ಇಂದು ಲೇಖಕ, ಛಾಯಾಗ್ರಾಹಕ, ಪರಿಸರ ಪ್ರೇಮಿ ಹಲವು ಪ್ರತಿಭೆಗಳನ್ನು ಹೊಂದಿದ್ದ ನಮ್ಮ ನಾಡಿನ ಹೆಮ್ಮೆಯ ಬರಹಗಾರ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಈ ಲೇಖನ ತೇಜಸ್ವಿಯವರಿಗೆ ಅರ್ಪಣೆ …
ನಾಡು, ನುಡಿ ಮರೆಯದ ಲೇಖಕರು ಅಚ್ಚಳಿಯದೆ ತಮ್ಮ ಛಾಪನ್ನು ಮನ ಮನಗಳಲ್ಲಿ ಉಳಿಸಿದವರು ಹಾಗೆಂದು ಅವರ ಬಹರಗಳು ನಿಲುಕಲಾರದ, ಅರ್ಥ ವಾಗಲಾರದ ಕಗ್ಗಂಟ್ಟು ಅಗಿರಲಿಲ್ಲ. ಜನ ಸಮಾನ್ಯರ ನಡುವೆ ಬದುಕಿ ಅವರ ಬದುಕು, ಭಾವನೆಗಳನ್ನು ಕಾಡಿನ ಪರಿಸರವನ್ನು ಅದಕ್ಕೆ ಮಾನವ ನೀಡುತ್ತಿರುವ ಉಳಪಟವನ್ನು ಒಂದೆಡೆ ಬರೆದರೆ ,
ಅದ್ಬುತ, ಅನನ್ಯ ಪರಿಸರ ರಮ್ಯ ನೋಟವನ್ನು ನಮಗೆ ಅವರ ಛಾಯಾಚಿತ್ರಗಳ ಮೂಲಕ ಜಗತ್ತಿಗೆ ಪರಿಚಯಿಸಿದರು.
ಒಂದು ಕಂಫರ್ಟ್ ಜೋನ್ ( comfort zone) ಇಂದ ಹೊರಬಂದು ಬಯಸಿದಂತೆ ಬದುಕಿ ,ಪ್ರಶಸ್ತಿ, ಪ್ರಚಾರ, ಪ್ರತಿಷ್ಠೆ, ಹಾರ, ತುರಾಯಿ …ಮುಂತಾದ ಅದು ಇದು ಇಲ್ಲಸಲ್ಲದ್ದು ಎಲ್ಲದರಿಂದ ಅವರು ಬಹು ದೂರ ಉಳಿದು ಬಾಳಿದ ಬರಹಗಾರ ಎಂದರೆ ಬಹುಶಃ ಅದು ನಮ್ಮ ತೇಜಸ್ವಿ ಮಾತ್ರ … ಅವರು ನಡೆದ ಹಾದಿ ಮತ್ತೆ ಯಾರಿಂದಲೂ ನಡೆಯಲು ಅಲ್ಲ ಊಹೆಗೂ ಸಹ ನಿಲುಕಲಾರದು …!

ಫೋಟೋ ಕೃಪೆ : metrosaga
ಕನ್ನಡದ ಲ್ಲಿ ವಿಜ್ಞಾನವ ಅದರಲ್ಲೂ ಪರಿಸರ ವಿಜ್ಞಾನ ವ ಸರಳ ಭಾಷೆಯಲ್ಲಿ ಬರೆದ ತೇಜಸ್ವಿ , ಕಾಡಿನ ನಾಶ ಇದರಿಂದಾಗುವ ಅಸಮತೋಲನ ,ವನ್ಯಜೀವಿಗಳ ಉಳಿಯುವ ಅವುಗಳಿಗೆ ನಾವು ಮಾಡುತ್ತಿರುವ ದೌರ್ಜನ್ಯ ಎಲ್ಲದರ ಕುರಿತು ಅವರ ಮಾತುಕತೆ, ಬರಹ, ಕೃತಿಗಳು ಇವೆ.
ಇಂದು ಬೆಂಗಳೂರಿನಲ್ಲಿ ಇದ್ದ ಕೆರೆಗಳನ್ನೆಲ್ಲಾ ಮಾಯಮಾಡಿ ,ಕಾಲುವೆಗಳನ್ನು ಒತ್ತುವರೆಮಾಡಿಕೊಂಡು ಬಿದ್ದ ಮಳೆ ನೀರು ಹರಿದು ಹೋಗಲು ಜಾಗವಿಲ್ಲದೆ ತುಂಬಿ ನಿಂತ ನೀರನ್ನು ನಮ್ಮನ್ನು ಆಳುತ್ತಿರುವ ಬುದ್ದಿವಂತ ನಾಯಕರನ್ನು ನೋಡಿ ತೇಜಸ್ವಿ ಅವರು ಇಗ ಇದ್ದರೆ ಎನು ಉತ್ತರ ನೀಡುತ್ತಿದ್ದರು ಎಂಬುದು ಬಹುವಾಗಿ ಕಾಡುತ್ತದೆ.
ಭಾತರಕ್ಕೆ ಸ್ವತಂತ್ರ ಬಂದು 75 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಕಾಣದ ಹಳ್ಳಿ ,ಪಟ್ಟಣ ,ನಗರಗಳ ಪಟ್ಟಿ ದೊಡ್ಡ ದಿದೆ , ನಮ್ಮ ಸಿಲಿಕಾನ್ ಸಿಟಿ ರಾಜಧಾನಿ ಬೆಂಗಳೂರು ಸಹ ..! ಆಸ್ತಿ , ಐಶಾರಾಮಿ ಜೀವನದ ದಾಸರಾಗಿ ಧ್ಯೇಯ, ಆದರ್ಶ್ ಗಳ ಗಾಳಿಗೆ ತೋರಿ ಮೊಮ್ಮಕ್ಕಳಂತೆ ಇರುವ ಪುಟ್ಟ ಪುಟ್ಟ ಬಾಲೆಯರ ಮೇಲೆ ನಡೆಯುವ ಹೇಯ ದೌರ್ಜನ್ಯಕ್ಕೆ ಬಸವಾದಿ ಶರಣರು, ಅಕ್ಕಮಹಾದೇವಿ, ಅಮ್ಮಗೆ ರಾಯಮ್ಮ ಬದುಕು, ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು , ಇಂದಿನ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯಗಳು ಮಾಡುತ್ತಿರುವ ಸಾಮಾಜ ಸೇವೆ ಎಲ್ಲವ ಮರೆತು “ಬ್ರಹ್ಮಚರ್ಯ ಒಂದು ಭ್ರಮೆ ” ಎಂಬ ಮಾತು ಕೇಳಿಬರುತ್ತಿದೆ …!

ಎಲ್ಲೆಂದರಲ್ಲಿ ಭ್ರಷ್ಟಾಚಾರದ ಕದಂಭ ಬಾಹುಗಳು ಎಲ್ಲ ವಲಯವನ್ನು ಶೀಥಿಲಗೊಳಿಸಿವೆ. ಈ ಕುರಿತ ಚರ್ಚೆಯಾಗಲಿ ,ವರದಿಯಾಗಲಿ ನಡೆಯುವದಿಲ್ಲ ಸಮಸ್ಯೆ ಗಳನ್ನು ಸಮಸ್ಯೆ ಯಾಗಿ ಉಳಿಸುವ ನಾಯಕರುಗಳು ಪೈಪೋಟಿ ಗೆ ಬಿದ್ದಿದಾರೆ ..! ಇವರನಡುವೆ ಬದುಕುವ ಜನಸಾಮಾನ್ಯರು ಸಹಜವು ಅಸಹಜಾವಾಗಿ ಕಾಣುವಂತಾಗಿದೆ , ಮಳೆ ರಣ ಮಳೆ ,ರಾಕ್ಷಸ ಮಳೆ ಯಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದೆ. ಕೆರೆಗಳು ,ಬಾವಿಗಳು , ಹೊಂಡಗಳು ಅದೃಶ್ಯ ವಾಗಿ ಗಗನಚುಂಬಿ ಕಟ್ಟಡಗಳು ತೆಲೆಯೆತ್ತಿರುವಾಗ ಮಳೆ ರಾಕ್ಷಸ ಮಳೆ ಅಲ್ಲವೇ…!?
ಈ ಸಮಯದಲ್ಲಿ ಅವರ ಕೃತಿಗಳು ಹಲವು ವಿಚಾರ ಗಳಿಗೆ ಚಿಂತನೆ ಹಚ್ಚುತ್ತವೆ ಸಮಕಾಲಿನ ಆಶೋತ್ತರಗಳಿಗೆ ಸ್ಪಂದಿಸುತ್ತವೆ, ಬರಹಗಳು ಗಟ್ಟಿಯಾಗಿ ಹರಿಯಬೇಕು, ಎಲ್ಲಾ ಕಾಲಕ್ಕೂ ಎಂದರೆ ಬದುಕು ಸಹ ಗಟ್ಟಿಯಾಗಿರಬೇಕು ಕುವೆಂಪು ಅವರ ನುಡಿ ” ಬರೆದಂತೆ ಬದುಕಿ ” ಎಂಬುದನ್ನು ಖುದ್ದು ಪಾಲಿಸಿ ಬರೆದವರು ನಮ್ಮ ತೇಜಸ್ವಿ ಬೌದ್ದಿಕ ದೀವಾಳಿತನ ಲಂಪಟತನಗಳೇ ಅಗ್ರಮಾನ್ಯವಾಗಿ ನಡೆಯುತ್ತಿರುವ ಈ ಸಮಯದಲ್ಲಿ ತೇಜಸ್ವಿ ಅವರ ಬಹು ನೆನಪಾಗುತ್ತಾರೆ.
- ರೇಶ್ಮಾ ಗುಳೇದಗುಡ್ಡಾಕರ್ (ಯುವ ಬರಹಗಾರ್ತಿ, ಕವಿಯತ್ರಿ )
