂತ ಮನಸ್ಸಿನಿಂದ ಆಹ್ವಾನಿಸುವ ಅನನ್ಯ ಪರಿಕಲ್ಪನೆಯೇ ನಿರ್ವಾಣ .

ಅನಿವಾರ್ಯ ಬದುಕಿನ ಅಂತ್ಯವನ್ನು ಸಾರ್ಥಕ ರೂಪಕ್ಕೆ ಪರಿವರ್ತಿಸಿ ಕೊಂಡ ಮೊಲದ ಕಥೆ.ನಿರ್ವಾಣದ ಮೂಲ ಉದ್ದೇಶ ತಿಳಿಸುತ್ತದೆ. ಹಾಗೆಂದು ಇಲ್ಲಿ ನಿರ್ವಾಣದ ವೈಭವಿಕತೆ ಮಾಡಿಲ್ಲ ಈ ಕೃತಿ ಬಹುಪಾಲು ಉದಾತ್ತ ಚಿಂತನೆಗಳು ಹಾಗೊ ಬದುಕಿನ ಮೌಲ್ಯಗಳನ್ನು, ಮಾನವನ ಜೀವನದ ಪ್ರಾಮುಖ್ಯತೆಯನ್ನು  ಸಾರುತ್ತದೆ. ಸರ್ವತ್ರಿಕ ಕರುಣೆ ,ಅಂತಃಕರಣ ಉಳ್ಳವರಾಗಿ ಪರರ ಸಂಕಟವನ್ನು ಅರಿತು ಮಾನವೀಯತೆಯಲ್ಲಿ ಬೆರೆತು ಋಜುಮಾರ್ಗದ ಮೂಲಕ ಬದುಕಿನ ಶ್ರೇಷ್ಠ ದಾರಿಯನ್ನು ಕಂಡುಕೊಳ್ಳಿ ಎಂಬುದು.ನಿರ್ವಾಣ ಆಶಯ.

ಇಲ್ಲಿ ಬರುವ ಐದು ಪಾತ್ರಗಳು ನಿರ್ವಾಣ ಕುರಿತ ಚರ್ಚೆಯನ್ನು ಹಲವು ವಿಧದಲ್ಲಿ ಮಾಡುತ್ತವೆ. ಪ್ರತಿ ಪಾತ್ರಕ್ಕೋ ತನ್ನದೇ ಆದ ಆದರ್ಶ ಗಳನ್ನು ಹೊಂದಿರುತ್ತವೆ . ಈ ಕೃತಿಯಲ್ಲಿ ಬರುವ ಬುದ್ದನ ಶಿಷ್ಯ
ಅನುರುದ್ದನು ಸಮರ್ಥವಾಗಿ ಬುದ್ದನ ತತ್ವಗಳನ್ನು ವಿವರಿಸುತ್ತಾನೆ. ಚರ್ಚೆಯ ದಾರಿಯನ್ನು ಸರಿಯಾದ ಕ್ರಮದಲ್ಲಿ ಸಾಗಲು ಸಹಕಾರಿಯಾಗುತ್ತಾನೆ‌.

ಕೃತಿ ಅಂತ್ಯದಲ್ಲಿ ಬರುವ ಅಧ್ಯಯ ಮಹಾಜ್ಞಾನಿ ಬುದ್ದ ಅಧ್ಯಾಯ ಸಂಪತ್ಬರಿತವಾದ ಸಂದೇಶಗಳಿಂದ ತುಂಬಿದೆ .ಅರಿವಿನ ಆಗಸವನ್ನು ತೆರೆಯುತ್ತದೆ . ಉಪದೇಶಗಳಿಂದ ಹುರಿದುಂಬಿಸುತ್ತವೆ .” ಮನುಷ್ಯ ಎನನ್ನು ಬಿತ್ತುತ್ತಾನೂ ಅದನ್ನೆ ಬೆಳೆಯುತ್ತಾನೆ . ಜೀವನ ಎಂಬ ಫಲಭರಿತ ಬಾಳಿನಲಿ ಸದ್ಬಾವನೆ ಸದ್ಗುಣ, ನಿಸ್ವಾರ್ಥ, ತ್ಯಾಗ, ಮಮತೆ ಸಹೃದಯ ಭಾವನೆಗಳು ಬಿತ್ತಿ ಅವನ್ನೆ ಪಡೆಯಿರಿ ಎಂಬ ಸರ್ವಕಾಲಿಕ ಸತ್ಯವನ್ನು ಬುದ್ದರ ತತ್ವಗಳು ಓದುಗರಿಗೆ ಉಣಬಡಿಸುತ್ತವೆ.

ಈ ಕೃತಿ ವಿಚಾರ ಸಾಹಿತ್ಯವಾದರೂ ವರ್ತಮಾನದ ಬದುಕಿಗೆ ಅಗತ್ಯವಿದೆ. ವಿಚಾರ ಇಲ್ಲದೆ ಜೀವನ ಸಾಧ್ಯವೇ?. ಪ್ರತಿಯೂಬ್ಬರು ಓದ ಬಹುದಾದ ವಿಶಿಷ್ಟ ಕೃತಿ ನಿರ್ವಾಣ.


 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW