‘ಉಪ್ಪಿನಕಾಯಿ ‘ ಕವನ – ಚ.ನಾ.ಭಾಗ್ಯಲಕ್ಷ್ಮಿ

ಕವಿಯತ್ರಿ ಚ.ನಾ.ಭಾಗ್ಯಲಕ್ಷ್ಮಿ ನಾರಾಯಣ ಅವರು ಉಪ್ಪಿನಕಾಯಿಯ ಮೇಲೆಯೇ ಒಂದು ಕವನವನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ನಳನಳಿಸುತಿದ್ದೆ
ಹಸಿರೆಲೆಯ ಮಧ್ಯೆ
ಈಚಾಗಿ, ಬಲಿತಿದ್ದೆ
ಕಾಯಾದೆ ಈ ಮಧ್ಯೆ

ಎಲೆಗೊಂದು ಕಾಯಂತೆ
ತೂಗಿ ಬಾಗಿ ಬೀಗಿದೆ
ಬಾಯಲ್ಲಿ ನೀರೂರುವಂತೆ
ಮನಸೆಳೆಯೆ ಕೂಗಿದೆ

ಹಿರಿಹಿರಿ ಹಿಗ್ಗು ನನಗೆ
ನೀ ಸಿಕ್ಕಾಗ ಕೈಗೆ
ಕಾರ ಉಪ್ಪಿಗೂ ಬಯಕೆ
ಸೇರಲು ನಿನ್ನ ಮೈಗೆ

ಲವಣದೊಳು ಜಳಕವಾಡಿ
ಹಿಗ್ಗಿದವ ನೀ ಕುಗ್ಗಿದೆ
ಖಾರದೊಳು ಕುಣಿದಾಡಿ
ರುಚಿಗೆ ನೀ ಸಿಕ್ಕಿದೆ

ಊಟಕೆ ಬೇಕೇಬೇಕು
ಉಪ್ಪಿನಕಾಯಿ
ಅದಿಲ್ಲದೆ ಕೆಡುವುದು
ನನ್ನ ಬಾಯಿ


  • ಚ. ನಾ. ಭಾಗ್ಯಲಕ್ಷ್ಮಿ ನಾರಾಯಣ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW