‘ಸರಳ ಸುಂದರಿ’ ಕವನ – ಶಿವದೇವಿ ಅವನೀಶಚಂದ್ರ

 ಶಿವದೇವಿ ಅವನೀಶಚಂದ್ರ ಅವರ ಚಿತ್ರಕ್ಕೊಂದು ಕವನವನ್ನು ಬರೆದಿದ್ದಾರೆ, ಕವನದ ಜೊತೆಗೆ ಅವರೇ ಫೋಟೋ ಕ್ಲಿಕ್ ಮಾಡಿರುವ ಚಂದದ ಹೂವಿನ ಚಿತ್ರ ಓದುಗರ ಮುಂದಿದೆ ತಪ್ಪದೆ ಮುಂದೆ ಓದಿ…

ನೀನೊಂದು ಚಳಿಗೂ ಮುದುಡದ
ಹಿತವಾದ ನೆನಪು
ನೆನೆದಾಗಲೂ ಕಾಡುವ ನೆನಪುಗಳ
ಸಂತೈಸುವ ಬಿಸುಪು

ನಿನಗೆ ಗೊತ್ತಿಲ್ಲದೇನೆ
ನಾನೇಕೆ ಬಿದ್ದೆ ನಿನ್ನೆದೆಗೆ
ಅದನೇ ಮೆಚ್ಚಿ ಮುತ್ತಿಕ್ಕಿ
ಬಚ್ಚಿಟ್ಟುಕೊಂಡಿರುವೆಯಲ್ಲ ಹೀಗೆ

ಒಂಟಿಯಾದರೂ….
ನಿನ್ನ ಅಸ್ತಿತ್ವವೇ ಬಹು ಪುಳಕ
ನೆನೆಯಬಿಡುವುದಿಲ್ಲ ಬೇರೇನನೂ
ನಿನ್ನ ಸಾನ್ನಿಧ್ಯದ ಸದ್ದಿಲ್ಲದ ಜಳಕ

ತೋರಿಸಿದೆ ನೀ ನನ್ನ ಮೆಚ್ಚಿ
ಬೈತಿರಿಸಿಕೊಂಡವನೂ ಹೀಗೇ ಏನೋ
ಬಹುಬಗೆಯ ವರ್ಣಾಡಂಬರ ಸೆಳೆತಕೆ
ಮಾರುಹೋಗದೆ ಸರಳತೆಗೇ
ಬೊಗಸೆಯೊಡ್ಡಿದವನು…


  •  ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು,ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading