ಬನ್ನಿರೆಲ್ಲರೂ ಪುಸ್ತಕ ಸಂತೆಗೆ…

ವೀರಲೋಕ ರೂವಾರಿ ವೀರಕ ಪುತ್ರ ಶ್ರೀನಿವಾಸ ಅವರು ಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ಇದೆ ತಿಂಗಳ ಜನವರಿ ೨೪, ೨೫, ೨೬ ಬೀದರ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಸಹಯೋಗ ಮತ್ತು ಶ್ರೀ ಗುರುನಾಥ ರಾಜಗಿರಾ ಅವರ ಸಾರಥ್ಯದಲ್ಲಿ “ಪುಸ್ತಕ ಸಂತೆ” ಜಾತ್ರೆ ಏರ್ಪಡಿಸಿದ್ದಾರೆ. ಎಲ್ಲರಿಗೂ ಸ್ವಾಗತವಿದೆ, ತಪ್ಪದೆ ಬನ್ನಿ …

ಬನ್ನಿರೆಲ್ಲರು ಹೋಗೋಣ ಪುಸ್ತಕ ಸಂತೆಗೆ
ಕೊಂಡುಕೊಳ್ಳೋಣ ವಿವಿಧ ಪುಸ್ತಕ ರಿಯಾಯಿತಿ ಬೆಲೆಗೆ /

ಕಥೆ,ಕವನ, ಪುಸ್ತಕ ಸಿಗುವುದು ಸಂತೆಯಲ್ಲಿ ಪುಸ್ತಕದ ಜ್ಞಾನ ತುಂಬೋಣ ಮಸ್ತಿಕದಲ್ಲಿ /

ದೇಶ ಸುತ್ತಿನೋಡು ಕೋಶ ಓದಿನೋಡು ಹಿರಿಯರ
ನಲ್ನುಡಿ ಓದಿನ ಹವ್ಯಾಸಕ್ಕೆ ಬರೆಯೋಣ ಮುನ್ನುಡಿ /

ಓದೋಣ ಓದಿಸೋಣ
ಪುಸ್ತಕವ ಹಿರಿ ಕಿರಿಯರೆಲ್ಲರಿಗು
ಮೊಬೈಲ ಗುಂಗನು ಬಿಡಿಸಿ
ಓದಿಸೋಣ ಪುಸ್ತಕ ಪ್ರತಿಯೊಬ್ಬರಿಗು /

ದೇಶ ಸುತ್ತಿನೋಡು ಕೋಶ ಓದಿನೋಡು ಎನ್ನುವ ಮಾತಿನಂತೆ, ನಾವುಗಳು ನಮ್ಮ ಸುತ್ತಮುತ್ತಲಿನ ವಿವಿಧ ಜನರ ಸಂಸ್ಕೃತಿ,ಆಚಾರ, ವಿಚಾರ ನಡೆ ನುಡಿಯನ್ನು ಅರಿಯಬೇಕಾದರೆ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಾತ್ರ ಅಲ್ಲಿನ ಜನರ ಜೀವನ ಶೈಲಿಯ ಕುರಿತು ಪರಿಚಯವಾಗುತ್ತದೆ.

ಅದೇ ರೀತಿ ಕೋಶ ಓದಿ ನೋಡು ಅಂದರೆ ಪುಸ್ತಕ ಓದು ಎಂದರ್ಥ.

ಇಂದಿನ ಸಾಮಾಜಿಕ ಬದುಕಿನ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನ ನಡುವೆ ಸಂಬಂಧಗಳು ಕೆಡುತ್ತಿವೆ. ಮನುಷ್ಯ ಮನುಷ್ಯನ ಮೇಲೆ ದ್ವೇಷ ಕಾರುತಿದ್ದಾನೆ. ಕಾರಣ ಅರಿವಿನ ಕೊರತೆ. ಹಾಗಾಗಿ ದೇಶಾಭೀಮಾನ, ಧರ್ಮಾಭೀಮಾನ ಸಾಮಾಜಿಕ ಸಾಮರಸ್ಯದ ಅರಿವು ಮೂಡಬೇಕಾದರೆ ನಾವು ನಮ್ಮ ಜ್ಞಾನಭಿವೃದ್ಧಿಯನ್ನು, ಭಾವನಾತ್ಮಕ ಸಂಬಂಧಗಳನ್ನು ಬೆಸೆದು ಉಳಿಸಬೇಕಾದರೆ ಮಹಾನ್ ವ್ಯಕ್ತಿಗಳ ಅನುಭವಗಳನ್ನು ಅರಿಯಬೇಕಾದರೆ ನಾವು ವಿವಿಧ ಬರಹಗಾರರ, ಲೇಖಕರ, ಸಾಹಿತಿಗಳು ಬರೆದ ಕಥಾಸಂಕಲನಗಳು, ಕಾದಂಬರಿಗಳು, ವಿಮರ್ಶೆ ಪುಸ್ತಕಗಳು, ಕವನ ಸಂಕಲನ ಮುಂತಾದ ಪ್ರಕಾರಗಳ ಪುಸ್ತಕಗಳು ಓದುವ ಹವ್ಯಾಸವನ್ನು ರೂಡಿಸಿಕೊಳ್ಳುವುದು ಅವಶ್ಯವಾಗಿದೆ.

ಒಬ್ಬ ಚಿಂತನ ಶೀಲ ವ್ಯಕ್ತಿಯ ಬದುಕಿನಲ್ಲಿ ಓದಿಗೆ ಇರುವ ಮಹತ್ವ ಅಪಾರವಾದುದು. ಪುಸ್ತಕ, ಪತ್ರಿಕೆ, ದಿನಪತ್ರಿಕೆ ಕವನ ಕಾದಂಬರಿ ಇವುಗಳೆಲ್ಲವೂ ಕೇವಲ ಓದಲು ಮಾತ್ರವಲ್ಲ, ಬದುಕನ್ನು ಆಳವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸುತ್ತವೆ. ಓದು ವ್ಯಕ್ತಿಯ ಒಳಜಗತ್ತಿನಲ್ಲಿ ಬೆಳಕನ್ನು ಪಸರಿಸಿ ಮನಸಿಗೆ ಒಳ್ಳೇಯ ಆಹಾರ ನೀಡುತ್ತದೆ. ಪುಸ್ತಕ ಓದುವ ವ್ಯಕ್ತಿಯು ತಾನು ಓದಿದ ವಿಷಯಕ್ಕೆ ಸಂಬಂದಿಸಿದಂತೆ ಆಳವಾಗಿ ಯೋಚಿಸಲು ಆರಂಭಿಸುತ್ತಾನೆ. ಅದೇ ರೀತಿ ಓದು ಬೇರೆ ಬೇರೆ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಒಂದು ಮುಖ್ಯವಾದ ಸಾಧನವಾಗಿದೆ.

“ಉತ್ತಮವಾದ ಒಂದು ಪುಸ್ತಕ ಮನಸಿಗೆ ಔಷಧಿಯಂತೆ” ಕಾರ್ಯನಿರ್ವಹಿಸುತ್ತದೆ. ನಮ್ಮೊಳಗಿನ ಕಲ್ಮಶವನ್ನು ದೂರ ಮಾಡಿ ಮಾನವೀಯ ಗುಣಗಳನ್ನು ಬೆಳೆಸುತ್ತದೆ. ಮನಸಿನಲ್ಲಿರುವ ದುಗುಡ ದುಮ್ಮಾನಗಳನ್ನು ದೂರ ಮಾಡುತ್ತದೆ.

ಮನೆಯಲ್ಲಿ ನಾವುಗಳು ಮೊಬೈಲನಿಂದ ಸಾಧ್ಯವಾದ ಮಟ್ಟಿಗೆ ದೂರವಿದ್ದು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಮನೆಯಲ್ಲಿ ಮಕ್ಕಳು ಕೂಡ ಓದುವದನ್ನು ಅನುಕರಣೆ ಮಾಡುತ್ತಾರೆ. ಪುಸ್ತಕ ಓದುವದರಿಂದ ನಿಖರವಾದ ಪದ ಪ್ರಯೋಗ, ವ್ಯಾಕರಣ ಬಂಢಾರ ಹೆಚ್ಚಾಗುತ್ತೆ.

ಹಾಗಾಗಿ ಆತ್ಮೀಯರೇ ವೀರಕ ಪುತ್ರ ಶ್ರೀನಿವಾಸ ಅವರು ಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ಇದೆ ತಿಂಗಳ ಜನವರಿ ೨೪, ೨೫, ೨೬ ಬೀದರ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಸಹಯೋಗದಲ್ಲಿ ಆತ್ಮೀಯರಾದ ಶ್ರೀ ಗುರುನಾಥ ರಾಜಗಿರಾ ಅವರ ಸಾರಥ್ಯದಲ್ಲಿ “ಪುಸ್ತಕ ಸಂತೆ” ಜಾತ್ರೆ ಏರ್ಪಡಿಸಿದ್ದಾರೆ. ಬನ್ನಿ ಎಲ್ಲರೂ ಅವರೊಂದಿಗೆ ಕೈ ಜೋಡಿಸಿ ಪುಸ್ತಕ ಸಂತೆಯಲ್ಲಿ ಭಾಗಿಯಾಗಿ ನಮಗೆ ಬೇಕಾದ ಉತ್ತಮೊತ್ತಮ ಪುಸ್ತಕಗಳನ್ನು ರಿಯಾಯಿತಿ ಬೆಲೆಯಲ್ಲಿ ಕೊಂಡುಕೊಳ್ಳೋಣ. ಪ್ರತಿಯೊಬ್ಬರಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸೋಣ.


  • ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading