ಕ್ವಾಂಟಮ್ ಭೌತಶಾಸ್ತ್ರ ಕ್ಲಿಷ್ಟವಾಗಿದ್ದರೂ ಅತ್ಯಂತ ಕುತೂಹಲಕಾರಿ ಆಗಿದೆ ಅದಕ್ಕೂ ಮತ್ತು ಭಾರತೀಯ ತತ್ವ ಚಿಂತನೆಗೂ ಸಾಮ್ಯ ಇದೆ. ಅಣು ಮತ್ತು ಪರಮಾಣು ಬಗ್ಗೆ ಮೊದಲು ತಿಳಿಯೋಣ.
ಅಣುಗಳ ಅಸ್ತಿತ್ವದ ಬಗ್ಗೆ ಮೊದಲು ಪ್ರಸ್ತಾಪ ಮಾಡಿದ ವ್ಯಕ್ತಿ ಗ್ರೀಕ್ ಚಿಂತಕ ಡೆಮೋಕ್ರೆಟಿಸ್ ಇದು ಸುಮಾರು ಕ್ರಿ ಪೂ 400 ಆ ಸಮಯದಲ್ಲಿ ಇದನ್ನು ಯಾರೂ ಗಂಭೀರವಾಗಿ ಯೋಚನೆ ಮಾಡಿರಲಿಕ್ಕಿಲ್ಲ.
ನಂತರ ಸುಮಾರು 18 ನೆಯ ಶತಮಾನದ ಕೊನೆಯಲ್ಲಿ ಜಾನ್ ಡಾಲ್ಟನ್ “Dalton,s atomic theory ” ಪ್ರಕಟಿಸಿ ಅಣು ಇದು ಮೂಲವಸ್ತು (Fundamental ) ಎಂದು ಹೇಳಿದ. ಜಾನ್ ಡಾಲ್ಟನ್ ಗೆ ಅಣು ವಿಜ್ಞಾನದ ಪಿತಾಮಹ ಎಂತಲೂ ಕರೆಯುತ್ತಾರೆ. ಅಣು ಅಂದರೆ ಒಂದು ಕಲ್ಪನೆಮಾಡಿಕೊಂಡರೆ ಉದಾಹರಣೆಗೆ: ಒಂದು ಹನಿ ನೀರು, ಅಥವಾ ಒಂದು ಕಣ ಉಸುಕು ತೆಗೆದುಕೊಂಡು ಒಂದು ನೂರು ಕೋಟಿ ಭಾಗಗಳಾಗಿ ಒಡೆದು ಒಂದು ತುಣುಕು ತೆಗೆದುಕೊಂಡರೆ ಅದು ಒಂದು ಅಣು.

ಜಗತ್ತಿನ ಎಲ್ಲ ಸಜೀವ ಮತ್ತು ನಿರ್ಜೀವ ವಸ್ತುಗಳು ಈ ಅಣುವಿನಿಂದಲೇ ಆಗಿವೆ. ಇದನ್ನು ಮತ್ತೆ ವಿಭಜಿಸಲು ಬರುವದಿಲ್ಲ ಎಂದು ಡಾಲ್ಟನ್ ಪ್ರತಿಪಾದಿಸಿದ. ಆಗಿನ ಕಾಲದಲ್ಲಿ ಅದೇ ಸರಿ ಆಗಿತ್ತು.
ನಂತರ j j Thomson 1897 ರಲ್ಲಿ ಅಣು ಮೂಲವಸ್ತು ಅಲ್ಲ. ಅದರಲ್ಲಿ ಇಲೆಕ್ಟ್ರಾನ್ ಅಂತ ಕಣ ಇದೆ ! ಅನ್ನುವದನ್ನು ಕಂಡು ಹಿಡಿದ. ಆಗ ಅದೇ ಸರಿ ಎಂದು ಎಲ್ಲರೂ ತಿಳಿದರು. ಅದರ ನಂತರ 1917 ರಲ್ಲಿ. ರುಥರ್ ಫೂರ್ಡ ಎನ್ನುವ ವಿಜ್ಞಾನಿ ಅಣು ವಿಭಜನೆ ಮಾಡಿದರೆ ಅದರಲ್ಲಿ ಇಲೆಕ್ಟ್ರಾನ್ ಜೊತೆಗೆ ಪ್ರೋಟಾನ್ ಇದೆ ಎಂದ. ಆಗ ಅದೇ ಸರಿ ಆಗಿತ್ತು. ನಂತರ ಜೇಮ್ಸ್ ಚೆಡ್ವಿಕ್ 1932 ರಲ್ಲಿ ಅಣುವಿನಲ್ಲಿ ನ್ಯೂಟ್ರಾನ್ ಇದೆ. ಅಣುವಿನಲ್ಲಿ ಇರುವ nucleus ನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಇವೆ ಇದರ ಸುತ್ತಲೂ ಇಲೆಕ್ಟ್ರಾನ್ ನಿರಂತರವಾಗಿ
ತಿರುಗುತ್ತಾ ಇದೆ ,ಅಂತ ಕಂಡು ಹಿಡಿದ ಹಾಗಾದರೆ ಇವು ಮೂರು ಅಂದರೆ ಇಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಇವು ಮೂಲವಸ್ತು ಇರಬಹುದು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಅದೇ ಸರಿ ಆಗಿತ್ತು. ಈಗ ನಂತರ ಇಲೆಕ್ಟ್ರಾನ್ ನ್ನು ಮಾತ್ರ ಮತ್ತೆ ವಿಭಜಿಸಲು ಬರುವದಿಲ್ಲ ಆದರೆ ಪ್ರೋಟಾನ್ ಮತ್ತು ನ್ಯೂಟ್ರಾನ್ ವಿಭಜಿಸಿದರೆ ಇವುಗಳ ಒಳಗೆ ಕ್ವಾರ್ಕ quark ಅನ್ನುವ ಕಣ ಇದೆ ,ಅನ್ನುವ ಸತ್ಯವನ್ನು Murray Glen Mann ಮತ್ತು George wiegg ಎಂಬ ಹೆಸರಿನ ಇಬ್ಬರು ವಿಜ್ಞಾನಿಗಳು ಪ್ರತ್ಯೇಕ ಸಂಶೋಧನೆಯಲ್ಲಿ ಪ್ರಕಟ ಮಾಡಿದರು. ಇದು 1964ರಲ್ಲಿ ಇದೇ ಈಗ ಸದ್ಯ ಇರುವ ಕೊನೆಯ ಸಂಶೋಧನೆ. ಮುಂದೆ ಏನು ಬರುತ್ತದೆಯೋ ಗೊತ್ತಿಲ್ಲ.

ಜಗದ್ಗುರು ಆದಿ ಶಂಕರಾಚಾರ್ಯರು ಭೋದಿಸಿದಂತೆ ಅದ್ವೈತ ವೇದಾಂತದಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ ಬ್ರಹ್ಮ ಸತ್ಯ ಜಗತ್ತು ಮಿಥ್ಯ ಮತ್ತು ಮಾಯಾ ದೇವರು ಅಣು ರೇಣು ತ್ರಣ ಕಾಸ್ಟ್ ನಲ್ಲಿ ಇದ್ದಾನೆ. ಅಂದರೆ ಸರ್ವವ್ಯಾಪಿ ಈ ದೇಹ ಪಂಚಮಹಾಭೂತ ಗಳಿಂದ ಆಗಿದೆ. (ಪ್ರಥ್ವಿ,ಆಪ್, ನೀರು, ಬೆಂಕಿ, ಗಾಳಿ) ಅಣುವಿನಲ್ಲಿ ಇರುವ ಇಲೆಕ್ಟ್ರಾನ್ ನ್ಯೂಕ್ಲಿಯಸ್ ಸುತ್ತ ವೇಗವಾಗಿ ಸುತ್ತುತ್ತಿರುತ್ತದೆ. ಅದರ ಚಲನೆ ಮತ್ತು ಸ್ಥಿತಿ ನಿಷ್ಕರ್ಷೆ ಮಾಡಲು ಬರುವದಿಲ್ಲ. ಆದರೆ ಅದು ಇದ್ದದ್ದು ಸತ್ಯವಾಗಿದೆ. ದೇವರು (ಬ್ರಹ್ಮ)ಎಲ್ಲ ಕಡೆ ನಮ್ಮ ಆತ್ಮ ಸಹಿತವಾಗಿ ಸರ್ವ ವ್ಯಾಪಿ ಇದ್ದಾನೆ. ಆದರೆ ಪ್ರಜ್ಞೆ ಆಗುವದಿಲ್ಲ. ಪಿಂಡಾಂಡ್ ಮತ್ತು ಬ್ರಹ್ಮಾಂಡ ಒಂದೇ ದ್ರವ್ಯದಿಂದ ಆಗಿವೆ. ಅದರಂತೆ ಜಗತ್ತಿನ ಎಲ್ಲ ಚರಾಚರ ವಸ್ತುಗಳು ಮೂಲ
ಚಿಕ್ಕ ಚಿಕ್ಕ ಅಣುವಿನಿಂದ ಆಗಿದೆ. (quark) ಕ್ವಾರ್ಕ್ಸ್ ಒಳಗಡೆ ಬರೀ ವಾಯು ಮತ್ತು energy( ಶಕ್ತಿ) ಇದೆ. ಇದು ಮಾಯೆಗೆ ಸಮ. ನೀನು ಮಾಯೆಯೋ ನಿನ್ನೊಳು ಮಾಯೆಯೋ.
ವಸ್ತು ಇದೆ ಆದರೆ intagible ಕೈಗೆ ಸಿಗುವದಿಲ್ಲ. ಹೀಗಾಗಿ ಭಾರತೀಯ ಪುರಾತನ ತತ್ವ ಚಿಂತನೆ ಮತ್ತು ಆಧುನಿಕ ವಿಜ್ಞಾನ ಇವುಗಳಲ್ಲಿ ಇಂಥಹ ಅನೇಕ ಸಾಮ್ಯ ಗಳಿವೆ
The particles doesn’t have real existence if it is not observed ,,– as per quantum physics The same in vedanta. ನಿರೀಕ್ಷಣೆ ಅಥವಾ ಪ್ರಜ್ಞೆ ಇಲ್ಲದಿದ್ದರೆ ಅಸ್ತಿತ್ವದ ಅರಿವು ಆಗುವದಿಲ್ಲ.
ಹೀಗೆ ಒಂದು ಚಿಂತನೆ.
- ಅರವಿಂದ ಕುಲಕರ್ಣಿ – ನಿವೃತ್ತ ಅಧಿಕಾರಿ, ಕೆವಿಜಿ ಬ್ಯಾಂಕ್
