ಟೊಮೇಟೊ ಸಾರು ಬಹುತೇಕ ಮನೆಯಲ್ಲಿ ಎಲ್ಲರೂ ಇಷ್ಟಪಡುವ ರುಚಿಕರ ಮಾಡಲು ಸರಳವಾಗಿರುವ ಸಾರು. ಮಾಡುವ ಕೈಗಳು ಬೇರೆ ಬೇರೆ. ನಳಪಾಕ ಪ್ರವೀಣೆ ಮಂಜುಳ ನವೀನ್ ಅವರು ಸರಳವಾಗಿ ಟೊಮೇಟೊ ಸಾರು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ, ತಪ್ಪದೆ ನೀವು ಈ ರೀತಿ ಮಾಡಿ ನೋಡಿ…

ಬೇಕಾಗಿರುವ ಸಾಮಗ್ರಿಗಳು :
- ಟೊಮ್ಯಾಟೋ – 2
- ಹಸಿ ಮೆಣಸಿನಕಾಯಿ – 2
- ಜೀರಿಗೆ – 1 ಚಮಚ
- ಸಾಸಿವೆ – 1/2 ಚಮಚ
- ಇಂಗು – ಚಿಟಿಕೆ
- ಬೆಳ್ಳುಳ್ಳಿ – 8-10
- ಕರಿಬೇವು – ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಎಣ್ಣೆ – 2 ಚಮಚ
- ಅರಿಶಿನ 1/2 ಚಮಚ
- ಹುಣಸೆ ರಸ – 2 ಚಮಚ
- ಬೆಲ್ಲ – ಸ್ವಲ್ಪ
- ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಒಂದು ಪಾತ್ರೆಗೆ ಟೊಮ್ಯಾಟೋ, ಹಸಿ ಮೆಣಸಿನಕಾಯಿ, ಜೀರಿಗೆ, ಕರಿಬೇವು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ , ಅರಿಶಿನ , ಉಪ್ಪು, ಬೆಳ್ಳುಳ್ಳಿ ನಾಲ್ಕು ಹಾಕಿ ಕುಕ್ಕರ್ ನಲ್ಲಿ ಇಟ್ಟು ಕೂಗಿಸಿ.
ಆರಿದ ನಂತರ ಮಸೆದು ಕೊಳ್ಳಿ. ಬೇಕಾದರೆ ಸ್ವಲ್ಪ ನೀರು ಹಾಕಿ. ಒಗ್ಗರಣೆಗೆ ಎಣ್ಣೆ , ಸಾಸಿವೆ , ಇಂಗು ಜೀರಿಗೆ , ಕರಿಬೇವು , ಒಣ ಮೆಣಸಿನಕಾಯಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ಸಾರಿಗೆ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಸಿಂಪಲ್ ಟೊಮೇಟೊ ಸಾರು ರೆಡಿ .
- ಮಂಜುಳ ನವೀನ್
