‘ಸಾರೋಣ ನಾವು’ ಕವನ – ಅಪ್ಪಯ್ಯ ಯಾದವ್

ಹಲವಾರು ಭಾಷೆಗಳು ಆಚಾರ ರೀತಿಗಳು ಅವರವರ ಧರ್ಮದಲಿ ಇರಲಿ ನಿತ್ಯ…ಕವಿ ಅಪ್ಪಯ್ಯ ಯಾದವ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಇಲ್ಲಿರಲಿ ಸಮಾನತೆ
ವಿದ್ಯಾಮಂದಿರದಲೇಕೆ ಪ್ರತ್ಯೇಕತೆ
ಕಲಿಯೋಣ ಜತೆಯಾಗಿ
ಮೆರೆಯೋಣ ಏಕತೆl

ಧರ್ಮ ಸಿದ್ದಾಂತಗಳು
ಅವರವರ ಮನೆಯೊಳಗೆ
ಕಲಿಕೆಯಂಗಳದೊಳೇಕೆ
ಧ್ವೇಷ ಕದಡುವಿರಿl

ಹಲವಾರು ಭಾಷೆಗಳು
ಆಚಾರ ರೀತಿಗಳು
ಅವರವರ ಧರ್ಮದಲಿ
ಇರಲಿ ನಿತ್ಯl

ಒಂದಾಗಿ ಮುನ್ನಡೆವ
ಭಾರತವು ನಮದೆಂದು
ಸಾರುತಲಿ ಅಡಿಇಡುವ
ಇದುವೆ ಸತ್ಯl

ಶಾಲೆ ಕಾಲೇಜುಗಳು
ಹೂದೋಟದಂತಿರಲಿ
ಅಲ್ಲಿರಲಿ ಬಗೆಬಗೆಯ
ಬಿರಿವ ಹೂವುಗಳುl

ಜ್ಞಾನದೇಗುಲವಿದು
ಅಜ್ಞಾನಿಯಾಗದಿರಿ
ಎಳೆಮನಸುಗಳೊಳಗೇಕೆ
ಜಾತಿ ವೈರತ್ವl

ಶಾರದೆಯ ದೇಗುಲದಿ
ಸಂಘರ್ಷಯಾಕಾಗಿ
ಸಾರೋಣ ನಾವಿಂದು
ಭಾರತೀಯರೆಂದುll


  • ಅಪ್ಪಯ್ಯ ಯಾದವ್ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading