ಒಂದು ಸಿನಿಮಾ ಕತೆ – ಡಾ. ಕೃಷ್ಣವೇಣಿ. ಆರ್.ಗೌಡ

ಬಳೆ ತೊಡುವ ಕೈ ಬಂದೂಕು ಹಿಡಿಯುವ ಹೆಣ್ಣುಮಕ್ಕಳ ಕತೆಯಿದು. saand ki aankh ಸಿನಿಮಾ ಕುರಿತು ಡಾ. ಕೃಷ್ಣವೇಣಿ. ಆರ್.ಗೌಡ ಅವರು ಬರೆದ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇಂದು ಬೆಳಿಗ್ಗೆ ಎದ್ದು ಗಾಳಿ ಹೃದಯವ ತಾಕಿ ಕಾಳಿಕಾ ದೇವಿಯನು ಸ್ಮರಿಸುತ್ತ ಭಾರತದ ರಾಜಕೀಯಕ್ಕೆ ಮಾರು ಹೋಗದೆ ಒಂದೊಂದು ಹೆಣ್ಣಿನ ಮಾನವೀಯ ಮೌಲ್ಯದ ಹೃದಯದ ಹಿಂದಿನ ನೋವು ನೆನಪು ಮಾಡಿ, ಮಧ್ಯಾಹ್ನ ಯೌಟ್ಯೂಬ್ ನೊಳಗೆ ಒಂದು ಸಿನಿಮಾ ನೋಡಿದೆ ಅದರ ಹೆಸರು “saand ki aankh” ಅಂದರೆ ಗೂಳಿ ಕಣ್ಣು ಎಷ್ಟು ಮನ ಮಿಡಿಯಿತು ಎಂದರೆ ಎಷ್ಟೋ ಹೆಣ್ಣು ಮಕ್ಕಳು ಯಾವ ಯಾವ ಕಾರಣಕ್ಕೆ ಬಲಿಯಾಗಿ ಹೋದ ಈ ಜಗದೊಳಗೆ ಈ ಸಿನಿಮಾ ನೈಜ ಘಟನೆಯ ಆಧಾರಿತ ಸಿನಿಮಾ ಇದಾಗಿತ್ತು.

ಬಳೆ ತೊಡುವ ಕೈ ಬಂದೂಕು ಹಿಡಿದು ಇಡೀ ಊರನ್ನೇ ಕೊಂಡಾಡುವ ಹಾಗೆ ಮಾಡುತ್ತೆ. ಶೂಟಿಂಗ್ ನಲ್ಲಿ ಶೂಟಿಂಗ್ ಎನ್ನುವ ಪ್ರಾಸ ಕ್ಕೆ ಕೊಡುವ ಪಾತ್ರ ನಿಜಕ್ಕೂ ಅತಿ ಅದ್ಭುತ.. ಮತ್ತು ರಿಯಲ್ ಶೂಟರ್ ಗಳ ಇರುವಿಕೆಯನ್ನು ಕೊನೆಗೆ ತೋರಿಸಲಾಗುತ್ತದೆ.

ಹೌದು 1999 ರಲ್ಲಿ ವಯಸ್ಸು ಆದರೂ ಮನಸ್ಸಿಗೆ ಛಲಕ್ಕೆ ವಯಸ್ಸಿಲ್ಲ ಎನ್ನುವುದನ್ನು ಈ ಸಿನಿಮಾ ಎತ್ತಿ ಹಿಡಿಯುತ್ತೆ.. ನೈಜ ಆಧಾರಿತ ಮಹಿಳೆಯರ ಅದರಲ್ಲೂ ಒಂದೇ ಮನೆಯ ವಾರಗಿತ್ತಿಯರ ಸಾಧನೆಯನ್ನು ಗೂಳಿ ಕಣ್ಣಿನ ಮೂಲಕ ಹೆಣಿದು ಎಲ್ಲಾ ಮಹಿಳೆಯರಲಿ ಧೈರ್ಯವನ್ನು ತುಂಬಿ ಹುರಿದುಂಬಿಸಿ ಮನೆಯ ಮಕ್ಕಳು ಓದಿ ಸರ್ಕಾರಿ ನೌಕ್ರಿ ತೆಗೆದು ಕೊಳ್ಳಲು ಅವರು ಮಾಡುವ ಪ್ರಯತ್ನ ಸಾಹಸ ನಾವೆಲ್ಲಾ ಚಪ್ಪಾಳೆ ಹೊಡಿಯುವಂತಹುದು.

ಫೋಟೋ ಕೃಪೆ : google

80 ರ ದಶಕದ ಕುಟುಂಬ ನಿಯಂತ್ರಣವೊಂದು ಜಾರಿಗೆ ಬಂದಾಗ ಕೆಲವರು ಪರಿಹಾಸ್ಯಕ್ಕೆ ತೆಗೆದುಕೊಂಡು ನಿರೋಧ ಎನ್ನುವ ಮಜಲನ್ನು ಪೀಪಿಗಳ ಮೂಲಕ ಗಾಳಿಗೆ ಹಾರಿಸುತ್ತಾರೆ. ಈ ಸಿನಿಮಾ ದೊಳು ಅದನು ಕಂಡಾಗ ಬೇಜಾರ್ ಆಗುವುದು. ಅಲ್ಲದೇ ಹೆಣ್ಣು,,ಬರೀ ಮಕ್ಕಳು ಹಡೆದು ಮನೆಯೊಳಗೇ ಕುಳ್ಳು ತಟ್ಟುತ್ತಾ, ಹೊಲದೊಳು ಪೈರು ಕತ್ತರಿಸುತ್ತ, ಮನೆಯೊಳು ಅಡುಗೆ ಮಾಡಿ ಮಕ್ಕಳನ್ನು ನೋಡಿಕೊಂಡು ವಯಸ್ಸು ಕಳೆದು ಇದರಲ್ಲಿ ಜೀವನ ಸಾಗಿಸುವಾಗ ಊರಿನಲಿ ಸರ್ಕಾರಿ ನೌಕರಿ ತ್ಯಜಿಸಿ ಊರನ್ನು ಉದ್ಧಾರ ಮಾಡ್ಬೇಕು ಎಂದು ಒಬ್ಬ ಡಾಕ್ಟರ್ ಬಂದು ಶೂಟಿಂಗ್ ಸೆಂಟರ್ ತೆಗೆದು ನಿಮ್ಮ ನಿಮ್ಮ ಮಕ್ಕಳನ್ನು ಕಳಿಸಿಕೊಡಿ ಎಂದಾಗ ಬಂದೂಕು ಎನ್ನುವುದು ಹೆಣ್ಣು ಮಕ್ಕಳ ಆಟಾ ಸಾಮಾನು ಅಲ್ಲ ಗಂಡಸರ ಆಭರಣ ಎಂದು ಮನೆಯ ಯಜಮಾನ ವ್ಯಂಗ್ಯ ಸೂಚಿಸುತ್ತಾನೆ ಆಗ ಮನೆಯ ಹೆಣ್ಣು ಮಕ್ಕಳೇ ಅದರಲ್ಲೂ ವಯಸ್ಸಾದ ಮುದುಕಿಯರು ಹೆಣ್ಣು ಮಕ್ಕಳಿಗೆ ಉತ್ತೇಜನ ನೀಡಿ ತಾವು ಅವರ ಜೊತೆಗೆ ಹೋಗಿ ಕಲಿಸುತ್ತಿರುವಾಗ ಅವರಿಗೆ ಗೊತ್ತಾಗದ ಹಾಗೆ ಬಂಧೂಕು ಹಿಡಿದು ಗುರಿಯಿಟ್ಟು ಹೊಡೆದಾಗ ಆದ ಖುಷಿಗೆ ಅವರು ಹೇಳುವುದು ಇಷ್ಟು ದಿನ ನೊಂದ ಮಾತು ಈಗ ಗುರಿಯಾಗಿ ಹೊಡೆತದ ಮುಕಾಂತರ ಹೊರಗಡೆ ಬಂದಿದೆ ಎನ್ನುತ್ತಾ ಅಂದಿನಿಂದ ಅವರು ನಾಲ್ಕು ಗೋಡೆ ಯ ಚೌಕಟ್ಟಿನಿಂದ ಹೊರಬಂದು ದೆಹಲಿ, ಮುಂಬೈ, ಕಲ್ಕತ್ತಾ. ಹೀಗೆ ಹಲವು ಕಡೆಗೆ ಗುರಿಯನ್ನಿಟ್ಟು ಹೊಡೆದು ಬೆಳ್ಳಿ, ಬಂಗಾರದ ಪದಕಗಳನ್ನು ಹಾಕಿಕೊಳ್ಳುತ್ತ ಸಂತಸದ ದಿನ ಕಳೆಯುವುದು ಈ ಸಿನಿಮಾದ ಅಂಶ. ಪದಕ, ಫಲಕಗಳಿಗೋಸ್ಕರ ರಾಜಕೀಯ ಮಾಡುವ ಪರ್ಯಾಯದೊಳು ನಿಷ್ಕಲ್ಮಶವಿಲ್ಲದೇ ಪದಕ ಧರಿಸುವ ಪರಿ ನಮಗೂ ಖುಷಿ ಕೊಡುತ್ತೆ. ಮನೆಯ ಗಂಡಸರಿಗೆ ಗೊತ್ತಾಗಿ ಪದಕಗಳನ್ನು ಬಿಸಾಡಿ ಪಂಚಾಯತಿ ಹಾಕಿ ಮಾತಾಡುವಾಗ ಬಂಧೂಕಿನಿಂದ ಬಾಯಿ ಮುಚ್ಚಿಸುವ ಪರಿ ನಿಜಕ್ಕೂ ಘಮ್ಯ.. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎನ್ನುವುದಕ್ಕಿಂತ ಭರತ ನೆಲದ ನಾರಿಯರ ಗುಣ ಅತಿ ಅದ್ಭುತ ಎಂದು ಹೇಳಲು ಬಯಸುವೆ…

ನಾನು ಇನ್ನೊಂದು ಮಾತನ್ನು ಇಲ್ಲಿ ಸೂಚಿಸುವೆ ಡಾಕ್ಟ್ರೇಟ್ ಪಡೆದಿರುವವರು, ಡಾಕ್ಟರ್ ಆದವರು, ವಕೀಲರು, ಪೊಲೀಸ್ ಆದವರು ಇವರೆಲ್ಲರ ಕಷ್ಟವನು ಅಕ್ಕ ಪಕ್ಕದ ಮನೆಯಿಂದ ತಿಳಿದಿರುವೆ ಯಾಕೆಂದರೆ ನಾನೂ ಕೂಡ ಒಬ್ಬ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವಳು. ಒಂದೊಂದು ಬಾಡಿಗೆ ಮನೆಗೆ ಹೋದಾಗ ಒಂದೊಂದು ರೀತಿಯ ಕಷ್ಟದ ರಿವಾಜುಗಳನು ಕಂಡಿದ್ದೇನೆ. ಕಣ್ಣಾರೆ ಕಂಡು ಮನ ನೊಂದಿದ್ದೇನೆ… ಓದು ಒಂದು ಕಡೆ ಆದರೆ ನೋವು ಒಂದು ಕಡೆಗೆ, ಹೊರನೋಟ ಒಂದು ಕಡೆ ಆದರೆ ಒಳ ರೀತಿ ಸಂಕಟ ಒಂದು ಕಡೆ ಇದರಲ್ಲಿ ನಾನೂ ಕೂಡ ಒಬ್ಬಳು.

ಫೋಟೋ ಕೃಪೆ :google

ಈ ಗೂಳಿ ಕಣ್ಣಿನ ಚಿತ್ರದಲ್ಲಿ ಇಂಗ್ಲೀಷು ಅರ್ಥ ಮಾಡಿಕೊಂಡು ತನ್ನದೇ ಬುದ್ದಿ ಮತ್ತೆ ಇಂದ ನಾಲ್ಕು ಗೋಡೆ ಆಚೆಯಿಂದ ಹೊರಜಗತ್ತಿಗೆ ಬಂದು ಕೂಲಿಂಗ್ ಗ್ಲಾಸ್ ಹಾಕಿ ಬಣ್ಣದ ಲೋಕವನ್ನು ಸಂತೋಶಿಸುವ ಮನಸು ಹೇಳಲಾಗದಷ್ಟು. ಅಲ್ಲದೇ ಕೆಲವು ಪಡ್ಡೆ ಹುಡುಗರು ಹಾಸ್ಯ ಮಾಡಿ ನಂತರ ಆಟೋಗ್ರಾಫ್ ಕೇಳಿದಾಗ ತಮ್ಮ ಹೆಬ್ಬೆಟ್ಟಿನಿಂದ ಟೀ ಶರ್ಟ್ ಗಳ ಮೇಲೆ ಗುರುತು ಹಾಕಿದಾಗ ಅವರಿಗಾಗುವ ಆನಂದ ಅಷ್ಟಿಷ್ಟಲ್ಲ.. ತಲೆ ಮೇಲೆ ಸೆರಗು ಹೊದಿಸಿಕೊಳ್ಳುವುದು ಮರ್ಯಾದೆಯ ಸಂಕೇತವಾದರು ಸೆರಗಿನೊಳಗಿನ ಹೃದಯದ ಕೆಂಡ ಗುರಿ ಮುಟ್ಟಿ ಹೊಡೆಯುವ ದೃಶ್ಯ ನಾವೆಲ್ಲಾ ನೋಡುತ್ತಲೇ ಚಪ್ಪಾಳೆ ಹೊಡೆಯುವ ಹಾಗಿದೆ… ಕೊನೆಗೆ ತಾಳೀಕಟ್ಟಿದ ಗಂಡಂದಿರು ಕೂಡ ಅವರ ಸೊಕ್ಕನ್ನು ಮರೆತು ಇವರೊಡನೆ ಸಂತೋಷದಲ್ಲಿ ಪಾಲ್ಗೊಂಡು ಕುಣಿಯುತ್ತಲೇ ಚಿತ್ರ ಮುಗಿಯುತ್ತೆ…. ಮತ್ತು ನಮ್ಮೊಳಗೇ ಸಂತೋಷ ತುಂಬಿ ಏನೋ ಒಂತರ ಎತ್ತರದ ಜಾಗಕ್ಕೆ ತಳ್ಳುತ್ತದೆ.

ಹೌದು 18 ನೇ ಶತಮಾನದಲ್ಲಿಯೇ ಆಂಗ್ಲ ಲೇಡಿ ಕ್ಲಾರಾ ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಿ ಗೆಲ್ಲುವದರಿಂದ ಆರಂಭಗೊಂಡ ಅಂತರಾಷ್ಟ್ರೀಯ ಮಹಿಳಾ ದಿನ ಇಂದಿನ ತನಕ ವಿವಿಧ ರೀತಿಯಲಿ ಆಚರಿಸಲ್ಪಡುತಿದೆ.. ಇನ್ನೇನು ಮಾರ್ಚ್ 8 ಹತ್ತಿರ ಬರುತ್ತಿದೆ. ಆದರೆ ನನ್ನ ಪ್ರಕಾರ ತಾರೀಕಗಳೇ ಹರ್ಷೋದ್ವೆಗಗಳಲ್ಲ ಯಾವತ್ತು ತಮ್ಮ ಹಕ್ಕು ಚಲಾಯಿಸಿ ತಲೆ ಎತ್ತಿ ಮಾತಾಡಿ ಒಳ್ಳೆ ಚಲಾವಣೆಗೋಸ್ಕರ ಪ್ರತಿಭಟಿಸಿ ಮುನ್ನಡೆದಾಗ ಅದೇ ಅವಳಿಗೆ ಅಂತಾರಾಳದ ಮನದ ಎತ್ತರದ ದಿನವಾಗಿರುತ್ತೆ ಯಾಕೆಂದರೆ ಸಮಾಜದೊಳು ಉದಾಹರಣೆಗೆ
ಪಣಿಯಮ್ಮ, ಸಾವಿತ್ರಿಬಾಯಿ ಪುಲೆ, ಗಂಗೂಬಾಯಿ ಖಾತೆವಾಡಿ ಮಕ್ಕಳ ಭವಿಷ್ಯದ ಉದ್ಧಾರಕ್ಕಾಗಿ, ಶಿಕ್ಷಣಕ್ಕಾಗಿ, ಮೌಢ್ಯತೆಯ ಅಳಿವಿಗಾಗಿ ದುಡಿದು ಹೋರಾಡಿ ಮುಂದೆ ಬಂದಾಗ ಅದರ ಹಿಂದಿರುವ ಸಂಕಟದ ಅರಿವನ್ನು ಅರಿತಾಗ ಆಗುವ ದುಃಖ ಅಷ್ಟಿಷ್ಟಲ್ಲ.. ಇವರೆಲ್ಲರ ಮೌಲ್ಯ ಎಲ್ಲವನು ಮೀರಿದ್ದು ಮತ್ತು ಅತ್ಯಂತ ಅಮೂಲ್ಯವಾದದ್ದು ನಾವು ಇದನ್ನು ಬರವಣಿಗೆಯಲ್ಲೋ, ಸಿನಿಮಾ ಜಗತ್ತಿನಲ್ಲೋ, ಅಥವಾ ಆಚರಣೆಯ ವಿಚಾರದಲ್ಲೋ ಕಂಡಾಗ ಭಾರತ ನೆಲ ಟೊಳ್ಳಲ್ಲ.. ಇಂತಹ ಗಟ್ಟಿತನ ಇಟ್ಟಿಗೆಯು ಸೂಚಿಸಿದ ಲಕ್ಷಣದ ಗ್ರಂಥಗಳೆಂದರು ತಪ್ಪಿಲ್ಲ.., ಶಕ್ತಿಭರಿತವಾದ ಮೌಲ್ಯಯುತ ನೈಜ ಅಂಶ “saand ki aank “ಎಂದು ಹೇಳುವೆ…..


  • ಡಾ. ಕೃಷ್ಣವೇಣಿ. ಆರ್.ಗೌಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW