ರಾಜೀವ ಸಖ

ಕವನ :  ಹರ್ಷ ಶಿರಿಗಾರು

ಮೂಡಣದ ಮಣಿ ಕಂಡು
ಮುದದಿಂದ ಬಿರಿದಿಹಳು..
ಅವನುಷೆಯ ಬಿಸಿ ಸೋಂಕೆ
ತನು-ಕಂಪ ಅಡರಿಹಳು…

ತಿರುತಿರುಗಿ ನಲಿಯುವಳು
ಅವನೆಡೆಗೆ ಮೊಗದೋರಿ…
ಕ್ಷಣಬಿಡದ ಮೋಹವದು
ರತಿಮದನರೊಲವನೂ ಮೀರಿ…

ಉದಯಿಸಿದ ಆ ರವಿಯು
ಉದಕದೊಳರಾಜೀವಕೆ ಸಖನಂತೆ..
ಈ ಸೃಷ್ಟಿಯೊಳಗುದ್ಭವಿಸಿದ
ಶಿವ – ಶಕ್ತಿಯರ ರೂಪಂತೆ..

ಅವನಿಳಿಯಲು ಪಡುವಣದಿ
ದಿನ ಬೆಳಗಿ ಸಾಕಾಗಿ…
ಶೋಕದಲಿ ಕಮರುವಳು
ಈ ಕುಮುದೆ ತಾ ಮುಲುಗಿ…

ಇತರೆ ಕವನಗಳು :

 

 

 

 

 

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW