ಮೇಗರವಳ್ಳಿ ರಮೇಶ್ ಅವರ ಕವನಗಳು



ಕವಿ ಮೇಗರವಳ್ಳಿ ರಮೇಶ್ ಅವರು ಬರೆದಂತಹ ಈ ಕವನವನ್ನು ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

ಸ೦ಜೆಯಾಯಿತು!

ಹುಡುಗರು ಆಟ ಮುಗಿಸಿ ಹರಟುತ್ತಾ
ನಡೆದಿದ್ದಾರೆ ಮೈದಾನದಲ್ಲಿ.
ಮುಗಿಲಲ್ಲಿ ಬಾಣದ ಮೊನೆಯ ಹಾಗೆ
ಹಾರುತ್ತಾ #ಹಕ್ಕಿಗಳು ಹಿ೦ದಿರುಗಿತ್ತಿವೆ ಗೂಡಿಗೆ
ವೃಧ್ಧ ದ೦ಪತಿಗಳು ವಾಕ್ ಮುಗಿಸಿ
ಪಾರ್ಕಿನ ಗೇಟು ತೆಗೆದು ಹೊರಟಿದ್ದಾರೆ ಮನೆಗೆ.
ಹಕ್ಕಿಗಳ ಹಾಗೆ ಉಲಿಯುತ್ತಾ ಹುಡುಗಿಯರು
ನಡೆದಿದ್ದಾರೆ ನಿಧಾನ ಕನಸುಗಳ ಹೆಣೆಯುತ್ತಾ.
ಏರು ಹಗಲಿನುತ್ಸಾಹದ ಚಟುವಟಿಕೆಗಳೆಲ್ಲ
ಬೆವರಿ ಬಸವಳಿದಿವೆ. ಚ೦ದ್ರನಿಲ್ಲದ ಬಾನ
ಕತ್ತಲಿನ ಕಡಲಲ್ಲಿ ಹಗಲಿನ
ಚಿತ್ರಗಳೆಲ್ಲ ಕದಡಿ ಹೋಗುತ್ತವೆ.

****

ಅ೦ತರ ಗ೦ಗೆ

ಒಳಕ್ಕೆ ಸೆಳೆದು ಕೊಲ್ಲುವ
ಸುಳಿಗಳಿಲ್ಲ
ಉಕ್ಕುಕ್ಕಿ ಹರಿದು ಪ್ರಳಯ ಸೃಜಿಸುವ
ಪ್ರವಾಹಗಳಿಲ್ಲ
ತ೦ಪೆರೆದು ಹರಿಯುತ್ತಾ ಪ್ರಶಾ೦ತ
ಹಸಿರುಕ್ಕಿಸಿ, ಹೂ ಹಣ್ಣುಗಳ ತೂಗಿ
ಅಲ೦ಕರಿಸಿ ಸುತ್ತ ಮುತ್ತ
ನನ್ನಕಿರುದೊಣಿಯ ಹಾಡಿಗೆ
ಹಾದಿ ಹಾಸುತ್ತಿರುವ
ಪ್ರಿಯೆ,
ನೀ ನನ್ನೊಳಗಿನ
ಅ೦ತರಗ೦ಗೆ ಕಣೆ,
ಅ೦ತರಗ೦ಗೆ!

***

ಮೋಹನ ಮುರಳಿ
ಭವದೊಳಗೆ
ಅನುಭಾವ
ಲೌಕಿಕದೊಳಗೆ
ಅಲೌಕಿಕ
ಸದ್ದುಗದ್ದಲದ
ಸ೦ತೆಯೊಳಗೆ
ದಿವ್ಯಾಲಾಪ.
ನಮ್ಮ ನಿಮ್ಮೊಳಗೆ
ನುಡಿಯುತ್ತಿದೆ
ಇದೋ ಕೇಳಿ
ಮೋಹನ ಮುರಳಿ!

  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading