ಉಡುಪಿಯ ಸ್ಪೈಡರ್ ಮ್ಯಾನ್ ರವಿ ಕಟಪಾಡಿಪರದೆ ಮೇಲೆ ಡೈಲಾಗ್ ಹೊಡೆಯೋ  ಹೀರೋಗಿಂತ ನಿಜವಾದ ಹೀರೋ ರವಿ ಕಟಪಾಡಿ ಅವರು. ತಾವು ನೋವನ್ನುಂಡು ಬೇರೆಯವರಿಗೆ ಪ್ರೀತಿಕೊಡುವ ಮಹಾನುಭಾವ. ಅವರಿಗೆ ಆ ಭಗವಂತ ಆಯಸ್ಸು, ಆರೋಗ್ಯ, ಯಶಸ್ಸು ನೀಡಲಿ ಎಂದು ಆಕೃತಿ ಕನ್ನಡ ಹಾರೈಸುತ್ತದೆ. 

ಹೀರೋ, ದೊಡ್ಡದಾದ ಪರದೆ ಮೇಲೆ ಎಮೋಷನಲ್ ಡೈಲಾಗ್ ಹೊಡಿತ್ತಿದ್ರೆ ಚಪ್ಪಾಳೆಯ ಸುರಿ ಮಳೆಯೇ ಬೀಳುತ್ತೆ. ಬರಿ ಡೈಲಾಗ್ ಗೆ  ಫೀದಾ ಆಗಿ ಆ ಹೀರೋನ್ನ ತಮ್ಮ ಹೃದಯದಲ್ಲಿಟ್ಟುಕೊಂಡು ಪೂಜಿಸೋ ಸಾಕಷ್ಟು ಜನರಿದ್ದಾರೆ. ಆದರೆ ಯಾವ ಎಮೋಷನಲ್ ಡೈಲಾಗ್ ಹೊಡೆಯದೇ, ಆಡಂಬರವಿಲ್ಲದೆ, ಸರಳವಾಗಿ ಬದುಕುವ ಮತ್ತು ನೋವಿನಲ್ಲಿರುವ ಮಕ್ಕಳ ಪಾಲಿಗೆ ಆಶಾಕಿರಣದಂತ್ತಿರುವ ಈ ಹೀರೋ,  ಮೈಮೇಲೆ ಅಚ್ಛೇ ಹಾಕಿಸ್ಕೊಂಡು, ಮನೇಲ್ಲಿ ಅವರ ಫೋಟೋ ಇಟ್ಕೊಂಡು ಪೂಜಿಸಿದರೂ ಕೂಡಾ ಕಮ್ಮಿಯೇ. ಏಕೆಂದರೆ ಈ ಹೀರೊ ಯಾವ ತೋರಿಕೆಗಾಗಿ ಕೆಲಸ ಮಾಡುವನ್ನಲ್ಲ. ಕಷ್ಟ ಅಂತ ಬಂದ ೨೮ ಮಕ್ಕಳ ತಾಯಂದಿರ ಕಣ್ಣೀರು ಒರೆಸಿದ ಮಹಾನುಭಾವ. ಅವರ ಹೆಸರೇ ಉಡುಪಿಯ ಸಮಾಜಸೇವಕ ರವಿ ಕಟಪಾಡಿ ಅವರು.

This slideshow requires JavaScript.

ವೃತ್ತಿಯಲ್ಲಿ ಮನೆಕಟ್ಟುವ ಕೂಲಿಕಾರನಾದರೂ ಹೃದಯವಂತಿಕೆಯಲ್ಲಿ ಶ್ರೀಮಂತ. ಸಣ್ಣ ಕಂದಮ್ಮನ ಪಾಲಿಗೆ ನಿಜವಾದ ಸ್ಪೈಡರ್ ಮ್ಯಾನ್. ರವಿ ಅವರನ್ನು ಉಡುಪಿಯ ಸ್ಪೈಡರ್ ಮ್ಯಾನ್ ಎಂತಲೇ ಕರೆಯುತ್ತಾರೆ. ೨೦೧೩ ರಲ್ಲಿ ಅನ್ವಿತಾ ಎನ್ನುವ ಮಗು, ತಾಯಿಯ ಹೊಟ್ಟೆಯಿಂದ ಹೊರಕ್ಕೆ ತಗೆಯುವಾಗ, ವೈದ್ಯರು ಮಗುವಿನ ಕೈ ಹಿಡಿದು ಎಳೆದಿದ್ದರಿಂದ ಮಗುವಿನ ಬಲಗೈ ಸ್ವಾದೀನ ಕಳೆದುಕೊಂಡಿತ್ತು. ಅದರ ಚಿಕಿತ್ಸೆಗೆ ಒಂದು ಲಕ್ಷ ರೂಪಾಯಿ ಅವಶ್ಯಕತೆ ಇತ್ತು. ತಾಯಿಯ ಅಸಹಾಯಕತೆಯನ್ನು ಟಿವಿಯಲ್ಲಿ ನೋಡಿದಾಗ ರವಿಯವರ ಕಣ್ಣಲ್ಲಿ ನೀರು ಬಂತು. ಯಾರೋ ಮಾಡಿದ ತಪ್ಪಿಗೆ ಆ ಪುಟ್ಟ ಮಗು ಎದುರಿಸುತ್ತಿದ್ದ ಕಷ್ಟವನ್ನು ನೋಡಿ ಅವರ ಮನಸ್ಸು ಪೇಚಾಡಿತು. ಹೇಗಾದರೂ ಆ ಮಗುವಿನ ಸಹಾಯಕ್ಕೆ ನಿಲ್ಲಬೇಕೆಂದು ನಿರ್ಧಾರ ಮಾಡಿದರು. ಆದರೆ ಅದು ಹೇಗೆ ? ಎನ್ನುವ ಪ್ರಶ್ನೆ ಉಲ್ಭಣವಾಯಿತು. ಕೂಲಿಕಾರನಾದ ರವಿಯವರ ದಿನದ ಕೂಲಿಯೇ ೩೫೦ ರೂ.ಯಿಂದ ೪೫೦ ರೂಪಾಯಿ. ಅದರಲ್ಲಿ ಒಂದು ಲಕ್ಷ ರೂಪಾಯಿ ಜೋಡಿಸುವುದು ದೊಡ್ಡ ಸವಾಲಾಗಿತ್ತು.

ಆಗ ಅವರ ನೆನಪಿಗೆ ಬಂದದ್ದು ಪ್ರತಿ ವರ್ಷದ ಕೃಷ್ಣಾಷ್ಠಮಿ. ಅಂದಿನ ದಿನ ವೇಷಧಾರಿಗಳು ಬೇರೆ ಬೇರೆ ವೇಷವನ್ನು ಧರಿಸಿ ನಗರದ ತುಂಬೆಲ್ಲ ಪ್ರದರ್ಶನ ನೀಡುತ್ತಾರೆ. ಅವರಂತೆ ನಾನು ಕೂಡ ವೇಷವನ್ನು ಧರಿಸಿ ಹಣ ಸಂಗ್ರಹ ಮಾಡಿ ಆ ಮಗುವಿಗೆ ನೆರವು ನೀಡಬಹುದು ಎನ್ನುವ ಯೋಚನೆ ಬಂತು. ಅದನ್ನು ಅವರ ತಂದೆಯ ಬಳಿ ಚರ್ಚಿಸಿದಾಗ ‘ನೀನೂ ಮಾಡು. ಯಾರೇ ಎಷ್ಟೇ ಹಣ ಕೊಡಲಿ ಸಂತೋಷದಿಂದ ಸ್ವೀಕರಿಸು, ಯಾರ ಮನಸ್ಸಿಗೆ ನೋವುಂಟು ಮಾಡಬೇಡ’ ಎನ್ನುವ ಒಂದು ಕಿವಿ ಮಾತೊಂದನ್ನು ಅವರ ತಂದೆ ಹೇಳಿದರು. ತಂದೆಯವರ ಮಾತನ್ನು ಗಮನದಲ್ಲಿಟ್ಟುಕೊಂಡು ಗೆಳೆಯರ ಸಹಾಯದಿಂದ ಮೊದಲ ವರ್ಷ ಮಾನ್ಸ್ಟರ್ ವೇಷವನ್ನು ಧರಿಸಿ ಹಣ ಸಂಗ್ರಹ ಮಾಡಿದರು. ಅಂದು ಬಂದ ಹಣವನ್ನು ಆ ಮಗುವಿನ ತಾಯಿ ಕೊಡಲು ಮುಂದಾದಾಗ ಆ ತಾಯಿಯ ಕಣ್ಣಲ್ಲಿ ನೀರು ತುಂಬಿ ಬಂತು. ಏಕೆಂದರೆ ಆ ಹೆಣ್ಣುಮಗಳು ಸಹಾಯ ಎಂದರೆ ೨೦,೦೦೦ ರೂಪಾಯಿಯಷ್ಟೇ ಮಾಡಬಹುದು ಎಂದು ಅಂದುಕೊಂಡಿದ್ದರು, ಆದರೆ ರವಿಯವರು ಅವರ ಕೈಯಲ್ಲಿಟ್ಟ ಮೊತ್ತ ೧,೦೪,೮೧೦ ಲಕ್ಷ ರೂಪಾಯಿ. ಆ ಹಣದಿಂದಲ್ಲೇ ಮಗುವಿನ ಚಿಕಿತ್ಸೆ ಆಯಿತು. ಆ ಕೈಯಿಂದಲೇ ಅನ್ವಿತಾ ಕೈಮುಗಿದು ಕೃತಜ್ಞತೆ ಹೇಳುವಾಗ ಅವರ ಕಣ್ಣಲ್ಲಿ ಆನಂದದ ಭಾಷ್ಪ ಸುರಿಯಿತು.ಹೀಗೆ ಶುರುವಾದ ರವಿಯವರ ಸಮಾಜ ಸೇವೆಯೂ  ಮನೆಯವರ ಸಂಪೂರ್ಣ ಸಹಕಾರದಿಂದ ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಕೃಷ್ಣಾಷ್ಟಮಿಯ ದಿನದಂದು ತಪ್ಪದೆ ವೇಷವನ್ನು ಧರಿಸುತ್ತಾರೆ. ಬರುವ ಆ ಹಣದಲ್ಲಿ ಒಂದು ರೂಪಾಯಿಯನ್ನು ತಮಗಾಗಿ ಬಳಸಿಕೊಳ್ಳದೆ ಅನಾರೋಗ್ಯದಲ್ಲಿರುವ ಬಡ ಮಕ್ಕಳಿಗೆ ಸಹಾಯ ಮಾಡುತ್ತಾರೆ. ದುರಾದೃಷ್ಟವೆಂದರೆ ಇಂದು ಅವರ ತಂದೆ -ತಾಯಿ ಇಲ್ಲ. ಅಣ್ಣ ಹಾಗು ಅತ್ತಿಗೆಯೊಂದಿಗೆ ನೆಲೆಸಿದ್ದಾರೆ. ಪ್ರತಿವರ್ಷ ಮಕ್ಕಳ ಅನಾರೋಗ್ಯಕ್ಕೆ ಸಂಬಂಧಿಸಿ ಹಣದ ನೆರವನ್ನು ಕೋರಿ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಅವರ ಮನೆಗೆ ಬರುತ್ತವೆ.

೧೫ ಜನ ಗೆಳೆಯರ ಸಹಾಯದಿಂದ ಬಾಲಿವುಡ್ ಸಿನಿಮಾದ ರೀತಿಯಲ್ಲಿ ವೇಷಧಾರಿಸುತ್ತಾರೆ. ಅವರ ವೇಷ ನೋಡುಗರಿಗೆ ಹಬ್ಬವಾದರೆ ರವಿಯವರಿಗೆ ದೈಹಿಕವಾಗಿ ನೋವು ಕೊಡುತ್ತದೆ. ಆ ವೇಷ ಧರಿಸಲು ಸುಮಾರು ೧೫ ತಾಸು ಬೇಕು. ಅದನ್ನು ಧರಿಸಿದ ಮೇಲೆ ಬಿಸಿಲು, ಬೆವರು, ಊಟವೆನ್ನದೆ ೩೬ ತಾಸುಗಳನ್ನು ಕಳೆಯಬೇಕು. ಮೂರೂ ದಿನ ರವಿಯವರು ಅನ್ನ, ಆಹಾರವಿಲ್ಲದೆ ನೀರು, ಎಳೆನೀರಿನಲ್ಲೇ ಕಳೆಯುತ್ತಾರೆ. ಮತ್ತು ಈ ವೇಷವನ್ನು ತಗೆಯಲು ಸುಮಾರು ೨೦ ತಾಸುಗಳು ಬೇಕಾಗುತ್ತದೆ. ತಗೆಯುವಾಗ ರವಿಯವರ ಮೈಯೆಲ್ಲಾ ಸುಟ್ಟ ಗಾಯಗಳಾಗಿರುತ್ತವೆ. ಅದಕ್ಕೆ ಕಾರಣ ಅನೈಸರ್ಗಿಕ ಬಣ್ಣಗಳ ಬಳಕೆ, ಗಮ್ ಗಳು ಚರ್ಮವನ್ನು ಭಾಗಶಃ ಸುಟ್ಟಿ ಹಾಕಿರುತ್ತವೆ. ಆದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಗುತ್ತ ಮತ್ತೆ ವೇಷ ಧರಿಸುತ್ತಾರೆ. ಅದರಲ್ಲಿ ಮಾನ್ಸ್ಟರ್, ಏಲಿಯನ್ ಗಳು ಇತ್ಯಾದಿ ಇವೆ. ಕೊರೋನಾ ಸಂದರ್ಭದಲ್ಲಿ ಜನ ಜಾಗೃತಿಗಾಗಿ ಡ್ರ್ಯಾಗನ್ ವೇಷವನ್ನು ಧರಿಸಿದ್ದರು.

ಫೋಟೋ ಕೃಪೆ :

ಹಾಲಿವುಡ್ ಸ್ಟೈಲ್ ನಲ್ಲಿ ವೇಷಧರಿಸಿ ಜನರ ಗಮನ ಸೆಳೆಯುತ್ತಾರೆ. ೫ ರೂಪಾಯಿಂದ ೫೦೦೦ರೂಪಾಯಿಯವರೆಗೂ ಜನ ಅವರ ಸಹಾಯ ನಿಧಿಗೆ ಹಣ ನೀಡುತ್ತಾರೆ. ಜನವರಿ ೧೫, ೨೦೨೧ ರಲ್ಲಿ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೇಗಾ ಕ್ರೋರಪತಿ ಯಲ್ಲಿ ರವಿಯವರು ಭಾಗವಹಿಸಿದ್ದರು. ಅಮಿತ್ ಬಚ್ಚನ್ ಅವರು ಅವರ ಕೆಲಸಕ್ಕೆ ಮೆಚ್ಚುಗೆ ಪಡಿಸಿದಷ್ಟೇ ಅಲ್ಲ, ‘ನಿಮ್ಮ ಮುಂದೆ ನಾವು ಸಣ್ಣವರಾಗಿ ಬಿಟ್ಟಿದ್ದೇವೆ’ ಎಂದು ಹೇಳಿದಾಗ ರವಿಯವರು ‘ನೀವು ಸಣ್ಣವರಲ್ಲ… ನನ್ನ ವೃತ್ತಿ ಸಣ್ಣದು’ ಎಂದು ಮುಗ್ಧತೆಯಿಂದ ಉತ್ತರಿಸಿದರು. ಅವರು ಕೌನ್ ಬನೇಗಾ ಕ್ರೋರಪತಿಯಲ್ಲಿ ಗಳಿಸಿದ ೨೫,೦೦,೦೦೦ ಹಣದಿಂದ ೧೨ ಅನಾರೋಗ್ಯ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಅವರ ನಿಸ್ವಾರ್ಥ ಸೇವೆಗೆ ೨೦೧೭ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಯುವ ಸೇವಾ ಪ್ರಶಸ್ತಿ, ೨೦೨೦ ರಲ್ಲಿ ಮೂಲತ್ವ ವಿಶ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW