ಎಷ್ಟೇ ದಿನಾದ್ರು ಅಪ್ಪನಿಗೆ ಜ್ವರ ಕಮ್ಮಿನೆ ಆಗಿರಲಿಲ್ಲ, ನೋಡಿದ್ರೆ ನಮ್ಮ ಫ್ಯಾಮಿಲಿ ಡಾಕ್ಟರ್ ಹತ್ರನೇ ಅವರನ್ನ ತೋರಿಸದ್ವಿ, ಹಾಗಿದ್ದೂ ಯಾಕೆ ಜ್ವರ ಕಮ್ಮಿ ಆಗಿಲ್ಲ ಅಂತ ನೋಡಿದ್ರೆ ……ತಪ್ಪದೆ ಮುಂದೆ ಓದಿ…
ಅನವಶ್ಯಕತೆಯ ಸಣ್ಣಗೆ ಹೊಟ್ಟೆ ಉರಿ ಅನ್ನೋದು ಗಂಡನಿಗೆ ಹೆಂಡತಿ ಮೇಲೆ 60 ವರ್ಷವಾದ್ರೂ ಕಮ್ಮಿ ಆಗಲ್ಲ. ನಮ್ಮ ಏರಿಯಾದಲ್ಲಿ ಒಬ್ಬರು ಡಾಕ್ಟರ್ ಇದ್ದಾರೆ. ಅವರು ಫ್ಯಾಮಿಲಿ ಡಾಕ್ಟರ್ ಅಂತಾರಲ್ಲ ಹಾಗೆ ಅವರು ನಮ್ಮ ಏರಿಯಕ್ಕೆ ಫ್ಯಾಮಿಲಿ ಡಾಕ್ಟರ್. ನಾವೆಲ್ಲಾ ಹುಷಾರಿಲ್ಲ ಅಂದ್ರೆ ಮೊದಲು ಹೋಗೋದು ಅವರ ಬಳಿಗೆ.
40 ವರ್ಷದಿಂದ ಸಣ್ಣ ಕ್ಲಿನಿಕ್ ನಲ್ಲೇ ಇದ್ದರು ಸಹ ಜನರ ಮನಸ್ಸಿನಲ್ಲಿ ನಂಬಿಕೆ ಎಂಬ ದೊಡ್ಡ ಜಾಗ ಸಂಪಾದನೆ ಮಾಡಿದ್ದಾರೆ. ಹೀಗಿದ್ದ ಡಾಕ್ಟರ್ ಮೇಲೆ ನನ್ನ ಅಪ್ಪನಿಗೆ ಮಾತ್ರ ಸಿಟ್ಟು . ನಾನು ಅವರ ಕ್ಲಿನಿಕ್ ಹೊರಟರೆ ಅವ ಸರಿ ನೋಡ್ತನಾ ಅಂತ ಕೊಂಕು ಮಾತು. ಅಮ್ಮ ಹೊರಟು ಬಿಟ್ಟರೆ ಸಿಡಿ ಮಿಡಿ ಕೋಪ. ಹೀಗಿದ್ದ ಅಪ್ಪನಿಗೆ ಹುಷಾರ್ ಇಲ್ಲದಾಗ ಒಮ್ಮೆ ಅವರ ಬಳಿ ಕರ್ಕೊಂಡ್ ಹೋಗಿದ್ದೆ. ಅವರ ಕೊಟ್ಟ ಮಾತ್ರೆ ನಮ್ಮ ಕಣ್ಣ ತಪ್ಪಿಸಿ ಬಿಸಾಡಿ ಬಿಟ್ಟಿದ್ದರು. ನಮಗೆಲ್ಲಾ ತಲೆ ಬಿಸಿ ಮಾತ್ರೆ ನುಂಗಿದ್ರೂ ಜ್ವರ ಯಾಕೆ ಕಮ್ಮಿ ಆಗ್ತಾ ಇಲ್ಲ ಅಂತ. ಕಡೆಗೆ ಮಾತ್ರೆ ಸಂಧಿ ಗುಂಧಿಯಲ್ಲಿ ಬಿದ್ದಿದ್ದ ಕಣ್ಣಿಗೆ ಬಿದ್ದ ಮೇಲೆ ಗೊತ್ತಾಯ್ತು ಇವರು ಮಾತ್ರೆ ನುಂಗಿಲ್ಲವೆಂಬುದು.
ಡಾಕ್ಟರ್ ಮೇಲೆ ಅಪ್ಪನ ಇಷ್ಟೆಲ್ಲಾ ಸಿಟ್ಟಿಗೆ ಕಾರಣವಿಷ್ಟೇ ಡಾಕ್ಟರ್ ಅಮ್ಮನ ಹೈಸೂಲ್ ಕ್ಲಾಸ್ ಮೇಟ್ ಅಮ್ಮನೇನು ಕಮ್ಮಿಯಿಲ್ಲ ಅಪ್ಪ ಡಾಕ್ಟರನ್ನು ಬೈದಗೆಲ್ಲಾ , ನನ್ನ ಫ್ರೆಂಡ್ ಬುದ್ಧಿವಂತ ಅಂತ ನಿಮಗೆ ಹೊಟ್ಟೆ ಉರಿ ಬಿದ್ದಿದ್ದ ಸಾಕು ಎಂದು ನಕ್ಕು ಇನ್ನಷ್ಟು ಹೊಟ್ಟೆ ಉರಿಸುತ್ತಿದ್ದಳು.
- ಸುಮಾ ಮಂಜುನಾಥ್