‘ನಿವೇದನೆ’ ಕವನ – ರಶ್ಮಿಪ್ರಸಾದ್

‘ಮನದಲಿ ಮೂಡಿದ ಸುಂದರ ಕನಸುಗಳೇ ಹಾಗೆಯೆ’… ರಶ್ಮಿಪ್ರಸಾದ್ (ರಾಶಿ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ…

ಒಡಲಲಿ ಉದಿಸಿದ
ಒಲವ ಭಾವಗಳೇ
ಹಾಗೆಯೆ ಅಲ್ಲಿಯೇ ಹುದುಗಿಬಿಡಲಿ….
ಇನ್ನೊಬ್ಬರ ಕಂಗಳ
ಕಂಬನಿ ತೋಯಿಸಿ
ಕಾಡುವುದೆನ್ನ..!

ಮನದಲಿ ಮೂಡಿದ
ಸುಂದರ ಕನಸುಗಳೇ
ಹಾಗೆಯೆ ಅಲ್ಲಿಯೇ
ಕಮರಿಬಿಡಲಿ….
ಮತ್ತೊಬ್ಬರ ಬಿಕ್ಕಳಿಕೆ
ತಟ್ಟುತ ನೋಯಿಸಿ
ನರಳಿಸುವುದೆನ್ನ..!

ಎದೆಯಲಿ ಅರಳಿದ
ಮಧುರ‌ ಆಸೆಗಳೇ
ಹಾಗೆಯೆ ಅಲ್ಲಿಯೇ
ಮುದುಡಿ ಬಿಡಲಿ
ಬೇರೊಬ್ಬರ ವೇದನೆ
ತಾಕುತ ಶಪಿಸಿ
ಕನಲಿಸುವುದೆನ್ನ..!

ಹೃದಯದಿ ಮೀಟಿದ
ಅನುರಾಗ ಸ್ವರಗಳೇ
ಹಾಗೆಯೆ ಅಲ್ಲಿಯೇ
ಸ್ತಬ್ಧವಾಗಿ ಬಿಡಲಿ
ಯಾರದೋ ಹತಾಶೆ
ಚುಚ್ಚುತ ಪೀಡಿಸಿ
ಹೈರಾಣಾಗಿಸುವುದೆನ್ನ.!


  • ರಶ್ಮಿಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading