ಜಾನಪದ ಲೋಕ ನಿರ್ಮಾತೃ ಹೆಚ್ ಎಲ್. ನಾಗೇಗೌಡರು ಅವರು ಬರೆದಿರುವ ‘ಪ್ರವಾಸಿ ಕಂಡ ಇಂಡಿಯಾ’ ದಲ್ಲಿ ಆನಂದಪುರಂ ಇತಿಹಾಸವಿದೆ ಪುಸ್ತಕವನ್ನು ತಪ್ಪದೆ ಎಲ್ಲರೂ ಓದಿ….
ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು.
ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ.
ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಬರೆದಿದ್ದಾರೆ.
ಪ್ರಾಚೀನ ಭಾರತದ ಇತಿಹಾಸ ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು ಮಧ್ಯಕಾಲ ಇತಿಹಾಸ. 13 ನೇ ಶತಮಾನದಿಂದ 18ನೇ ಶತಮಾನದವರೆಗೆ ಆಧುನಿಕ ಇತಿಹಾಸ. 18ನೇ ಶತಮಾನದಿಂದ ಈವರೆಗಿನದ್ದು. ಈ ಎಂಟು ಸಂಪುಟಗಳು ಓದಿದರೆ ಭಾರತದ ಇತಿಹಾಸದ ಸಂಪೂರ್ಣ ಜ್ಞಾನ ಲಭ್ಯವಿದೆ. ಅವರು ದಾಖಲೆ ಮಾಡುತ್ತಾ ಹೋಗಿರುವ ಕ್ರಮ ಓದಲು ಶುರು ಮಾಡಿದರೆ ಎಂಟು ಸಂಪುಟವೂ ರಾತ್ರಿ ಹಗಲೆನ್ನದೆ ಓದಿ ಮುಗಿಯುವವರೆಗೆ ಮುಂದುವರಿಯುವುದಷ್ಟೆ ಅಲ್ಲ, ಪುನಃ ಪುನಃ ಓದುವ ಮನಸ್ಸು ಆಗುತ್ತದೆ.
ಕನ್ನಡದ ಇತಿಹಾಸ ಸಂಶೋಧಕರು ಈ ಗ್ರಂಥಗಳನ್ನು ಓದದಿದ್ದರೆ ಅವರ ಸಂಶೋಧನ ಜ್ಞಾನ ಪೂರ್ಣ ಆಗಲಾರದು. ಹೆಚ್.ಎಲ್.ನಾಗೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೆರಗಾನಹಳ್ಳಿಯಲ್ಲಿ ಸೆಪ್ಟೆಂಬರ್ 22, 1915 ರಲ್ಲಿ ಜನಿಸಿ 2005 ರಲ್ಲಿ ಇಹಲೋಕ ತ್ಯಜಿಸಿದರು.
ಜಾನಪದ ಲೋಕ ನಿರ್ಮಾತೃ ಹೆಚ್.ಎಲ್.ನಾಗೇಗೌಡರು
ವಿಜ್ಞಾನ ಮತ್ತು ಕಾನೂನು ಪದವೀಧರಾಗಿ 1940 ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಪಾಸ್ ಮಾಡಿದರು. 1963 ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಆನಂದಪುರಂನ ಕೋಟೆ, ಕೆಳದಿ ರಾಜ ವೆಂಕಟಪ್ಪ ನಾಯಕರು, ತಮ್ಮ ದುರಂತ ಪ್ರೇಮ ಕಥೆಯ ರಾಣಿ ಚಂಪಕಾ ಸ್ಮರಣೆಗಾಗಿ ನಿಮಿ೯ಸಿದ ಚಂಪಕ ಸರಸ್ಸುವಿಗೆ ಅನೇಕ ಬಾರಿ ಸಂದರ್ಶಿಸುತ್ತಾರೆ. ಅವರ ಪ್ರಯತ್ನದಿಂದ ಪ್ರಾಚ್ಯ ವಸ್ತು ಸಂಶೋಧನ ಇಲಾಖೆಯಿಂದ ಇಲ್ಲಿಗೆ ಬೋರ್ಡ್ ಅಳವಡಿಸಿ ಕೆಲಕಾಲ ಕಾವಲುಗಾರರನ್ನು ನೇಮಿಸುತ್ತಾರೆ.
ಮಂಡ್ಯ ಜಿಲ್ಲೆಯಲ್ಲಿನ ರಾಮನಗರದಲ್ಲಿ ಇವರು 1986 ರಿಂದ ಕೆಲಸ ಪ್ರಾರಂಬಿಸಿ 1994 ರಲ್ಲಿ ಲೋಕಾರ್ಪಣೆ ಮಾಡಿಸಿದ ಜನಪದ ಲೋಕ ಜನಪದ ಕಲೆಯ ಸಂಸ್ಕೃತಿಯ ಅತಿದೊಡ್ಡ ಮ್ಯೂಸಿಯಂ ಆಗಿದೆ.
1979 ರಲ್ಲಿ ಇವರೇ ಜನಪದ ಪರಿಷತ್ ಸ್ಥಾಪಿಸುತ್ತಾರೆ. ಗಾಂಧೀಜಿಯವರು ದೇಶ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕರೆಯನ್ನು ಮೈಸೂರು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲನೆಯದಾಗಿ ಪ್ರಾದೇಶಿಕ ಭಾಷೆಗೆ ಅಗ್ರಸ್ಥಾನ ನೀಡುವ ದ್ವಿಭಾಷಾ ಸೂತ್ರ ಅಂಗಿಕರಿಸಿ ಅಗ್ರಸ್ಥಾನದಲ್ಲಿರುವ ಸಂದರ್ಭದಲ್ಲಿ ಹೆಚ್.ಎಲ್.ನಾಗೇಗೌಡರ ಈ ಗ್ರಂಥಗಳಿಗೆ ಕುವೆಂಪು ಪ್ರಧಾನ ಸಂಪಾದಕರಾಗಿ ಪ್ರಕಟನೆ ಮಾಡಿರುವುದು ಕನ್ನಡಿಗರಿಗೆ ಅತಿ ದೊಡ್ಡ ಆಸ್ತಿ.
ಹೆಚ್.ಎಲ್.ನಾಗೇಗೌಡರು 1963 ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಆನಂದಪುರಂನ ಕೆಳದಿ ರಾಜರ ಕೋಟೆ, ಚಂಪಕ ಸರಸ್ಸು ಭೇಟಿ ಮಾಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ.
- ಅರುಣ ಪ್ರಸಾದ್