‘ಪ್ರೀತಿ’ ಯಲ್ಲಿ ಬಿದ್ದಾಗ ಪ್ರೇಮಿಯ ತೊಳಲಾಟವನ್ನು ಕವಿ ಮಹಮ್ಮದ್ ಬಷೀರ್ ಪಿ ಅವರು ಕವನದಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಓದಿ….
ಹಲವರನ್ನು ನೋಡಿದೆ
ಕೆಲವರನ್ನು ಇಷ್ಟಪಟ್ಟೆ
ಒಬ್ಬಳನ್ನು ಪ್ರೀತಿಸಿದೆ
ಕೆಲವೊಮ್ಮೆ ಬೇಡವೆಂದು
ಕೆಲವೊಮ್ಮೆ ಬೇಕೆಂದು
ಕೆಲವೊಮ್ಮೆ ಇದೆಲ್ಲ ಯಾಕೆಂದು
ಅನಿಸುವುದು
ಅನುಭವದ ಕೊರತೆ
ಮುಳುಗುವ ಭಯ
ಈಜು ಬಾರದ ಚಿಂತೆ
ಕಾಡುವುದು
ಕೆಲವೊಮ್ಮೆ ಕನಸಿನಲ್ಲಿ
ಕೆಲವೊಮ್ಮೆ ಮನಸ್ಸಿನಲ್ಲಿ
ಬಂದು ಹೋಗುವಳು
ಆಗುವುದೇ ನನಸು
ಆಗುವುದೇ ನನಸು
ಕೆಲವರು ಪ್ರೀತಿಸಬೇಕೆನ್ನುವರು
ಕೆಲವರು ಪ್ರೀತಿಯಾಕೆನ್ನುವರು
ತೋಚದಾಗಿದೆ ಯಾವುದನ್ನು
ಆರಿಸಲೀ ಎಂದು
ಪ್ರೀತಿಸಿದವರ ನೋಡಿ ನಕ್ಕಿದ್ದೆ
ಪ್ರೀತಿಯನ್ನು ದೂರಿದ್ದೆ
ಎಲ್ಲವೂ ವ್ಯರ್ಥ ಅನ್ನುತ್ತಿದ್ದೆ
ಈಗ …..ಈಗ….ಈಗ…
ಇಲ್ಲದಾಗಿದೆ ನನಗೆ ನಿದ್ದೆ…
- ಮಹಮ್ಮದ್ ಬಷೀರ್ ಪಿ