“ಪುನರ್ಪುಳಿ” ಸಿಪ್ಪೆಯ ಪಾನೀಯ

ಕರಾವಳಿಯಲ್ಲಿ ಬೆಳೆಯುವ “ಪುನರ್ಪುಳಿ” (ಕೋಕಂ) ಎಂದು ಕೂಡ ಕರೆಯಲಾಗುತ್ತದೆ. ಹಣ್ಣಿನ ಸಿಪ್ಪೆಯಿಂದ ಕೋಕಂ ಪಾನೀಯವನ್ನು ಶಕುಂತಲಾ ಸವಿ ಅಡುಗೆ ಪ್ರಿಯರಿಗೆ ಹೇಳಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ… 

ಬೇಕಾಗುವ ಪದಾರ್ಥಗಳು :

  • ಪುನರ್ಪುಳಿ ಹಣ್ಣಿನ ಸಿಪ್ಪೆ
  • ಸಕ್ಕರೆ
  • ಉಪ್ಪು
  • ನೀರು

ಮಾಡುವ ವಿಧಾನ :

ಹಣ್ಣಿನ ಸಿಪ್ಪೆಯನ್ನು ಎರಡು ಮೂರು ಸಲ ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಐದಾರು ಗಂಟೆ ನೆನೆಸಿಡಿ. ಚೆನ್ನಾಗಿ ನೆಂದ ಮೇಲೆ ಸಿಪ್ಪೆಯೆಲ್ಲ ತೆಗೆದು ನೀರನ್ನು ಶೋಧಿಸಿ ಇಟ್ಟು ಕೊಳ್ಳಿ. ಈ ನೀರನ್ನು ಒಂದು ಬಾಟಲ್ ನಲ್ಲಿ ಶೇಖರಿಸಿ ಸ್ಕ್ವಾಷ್ ನಂತೆ ಫ್ರಿಡ್ಜ್ ನಲ್ಲಿ ಇಟ್ಟರೆ ಬೇಕಾದಾಗ ಬಳಸಬಹುದು.

ಒಂದು ದೊಡ್ಡ ಗ್ಲಾಸ್ ನೀರಿಗೆ ಎರಡು ಸ್ಪೂನ್ ಸಕ್ಕರೆ, ಅರ್ಧ ಸ್ಪೂನ್ ಉಪ್ಪು , ಮಾಡಿಟ್ಟುಕೊಂಡ ಸ್ಕ್ವಾಷ್ ನಲ್ಲಿ 2 ಸ್ಪೂನ್ ಸ್ಕ್ವಾಷ್ ಹಾಕಿದರೆ ಒಂದೊಳ್ಳೆ ಆರೋಗ್ಯಯುತ ಪೇಯ ರೆಡಿ. ಲಿಂಬೆರಸ ಹಾಕುವ ಅಗತ್ಯ ಇಲ್ಲ.

ಇದೆ ನೀರು ಉಪಯೋಗಿಸಿ ಜೀರಿಗೆ, ಕಾಳು ಮೆಣಸು, ಸ್ವಲ್ಪ ಧನಿಯಾ, ಮೆಂತ್ಯ, ಓಂ ಕಾಳು ಹುರಿದು ಪುಡಿ ಮಾಡಿ. ರಸಂನಂತೆ ಈ ಸಾಮಾಗ್ರಿಗಳ ಜೊತೆ ಮೂರು ಸ್ಪೂನ್ ತೆಂಗಿನ ತುರಿ ಹಾಕಿ ಹುರಿದು ಮಿಕ್ಸಿಯಲ್ಲಿ ಮಸಾಲೆ ರುಬ್ಬಿ ಜೀರಿಗೆ ಒಗ್ಗರಣೆ ಕೊಟ್ಟು ಚೆನ್ನಾಗಿ ಕುದಿಸಿ. ಮೂರ್ನಾಲ್ಕು ದಿನ ಆದರೂ ಏನೂ ಆಗುವುದಿಲ್ಲ. ಈ ಸಾರು ಹಳೆಯಾದದಷ್ಟು ಟೇಸ್ಟ್ ಜಾಸ್ತಿ.


  • ಶಕುಂತಲಾ ಸವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading