ಕರುನಾಡ ಪಂಚಗವ್ಯ ವಿಶೇಷ ವೈದ್ಯ- ಡಾ. ಡಿ.ಪಿ ರಮೇಶ್



ಗೋವಿನ ಐದು ಉತ್ಪನ್ನಗಳಾದ ಹಾಲು, ಮೊಸರು, ಘೃತ, ಗೋಮೂತ್ರ, ಗೋಮಯ ಮತ್ತು ಆಯುರ್ವೇದ ಔಷಧಗಳನ್ನು ಬಳಸಿಕೊಂಡು ನೀಡುವ ಚಿಕಿತ್ಸಾ ಪದ್ಧತಿಗೆ ಪಂಚಗವ್ಯ ಎನ್ನಲಾಗುತ್ತದೆ. ಇದರಲ್ಲಿ ಪ್ರವೀಣರಾದ ಡಾ. ಡಿ.ಪಿ ರಮೇಶ್ ಅವರ ಬಗ್ಗೆ ಡಾ.ಪ್ರಕಾಶ ಬಾರ್ಕಿ ಅವರು ಇನ್ನಷ್ಟು ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ…

#ಕ್ಯಾನ್ಸರ್ ವಾಸಿಯಾಗುತ್ತೆ ಕಿಮೋಥೆರಪಿ, ರೇಡಿಯೋ ಥೆರಪಿ ಅಂತಿಮವಲ್ಲ, ಕಿಡ್ನಿ ಸಮಸ್ಯೆಗೆ “ಡಯಾಲಿಸಿಸ್” ಒಂದೇ ಮದ್ದಲ್ಲ…” ಅಂತಾ ಬಳಲಿ ಬೆಂಡಾದ ಅದೇಷ್ಟೋ ಜೀವಗಳಿಗೆ ಪ್ರತಿದಿನ “ಚಿಕಿತ್ಸೆ ಮತ್ತು ಭರವಸೆ ನೀಡುತ್ತ ಅವರ ಕಾಯಿಲೆಗಳನ್ನು ಸಂಪೂರ್ಣ ವಾಸಿ ಮಾಡುತ್ತಾ ಬಂದಿದ್ದಾರೆ ಡಾ. ಡಿ.ಪಿ ರಮೇಶ್.

ಡಾ. ಡಿ.ಪಿ ರಮೇಶ ರವರು ಆಯುರ್ವೇದ ವೈದ್ಯ ಪದವಿ ಪಡೆದು, “ಆಯುಷ್ ಪಂಚಗವ್ಯ ಚಿಕಿತ್ಸೆ” ಯಲ್ಲಿ ಅತ್ಯಂತ ನಿಪುಣರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸಾವಿರಾರು ಕ್ಯಾನ್ಸರ್, ಕಿಡ್ನಿ ವೈಫಲ್ಯ, ಚರ್ಮರೋಗ, ಬಂಜೆತನ, ಅಸ್ತಮಾ, ಆರ್ಥ್ರೈಟಿಸ್, ಬೊಜ್ಜು, ನರರೋಗ ಮುಂತಾದ ರೋಗಗಳಿಗೆ ಯಶಸ್ವಿ ಚಿಕಿತ್ಸೆ ನೀಡಿ ರೋಗಿಗಳನ್ನ “ರೋಗ ಮುಕ್ತ”ರನ್ನಾಗಿಸಿದ್ದಾರೆ.

#ಪಂಚಗವ್ಯ ಅಂದರೆ ಗೋವಿನ ಐದು ಉತ್ಪನ್ನಗಳಾದ ಹಾಲು, ಮೊಸರು, ಘೃತ, ಗೋಮೂತ್ರ, ಗೋಮಯ ಬಳಸಿಕೊಂಡು ಮತ್ತು ಆಯುರ್ವೇದ ಔಷಧಗಳ ಜೊತೆ ಸಂಯೋಗಿಸಿ ಚಿಕಿತ್ಸೆ ನೀಡುವ ಪದ್ಧತಿ.

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಪಂಚಗವ್ಯಗಳನ್ನ ಅಷ್ಟೇ ಬೇರ್ಪಡಿಸಿ ಅತ್ಯಂತ ಪ್ರಭಾವಿ ಚಿಕಿತ್ಸೆ ನೀಡುವ ವಿಶೇಷ ವೈದ್ಯ ಶಾಸ್ತ್ರವಾಗಿ ಹೊರಹೊಮ್ಮಿದೆ. ಆದರೆ ಆಯುರ್ವೇದದ ಹೊರತಲ್ಲ. “ಕ್ಯಾನ್ಸರ್”ನಂತ ಮಾರಕ ಕಾಯಿಲೆಗಳಿಂದ ಹಿಡಿದು ಈ ವರೆಗಿನ “#ಕೊರೋನಾ” ಕಾಯಿಲೆಗೆ ಯಶಸ್ವಿ ಚಿಕಿತ್ಸೆ ನೀಡಲಾಗುತ್ತಿದೆ.

ನೂರಾರು ಸಂಶೋಧನೆಗಳು ನಡೆದಿದ್ದು. ಗೋಮೂತ್ರ ಕ್ಯಾನ್ಸರ್ ಕಾಯಿಲೆಯಲ್ಲಿ “ಕಿಮೋಥೆರಪಿ”ಯಷ್ಟೆ ಯಶಸ್ವಿಯಾಗಿದೆ. ಕಿಮೋಥೆರಪಿ ಕ್ಯಾನ್ಸರ್ ಕಣಗಳ ಜೊತೆ ಆರೋಗ್ಯಕರ ಜೀವಕೋಶಗಳನ್ನು ಕೊಂದುಹಾಕುತ್ತದೆ, ರೋಗಿ ಚೇತರಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಆದರೆ ಗೋಮೂತ್ರ ಚಿಕಿತ್ಸೆ ಕೇವಲ “ಕ್ಯಾನ್ಸರ್ ಕಣಗಳನ್ನು” ನಾಶಮಾಡಿ ರೋಗಿಯನ್ನು ನಿರೋಗಿಯಾಗಿಸುತ್ತದೆ. ಕಿಮೋಥೆರಪಿ, ರೇಡಿಯೋ ಥೆರಪಿ ಬದಲಾಗಿ “ಆಯುಷ್ ಪಂಚಗವ್ಯ ಚಿಕಿತ್ಸೆ” ನೀಡಬಹುದು ಇದರಿಂದ ಕಾಯಿಲೆ ಮತ್ತೆ ಮರುಕಳಿಸದಂತೆ ಬಗ್ಗುಬಡಿಯಬಹುದು ಎಂಬುದು ವೈದ್ಯರ ಅಭಿಪ್ರಾಯ. ಹಾಗಂತ ಯಾವ ವೈದ್ಯ ಪದ್ಧತಿಯನ್ನು ಇವರು ದೂಷಿಸುವುದಿಲ್ಲ. ಎಲ್ಲಾ ವೈದ್ಯಕೀಯ ಶಾಸ್ತ್ರಕ್ಕೆ ಅದರದೆ ಆದ ನಿರ್ಬಂಧನೆಳು, ಇತಿ- ಮಿತಿಗಳಿವೆ ಎನ್ನುತ್ತಾರೆ.

#ಡಾ_ಡಿ_ಪಿ_ರಮೇಶರವರು “ಪಂಚಗವ್ಯ” ಚಿಕಿತ್ಸೆಯಲ್ಲಿ ಹಲವು ಸಂಶೋಧನೆಗಳನ್ನ ಮಾಡಿದ್ದಾರೆ. ಸಾವಿರಾರು‌ ರೋಗಿಗಳ ಮೇಲೆ ಯಶಸ್ವಿ ಪ್ರಯೋಗ ಮಾಡಿ “ರೋಗಗಳನ್ನು” ಗುಣಪಡಿಸಿದ್ದಾರೆ.

ಪಂಚಗವ್ಯ ಚಿಕಿತ್ಸೆಯಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದು, ಮಧ್ಯಪ್ರದೇಶದ ” ಡಾ.ಜೈನ್ ಕೌ ಯೂರಿನ್ ಥೆರಪಿ” ಸಂಸ್ಥೆಯಲ್ಲಿ ವೈದ್ಯರಾಗಿ, ಸಂಶೋಧಕರಾಗಿ, ಸಂದರ್ಶಕ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಭಾರತದ “ಡಾ. ಜೈನ್ ಕೌ ಯೂರಿನ್ ಥೆರಪಿ” ಸಂಸ್ಥೆಯ ಪ್ರಮುಖ ವೈದ್ಯರು ಹೌದು.

ಸಧ್ಯ ಶ್ರೀ ರಾಮಚಂದ್ರಾಪುರ ಮಠದ ಪಂಚಗವ್ಯ ಔಷಧಿ ಉತ್ಪಾದನಾ ಘಟಕವಾದ “ಮಾ ಗೌ ಪ್ರಾಡಕ್ಟ್ ಲಿ.” ನ ಪ್ರಮುಖ ಟೆಕ್ನಿಕಲ್ ಅಡ್ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉತ್ತರ ಭಾರತದ ಪ್ರಥಮ “ಆಯುಷ್ ಪಂಚಗವ್ಯ ಕ್ಯಾನ್ಸರ್ ಕೇರ್ ಸೆಂಟರ್, ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜು, ಕೊಪ್ಪಳದಲ್ಲಿ ತೆರೆದಿದ್ದು, ಅಲ್ಲಿ ಚೀಫ್ ಮೆಡಿಕಲ್ ಕನ್ಸಲ್ಟಂಟ್” ಆಗಿದ್ದಾರೆ.

ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋಸೇವಾ ಟೋಳಿಯ ಪಂಚಗವ್ಯ ಚಿಕಿತ್ಸೆ ವಿಷಯ ಪ್ರಮುಖರಾಗಿದ್ದಾರೆ.

This slideshow requires JavaScript.

#ಉಚಿತ ಚಿಕಿತ್ಸೆ :

ತಮ್ಮಲ್ಲಿಗೆ ಬರುವ ರೋಗಿಗಳಿಗೆ ಫೀಸ್ ಪಡೆಯದೆ ಉಚಿತ ಚಿಕಿತ್ಸೆ ನೀಡುವರು. ಔಷಧಗಳನ್ನು ಮಾತ್ರ ಕೊಂಡುಕೊಳ್ಳಬಹುದು ಅವು ಕೆಲವು ನೂರುಗಳಲ್ಲಿ ಮಾತ್ರ. ಯಾರಾದರೂ ರೋಗಿಗಳು ಒತ್ತಾಯಿಸಿ ಹಣ ಕೊಟ್ಟರೆ ಅದು ಸಹ “ಗೋ ಶಾಲೆ” ಗೆ ಕೊಟ್ಟು ಧನ್ಯತಾಭಾವದಿಂದ ಮಂದಸ್ಮಿತರಾಗುವ ಪರೋಪಕಾರಿ ವೈದ್ಯ. ತುಂಬಾ ಸರಳ ಮತ್ತು ಅಘಾದ ಪಾಂಡಿತ್ಯದ ವೈದ್ಯ ಎಲೆಮರೆ ಕಾಯಿಯಂತೆ ಕರ್ನಾಟಕದ್ಯಾಂತ ಸುಮಾರು 2500 ಕ್ಕಿಂತ ಹೆಚ್ಚು “ಕ್ಯಾಂಪ್” ನಡೆಸಿ ಆಯುಷ್ ಪಂಚಗವ್ಯ ಚಿಕಿತ್ಸೆ ಮೂಲಕ ಮಾರಕ ಕಾಯಿಲೆಗಳಿಂದ ಜನರನ್ನ ಗುಣಮುಖರಾಗಿಸಿದ್ದಾರೆ.

ಶಾಲಾ- ಕಾಲೇಜು ದಿನಗಳಿಂದಲೆ ಸ್ವಯಂ ಸೇವಕ ಸಂಘ, ವಿದ್ಯಾರ್ಥಿ ಸಂಘ, ಸಮಾಜ ಸೇವೆಯಲ್ಲಿ ಸಕ್ರಿಯರಾದವರು. ಮುಂದೆ ವೈದ್ಯ ಪದವಿ ನಂತರ “ಭಾರತೀಯ ಗೋವುಗಳ ರಕ್ಷಣೆ” ಮತ್ತು ಆಯುರ್ವೇದ ಪಂಚಗವ್ಯ ಚಿಕಿತ್ಸೆ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಾ ಹಲವು ಮಾರಕ ರೋಗಗಳನ್ನು ವಾಸಿ ಮಾಡಿದ್ದಾರೆ. ಇವರ ಪ್ರಮುಖ ಉದ್ದೇಶ “ಕ್ಯಾನ್ಸರ್ ಮತ್ತು ಇತರೇ ಮಾರಕ ಕಾಯಿಲೆಗಳನ್ನು ಪಂಚಗವ್ಯ ಚಿಕಿತ್ಸೆಯಿಂದ ಗುಣಪಡಿಸುವುದು. ಬೇರೆ ವೈದ್ಯ ಪದ್ಧತಿಯಲ್ಲಿ ಗುಣವಾಗದ ಕಾಯಿಲೆಗಳು “ಪಂಚಗವ್ಯ ಚಿಕಿತ್ಸೆ”ಯಿಂದ ಸಂಪೂರ್ಣ ಗುಣವಾಗಿಸುವುದು.

“ಗೋ ಸೇವಾ ಪುರಸ್ಕಾರ” ಮತ್ತು “ವೈದ್ಯರತ್ನ” ಪ್ರಶಸ್ತಿಗಳಿಂದ ಸಮ್ಮಾನಿತರಾಗಿದ್ದಾರೆ. ಇವರ ಹಲವು ಸಂಶೋಧನಾ ಪ್ರಬಂಧಗಳು” ರೀಸರ್ಚ್ ಜರ್ನಲ್”ಗಳಲ್ಲಿ ಪ್ರಕಟವಾಗಿವೆ. ಕನ್ನಡ ದಿನಪತ್ರಿಕೆಯಲ್ಲಿ ಅಂಕಣಗಳನ್ನು ಬರೆದಿದ್ದು, ಸುದ್ಧಿವಾಹಿನಿಗಳಲ್ಲಿ ಸಹ ಹಲವು ಸಂದರ್ಶನ ನೀಡಿದ್ದಾರೆ.

ವೈದ್ಯ ಡಿ.ಪಿ ರಮೇಶ್ ರವರು ಕರೋನಾ ಮಹಾಮಾರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಬೆಂಗಳೂರಿನ ಭಾರತಿ ಕರ್ನಾಟಕ ಆಯುರ್ವೇದ ವೈದ್ಯ ತಂಡದೊಂದಿಗೆ ಪಂಚಗವ್ಯ ಆಧಾರದ ಮೇಲೆ “ಆರೋಗ್ಯ ಸಾರ” ಎಂಬ ಔಷಧಿ ಕಂಡುಹಿಡಿದಿದ್ದಾರೆ. ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಔಷಧವನ್ನು ಬಳಸುವಂತೆ “ಕರ್ನಾಟಕ ಸರ್ಕಾರ”ಕ್ಕೆ ಒತ್ತಾಯಿಸಿದ್ದಾರೆ. ಹಲವು ವೈರಸ್ ಕಾಯಿಲೆಗಳಲ್ಲಿ “ಆರೋಗ್ಯ ಸಾರ” ಪ್ರಭಾವಿ ಔಷಧವಾಗಿ ಹೊರಹೊಮ್ಮಿದೆ.



“ಕಿಡ್ನಿ ವೈಫಲ್ಯದಿಂದ” ಬಳುಲುತ್ತಿದ್ದ ರೋಗಿಗೆ “ಡಯಾಲಿಸಿಸ್” ಮಾಡಿಸಿಕೊಳ್ಳಲು ವೈದ್ಯರು ಸಲಹೆಯಿತ್ತಾಗ, ಆತ ಅದನ್ನು ತಿರಸ್ಕರಿಸಿ ಹೊರ ನಡೆದಿದ್ದ. ಮೂರು ತಿಂಗಳು ನಂತರ ಆತನ “ರಕ್ತ ಪರೀಕ್ಷೆ”ಯ ಫಲಿತಾಂಶಗಳನ್ನು ನೋಡಿ ಧಂಗಾಗಿದ್ದೆ. ಕಾರಣ ಆತ “ಡಯಾಲಿಸಿಸ್” ಇಲ್ಲದೆ ತನ್ನ ಕಿಡ್ನಿ ವೈಫಲ್ಯದಿಂದ ಬಹುಪಾಲು ಪಾರಾದ ಘಟನೆ. ಈತನಿಗೆ ಯಶಸ್ವಿ ಚಿಕಿತ್ಸೆ ನೀಡಿದವರು “ವೈದ್ಯ ಡಿ.ಪಿ. ರಮೇಶ್” ರವರು ಈ ಕರೋನಾ ದುರಿತ ಕಾಲದಲ್ಲಿಯೂ.. ಕೆವಲ ಫೋನ್ ಮೂಲಕ ಸಂಪರ್ಕ ಮತ್ತು ಕೋರಿಯರ್ ಮೂಲಕ ಔಷಧಿ ತರಿಸಿಕೊಂಡಿದ್ಧು ಅದು ಸಾವಿರ ರೂಪಾಯಿ ಒಳಗೆ. ಆಗಲೇ ಈ ಸರಳ, ಅಗಾದ ಪಾಂಡಿತ್ಯದ ವೈದ್ಯರ ಪರಿಚಯವಾಗಿದ್ದು.

ತಮ್ಮ ಅನುಭವ, ಕ್ಯಾನ್ಸರ್ ಕಾಯಿಲೆ ಮಣಿಸುವ ಬಗೆ ಮತ್ತು ಆಯುಷ್ ಪಂಚಗವ್ಯ ಚಿಕಿತ್ಸಾ ವಿಜ್ಞಾನದ ಆಧಾರದ ಮೇಲೆ “ಆನ್ಸರ್ ಟು ಕ್ಯಾನ್ಸರ್” ಎಂಬ ಹೊತ್ತಿಗೆಯನ್ನು ಬರೆಯುತ್ತಿದ್ದಾರೆ. ಇನ್ನು ಕೆಲವೆ ತಿಂಗಳುಗಳಲ್ಲಿ ಪ್ರಕಾಶಿಸುವುದಾಗಿ ವೈದ್ಯರು ತಿಳಿಸಿದ್ದಾರೆ.

ಡಾ. ಡಿ.ಪಿ ರಮೇಶ್ ರವರಲ್ಲಿ ಕ್ಯಾನ್ಸರ್, #ಕಿಡ್ನಿ_ವೈಫಲ್ಯ, ಚರ್ಮರೋಗಗಳು, ಅಸ್ತಮಾ , ಬಂಜೆತನ, ಆರ್ಥ್ರೈಟಿಸ್, ನರ ರೋಗಗಳು, ಬೊಜ್ಜು ಇನ್ನೀತರ ಬಹುದಿನದ ವಾಸಿಯಾಗದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ಅವರನ್ನು ಭೇಟಿಯಾಗುವ ಮೊದಲು “ಫೋನ್ ಕರೆ ಮಾಡಿ, ಅವರ ಲಭ್ಯತಾನುಸಾರ ಚಿಕಿತ್ಸೆ ಅಥವಾ “ಆನ್ಲೈನ್ ಕನ್ಸಲ್ಟೇಟೇಷನ್” ಪಡೆಯಬಹುದು.

ಕರ್ನಾಟಕದಲ್ಲಿ ಹೆಚ್ಚು ಸಕ್ರೀಯವಾಗಿ “ಆಯುಷ್ ಪಂಚಗವ್ಯ” ಪದ್ಧತಿಯಲ್ಲಿ ಚಿಕಿತ್ಸೆ ನೀಡಿ, ಯಶಸ್ವಿ ವೈದ್ಯರಾಗಿರುವ ಡಾ. ಡಿ. ಪಿ ರಮೇಶ್ ರವರ ಕ್ಲಿನಿಕ್ ವಿಳಾಸ ಮತ್ತು ಸಂಪರ್ಕ ಸಂಖ್ಯೆ:

ಡಾ.ಡಿ. ಪಿ ರಮೇಶ್
ಆಯುರ್ವೇದ ಪಂಚಗವ್ಯ ಸ್ಪೆಷಾಲಿಟಿ ಹೆಲ್ತ್ ಕೇರ್ ಮತ್ತು ಸಂಶೋಧನಾ ಕೇಂದ್ರ.
#77, 5 ನೇ ಮುಖ್ಯ ರಸ್ತೆ. ಜಬ್ಬರ್ ಬ್ಲಾಕ್.
ವಯ್ಯಾಲಿಕಾವಲ್ ಪೋಲಿಸ್ ಸ್ಟೇಷನ್ ಹತ್ತಿರ.
ಪ್ಯಾಲೇಸ್ ಗುಟ್ಟಹಳ್ಳಿ.
ಬೆಂಗಳೂರು.
ಸಂಪರ್ಕ: 8971176311
9343473107

www.ayurpanchagavya.com


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

2 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW