ಪಂಚತಂತ್ರ ಕಥೆಯಲ್ಲಿ – ಪ್ರೊ.ರೂಪೇಶ್ ಪುತ್ತೂರು



ಲೇಖಕ ಪ್ರೊ.ರೂಪೇಶ್ ಪುತ್ತೂರು ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಮಿನಿಕತೆಯಲ್ಲಿ ಜೀವನದ ಸುಂದರ ಪಾಠವಿದೆ, ತಪ್ಪದೆ ಓದಿ…

ಪಂಚತಂತ್ರ ಕಥೆಗಳಲ್ಲಿ ನಾವು-ನೀವು ಓದಿದ ಒಂದು ಕಥೆ ಏನೋ ಈ ನಡುವೆ ನನ್ನ ಮನದಲ್ಲಿ ಮಾಸ್ಮರಿಕೆಯ ಕದ ತಟ್ಟುತ್ತಿರುವಂತೆ ಭಾಸವಾಗುತ್ತಿದೆ. ವಿಷ್ಣು ಶರ್ಮಾ ರಾಜರ ಮಕ್ಕಳಾದ ಯುವರಾಜರಿಗೆ ಕಥೆ ಹೀಗೆ ಹೇಳುತ್ತಾನೆ. ಮಕ್ಕಳಿಲ್ಲದ ರಾಜ , ಯುದ್ದದಲ್ಲಿ ತೀರಿ ಹೋದ ತನ್ನ ಮಿತ್ರ ಹಾಗೂ ಮಂತ್ರಿಯ ಮಗನಾದ ಐಕ್ಯನನ್ನು ಯುವರಾಜನನ್ನಾಗಿ ಮಾಡಿದ. ಒಮ್ಮೆಲೆ ಸಿಕ್ಕ ಅವಕಾಶದಿಂದ ಅತಿಯಾಸೆ ಜಾಸ್ತಿಯಾಗಿ, ರಾಜಾ ರಾಣಿ ಹೋಗುವ ರಥದ ಚಕ್ರದ ಗಾಲಿ ಸಡಿಲಿಸಿದುದರ ಪರಿಣಾಮ, ಅಫಘಾತದಲ್ಲಿ ರಾಜ ಸಾವನ್ನಪ್ಪಿದ , ರಾಣಿ ಮೆದುಳಿಗೆ ಏಟಾಗಿ ಎಲ್ಲಾ ಮರೆತು ಹಾಸಿಗೆ ಹಿಡಿದಳು.

ಆ ಸ್ಥಾನದ ಮಂತ್ರಿ, ಸೇನಾಪತಿ, ಖಜಾಂಜಿ…. ಮುಂತಾದ ಹಿರಿಯರು ತನಗೆ ಮಾರ್ಗದರ್ಶನ ಮಾಡುವುದು ಇಷ್ಟವಾಗದೆ, ಐಕ್ಯನು ಅವರ ಆಹಾರದಲ್ಲಿ ಒಂದೊಂದು ದಿನ ಒಬ್ಬೊಬ್ಬರಿಗೆ ಬೇರೆ ಬೇರೆ ವಿಷಬೆರೆಸಿ, ರಾಜನ ಭೋಜನ ಶಾಲೆಯಲ್ಲಿ ಉಣಿಸಿದನು. ಪರಿಣಾಮ ಒಬ್ಬ ಮಂತ್ರಿ ಕರುಳು ಬೇನೆಯಿಂದ ಸತ್ತ, ಸೇನಾಪತಿ ಕ್ಷಯ ರೋಗ ಬಂದು ಸತ್ತ, ಖಜಾಂಜಿ ಮುತ್ರಪಿಂಡ ಹಾಳಾಗಿ ಸತ್ತ……….

ಹೀಗೆ ರಾಜನ ಕಾಲದ ಹಳೆ ತಲೆಗಳು ಒಂದೊಂದು ರೋಗದಿಂದ ಮರೆಯಾದರು. ನಂತರ ಐಕ್ಯ , ತನ್ನ ದೇಶದಲ್ಲಿ ಯಾವುದೇ ಬಡವರು ಇರಬಾರದೆಂದು,ಜನ ಸಾಮಾನ್ಯರಿಂದ ತೀವ್ರವಾದ ಮಿತಿಮೀರಿದ ತೆರಿಗೆಯನ್ನು ವಸೂಲಿ ಮಾಡಿದ. ಶ್ರೀಮಂತರಿಗೆ ಬೆಳೆಯಲು ಬೊಕ್ಕಸದಿಂದ ಬೇಕಾದ ಧನಸಹಾಯ ಮಾಡಿದನು.

ಈ ಮಧ್ಯೆ ತನ್ನ ಮೇಲೆ ಸಂಶಯ ದೃಷ್ಟಿ ಬೀರಿದವರನ್ನು, ವಿಮರ್ಶೆ/ಯಾ/ ಪ್ರಶ್ನೆ ಮಾಡಿದವರನ್ನು ಕಾರಾಗೃಹಕ್ಕೆ ಕಳುಹಿಸಿ, ಅವರಿಗೆ ವಿಷ ಬೆರೆಸಿ ಆಹಾರ ಇತ್ತು ಇಲ್ಲವೇ ಗಲ್ಲಿಗೇರಿಸಿದ.

ಕಾಲ ಕಳೆದಂತೆ ಪ್ರಜೆಗಳು ಭಿಕಾರಿಯಾಗಿ, ವರ್ತಕರಿಗೆ ಪ್ರಜೆಗಳಿಂದ ವ್ಯಾಪಾರವಾಗುವುದು ಕಡೆಮೆಯಾಯಿತು. ದೇಶ ಆರ್ಥಿಕ ಹೊಡೆತ ಅನುಭವಿಸಿ ಪಾತಾಳ ಸ್ಥರ ಹಿಡಿಯತೊಡಗಿತು.



ಐಕ್ಯನ ರಾಜ್ಯಭಾರ ಗರಿಷ್ಟ ದಿಕ್ಕು ತಪ್ಪಿದಾಗ, ಐಕ್ಯನೇ ಪೋಷಿಸಿ ಬೆಳೆಸಿದ ಶ್ರೀಮಂತರು – ವ್ಯಾಪಾರಿಗಳು, ನೆರೆಯ ರಾಜ್ಯದ ರಾಜನಿಗೆ ಧನಸಹಾಯ ಮಾಡಿ ಐಕ್ಯನ ರಾಜ್ಯದ ಮೇಲೆ ಆಕ್ರಮ ಮಾಡಿಸಿ, ಐಕ್ಯನನ್ನು ಸೋಲಿಸಿ ಕಾಡಿಗಟ್ಟಿದರು.

ಕಥೆಯ ಕೊನೆಗೆ ವಿಷ್ಣು ಶರ್ಮಾ ಹೇಳುತ್ತಾರೆ.

” ನೀವು ಹೊಟ್ಟೆ ತುಂಬಿದ ಯಾರನ್ನು ಬೆಳೆಸುವಿರೋ….ಅವರು ಕೊನೆಗೆ ನಿಮ್ಮ ಸ್ಥಾನವನ್ನು ಕೀಳುವರು/ ಕಿತ್ತೆಸೆಯುವರು. ಯುವರಾಜರೇ ಎಂದು ನೀವು ಪ್ರಜೆಗಳನ್ನು ರಾಜ್ಯದೊಂದಿಗೆ ಬೆಳೆಸುವವಿರೋ, ನಿಮ್ಮ ಮರಣಾನಂತರ, ನಿಮ್ಮ ಅಮರತ್ವದ ಬೇರು, ಪ್ರಜೆಗಳು ಕೀಳದಿಡುವರು. ಎಂಬ ಸಾರಾಂಶ ಇಲ್ಲಿ ಅರ್ಥಮಾಡಿಕೊಳ್ಳಿ – ಈ ಕಥೆ ಒಂದು ರಾಜಧರ್ಮವನ್ನು ಹೇಳುತ್ತದೆ.”

ನಿಮ್ಮವ ನಲ್ಲ
ರೂಪು


  • ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading