ದಿನಗಳು ಕಳೆದಿವೆ ನಿನ್ನ ನೆನಪಲ್ಲಿ…ಮನವು ಜಪಿಸಿದೆ ನಿನ್ನ ಹೆಸರಲ್ಲಿ… ಮರಳಿ ಬರುವಳೇನು ಸೀತೆ, ಮುಂದಿನ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಎಂದೊ ಆಡಿದ ಮಾತುಗಳಿಗೆ ಮುನ್ನುಡಿಯ ಬರೆದಳವಳು.
ನನ್ನರಸಿ ಬಂದ ಪ್ರೀತಿಯ ಜೊತೆ ಮಾಯವಾದಳು.
ಕಾಡಿದ ನೆನಪುಗಳಿಗೆ ಕಾರಣವ ಹುಡುಕುತ ಸಾಕಾಯಿತೆ.
ಕಾದ ಹೃದಯಕ್ಕೆ ಕಿವಿಗೊಟ್ಟು ಮರಳಿ ಬರುವಳೆ ಸೀತೆ……1
ಜೊತೆಯಾಗಿ ನಡೆದೆ ಕೈ ಹಿಡಿದು ನನ್ನನ್ನು.
ಕೊನೆವರೆಗೂ ಬೇಡಿದೆ ಬೇಕೆಂದು ನಾನು.
ಕ್ಷಮಿಸುವೆಯಾ ಆಡಿದ ಮಾತುಗಳನು ಮರೆತು.
ಕೇಳುವೆನು ಕೈ ಮುಗಿದು ನಾನೇ ಸೋತು……2
ನನ್ನ ಮುಗ್ದತೆಗೆ ಮರುಳಾದವಳು ನೀನೆ.
ಇಂದು ಆ ಮುಗ್ದತೆಯನ್ನೆ ಬೇಡವೆಂದೆ.
ಕೊನೆವರೆಗೂ ಜೊತೆಗಿರುವೆನೆಂದು ನುಡಿದು.
ಮದ್ಯದಲೆ ಏಕೆ ದೂರವಾದೆ…..3
ನೆನಪುಗಳ ರಾಶಿಯಲ್ಲಿ ಒಲವುಗಳು ತುಂಬಿದೆ.
ಏಕಾಂಗಿಯಾಗಿದ್ದ ನನ್ನಲ್ಲಿ ಹೊಸ ಬದುಕನು ಹುಡುಕಿದೆ.
ಬದುಕಿನುದ್ದಕ್ಕೂ ಕೇಳುವೆ ನಾ ನಿನ್ನ ಪ್ರೀತಿಯನ್ನು.
ಸಾದ್ಯವಾದರೆ ನೆನಪಿಡು ನೀ ನನ್ನ ಹೆಸರನ್ನು….4
ದಿನಗಳು ಕಳೆದಿವೆ ನಿನ್ನ ನೆನಪಲ್ಲಿ
ಮನವು ಜಪಿಸಿದೆ ನಿನ್ನ ಹೆಸರಲ್ಲಿ.
ಮೌನದ ಜೊತೆಯಲ್ಲಿ ಕರಗಿಹೋದ ಕವಿತೆ.
ಆ ಕವಿತೆಯಲ್ಲಿ ತೇಲುತಾ ಮರಳಿ ಬರುವಳೆ ಸೀತೆ……5
ಇಂತಿ ನಿಮ್ಮ ಪ್ರೀತಿಯ…
- ವಿಕಾಸ್. ಫ್. ಮಡಿವಾಳರ